quad group countries
ಇದರ ಅರ್ಥ 'ಚತುರ್ಭುಜ ಭದ್ರತಾ ಸಂವಾದ'. ಇದು ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಬಹುಪಕ್ಷೀಯ ಒಪ್ಪಂದವಾಗಿದೆ. ಈ ಸಂಸ್ಥೆ ಮೂಲತಃ ಏಷ್ಯಾ-ಪೆಸಿಫಿಕ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವುದು ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವುದು ಇದರ ಉದ್ದೇಶ. 2007ರಲ್ಲಿ, ಅಂದಿನ ಜಪಾನ್‌ನ ಪ್ರಧಾನಿ ಶಿಂಜೊ ಅಬೆ QUAD ಅನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾಪವನ್ನು ಭಾರತ, ಯುಎಸ್ ಮತ್ತು ಆಸ್ಟ್ರೇಲಿಯಾ ಬೆಂಬಲಿಸಿದವು. 2019ರಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರು ಭೇಟಿಯಾದರು. ಇದರ ನಂತರ, ನಾಲ್ಕು ದೇಶಗಳ ಉನ್ನತ ನಾಯಕರ ನಡುವೆ ಮೊದಲ ಶೃಂಗಸಭೆಯನ್ನು 2021ರ ಮಾರ್ಚ್ 12ರಂದು ಆನ್‌ಲೈನ್ ಆಗಿ ಆಯೋಜಿಸಲಾಯಿತು.
ಆಡು ಭಾಷೆಯಲ್ಲಿ ಈ ನಾಲ್ಕು ದೇಶಗಳ ಕೂಟವನ್ನು ಕ್ವಾಡ್ (ನಾಲ್ವರ ಕೂಟ) ಎಂದು ಕರೆಯಲಾಗುತ್ತದೆ. ಕ್ವಾಡ್ ಸದಸ್ಯರ ಪ್ರಕಾರ ಈ ಕೂಟವನ್ನು ಅಂತರರಾಷ್ಟ್ರೀಯ ಕಾನೂನುಗಳ ಬಗ್ಗೆ ಗೌರವ ಹಾಗೂ ನಿಯಮ ಬದ್ಧ ಆಳ್ವಿಕೆಯ ಆಧಾರದಲ್ಲಿ ಕಟ್ಟಿಕೊಳ್ಳಲಾಗಿದೆ.