ಭಾರತ ಕೌನ್ಸಿಲ್ ಕಾಯ್ದೆ 1909
ಭಾರತ ಕೌನ್ಸಿಲ್ ಕಾಯ್ದೆ 1909 ಅನ್ನು ಮಾರ್ಲೆ ಮಿಂಟೋ ಸುಧಾರಣೆಗಳು ಎಂದು ಸಹ ಕರೆಯುತ್ತಾರೆ ಈ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಲಾರ್ಡ್ ಮಾರ್ಲೆ ಕಾರ್ಯದರ್ಶಿಯಾಗಿದ್ದರು ಮತ್ತು ಲಾರ್ಡ್ ಮಿಂಟೋ ಭಾರತದ ವೈಸರಾಯ ರಾಗಿದ್ದರು.
ಕಾಯ್ದೆಯ ಪ್ರಮುಖ ಲಕ್ಷಣಗಳು :
1. ಈ ಕಾಯ್ದೆಯ ಮೂಲಕ ಕೇಂದ್ರ ಶಾಸನಸಭೆ ಹಾಗೂ ಪ್ರಾಂತೀಯ ಶಾಸನ ಸಭೆಗಳ ಸದಸ್ಯರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾ ಇ ಯಿತು. ಕೇಂದ್ರ ಶಾಸನಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 68ಕ್ಕೆ ಹೆಚ್ಚಿಸಲಾಯಿತು. ಅದರಲ್ಲಿ 36 ಮಂದಿ ಸರ್ಕಾರಿ (Official) ಸದಸ್ಯರಾಗಿದ್ದರು ಹಾಗೂ 32 ಮಂದಿ ಸರ್ಕಾರೇತರ (Non-official) ಸದಸ್ಯರಾಗಿದ್ದರು. 32 ಮಂದಿ ಸರ್ಕಾರೇತರ ಸದಸ್ಯರ ಪೈಕಿ 5 ಮಂದಿ ನಾಮಕರಣಗೊಂಡ ಸದಸ್ಯರಾಗಿದ್ದು, ಉಳಿದವರನ್ನು ಪರೋಕ್ಷವಾಗಿ ಚುನಾಯಿಸಲಾಗುತ್ತಿತ್ತು. ಪ್ರಾಂತೀಯ ಶಾಸನ ಸಭೆಗಳ ಸದಸ್ಯರ ಸಂಖ್ಯೆ ಏಕರೂಪವಾಗಿರದೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನವಾಗಿತ್ತು.
2. ಕೇಂದ್ರ ಶಾಸನ ಸಭೆಯಲ್ಲಿ ಸರ್ಕಾರಿ ಸದಸ್ಯರು ಬಹುಮತದಲ್ಲಿದ್ದರು. ಆದರೆ ಪ್ರಾಂತೀಯ ಶಾಸನ ಸಭೆಗಳಲ್ಲಿ ಖಾಸಗಿ ಸದಸ್ಯರ (ಸರ್ಕಾರ ತರ ಸದಸ್ಯರ) ಬಹುಮತಕ್ಕೆ ಅವಕಾಶ ನೀಡಲಾಯಿತು.
3. ಶಾಸನ ಸಭೆಗಳ ಅವಧಿಯನ್ನು 3 ವರ್ಷಗಳಿಗೆ ನಿಗದಿಪಡಿಸಲಾಯಿತು.
4. ಶಾಸನ ಸಭೆಗಳ ಅಧಿಕಾರವನ್ನು ಹೆಚ್ಚಿಸಲಾಯಿತು. ಕೇಂದ್ರ ಹಾಗೂ ಪ್ರಾಂತೀಯ ಶಾಸನ ಸಭೆಗಳ ಸದಸ್ಯರಿಗೆ ಪೂರಕ ಪ್ರಶ್ನೆಗಳನ್ನು ಕೇಳುವ, ನಿರ್ಣಯಗಳನ್ನು ಮಂಡಿಸುವ ಹಾಗೂ ಆಯವ್ಯಯ ಪಟ್ಟಿಯನ್ನು ಕುರಿತು ಚರ್ಚಿಸುವ ಅಧಿಕಾರ ನೀಡಲಾಯಿತು.
5. ವೈಸ್‌ರಾಯ್‌ರವರ ಕಾರ್ಯ ನಿರ್ವಾಹಕ ಸಮಿತಿಗೆ ಒಬ್ಬ ಭಾರತೀಯನನ್ನು ನಾಮಕರಣ ಮಾಡಲು ಪ್ರಥಮ ಬಾರಿಗೆ ಅವಕಾಶ ನೀಡಲಾಯಿತು. ಸತ್ಯೇಂದ್ರ ಪ್ರಸಾದ್ ಸಿನ್ಹಾರವರು ವೈಸ್‌ರಾಯ್‌ರವರ ಕಾರ್ಯ ನಿರ್ವಾಹಕ ಸಮಿತಿಗೆ ಸದಸ್ಯರಾಗಿ ನಾಮಕರಣಗೊಂಡ ಪ್ರಥಮ ಭಾರತೀಯರಾಗಿದ್ದಾರೆ. ಅವರನ್ನು ಕಾನೂನು ಸದಸ್ಯರಾಗಿ ನೇಮಿಸಲಾಯಿತು.
6. ಬಾಂಬೆ, ಮದ್ರಾಸ್ ಮತ್ತು ಬೆಂಗಾಳ ಪ್ರಾಂತ್ಯಗಳಲ್ಲಿ ಕಾರ್ಯ ನಿರ್ವಾಹಕ ಕೌನ್ಸಿಲರ್‌ಗಳ ಸಂಖ್ಯೆಯನ್ನು 4ಕ್ಕೆ ಏರಿಸಲಾಯಿತು. ಈ ನಾಲ್ವರ ಪೈಕಿ ಇಬ್ಬರು ಕನಿಷ್ಠ 12 ವರ್ಷಗಳ ಕಾಲ ಬ್ರಿಟಿಷ್ ಸರ್ಕಾರದಲ್ಲಿ ಸೇವೆ ಸಲ್ಲಿಸಿರಬೇಕಿತ್ತು.
7. ಪ್ರತ್ಯೇಕ ಮತದಾರ ವರ್ಗದ (Seperate electorate) ಪರಿಕಲ್ಪನೆಯನ್ನು ಒಪ್ಪಿಕೊಳ್ಳುವುದರ ಮೂಲಕ ಮುಸ್ಲಿಮರಿಗೆ ಕೋಮು ಪ್ರಾತಿನಿಧ್ಯ ಪದ್ಧತಿಯನ್ನು ಜಾರಿಗೆ ತರಲಾಯಿತು. ಈ ಪದ್ಧತಿಯ ಪ್ರಕಾರ ಮುಸ್ಲಿಂ ಪ್ರತಿನಿಧಿಗಳು ಮುಸ್ಲಿಂ ಮತದಾರರಿಂದಲೇ ಚುನಾಯಿಸಲ್ಪಡಬೇಕು. ಈ ಪದ್ಧತಿ ಕೋಮುವಾದವನ್ನು ಕಾನೂನುಬದ್ಧಗೊಳಿಸಿತು. ಆದ್ದರಿಂದ ಲಾರ್ಡ್ ಮಿಂಟೋರವರನ್ನು ಕೋಮು ಮತದಾರ ವರ್ಗ (Communal Electorate) ದ ಪಿತಾಮಹ ಎಂದು ಕರೆಯಲಾಗುತ್ತದೆ. ಇಬ
8. ಪ್ರೆಸಿಡೆನ್ಸಿ ಕಾರ್ಪೋರೇಷನ್‌ಗಳಿಗೆ, ವಾಣಿಜ್ಯೋದ್ಯಮಿಗಳಿಗೆ, ವಿಶ್ವವಿದ್ಯಾಲಯಗಳಿಗೆ ಹಾಗೂ ಜಮೀನ್ದಾರರಿಗೆ ಶಾಸನ ಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯತೆ ನೀಡಲಾಯಿತು.
No comments:
Post a Comment