World's Highest Railway Bridge
ಜಮ್ಮು-ಕಾಶ್ಮೀರದಲ್ಲಿ ಚಿನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ
ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆಯ (World's Highest Railway Bridge) ಪ್ರಮುಖ
ಭಾಗವಾಗಿರುವ ಬೃಹತ್ ಕಮಾನಿನ (Arch) ನಿರ್ಮಾಣ ಕಾರ್ಯವು 2021ರ ಏಪ್ರಿಲ್ ರಂದು 5 ಪೂರ್ಣಗೊಂಡಿದೆ. 5.6 ಮೀಟರ್
ಉದ್ದದ ಕೊನೆಯ ಲೋಹದ ಭಾಗವನ್ನು ಕಮಾನಿನ ಅತಿ ಎತ್ತರದ ಭಾಗದಲ್ಲಿ ಅಳವಡಿಸಲಾಯಿತು. ಕಮಾನಿನ ಆಕಾರವು ಪೂರ್ಣಗೊಂಡಿತು. ಈ ಮೂಲಕ ನದಿಯ ಎರಡೂ ದಡಗಳನ್ನು ಸೇರಿಸುವ ಕಮಾನನ್ನು ಜೋಡಿಸಿದಂತಾಗಿದೆ. ಈ ಸೇತುವೆಯ ಕಾಮಗಾರಿಯು 2 ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಇದು ಹೊಸ ಇತಿಹಾಸವನ್ನು ಸೃಷ್ಟಿಸಲಿದೆ.
ಸೇತುವೆಯ ವಿಶೇಷತೆ: ಉದಾಮ್‌ಪುರ-ಶ್ರೀನಗರ-ಬಾರಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಭಾಗವಾಗಿ 1.315 ಕಿ.ಮೀ (1,315 ಮೀಟರ್) ಉದ್ದದ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಸೇತುವೆಯು ನೆಲಮಟ್ಟದಿಂದ 359 ಮೀಟರ್ ಎತ್ತರವಿದ್ದು ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಿರಲಿದೆ. ಅಂದಾಜು 1,486 ಕೋಟಿ ರೂ. ಮೊತ್ತದ ಈ ಯೋಜನೆಯ ಪ್ರಮುಖ ಭಾಗವಾದ ಕಮಾನಿನ ಕಾಮಗಾರಿಯು ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಇತರೆ ತಾಂತ್ರಿಕ ಹಾಗೂ ಸಿವಿಲ್ ಕಾಮಗಾರಿಗಳು ತ್ವರಿತವಾಗಿ ಸಾಗುತ್ತಿವೆ. 28,660 ಮೆಟ್ರಿಕ್ ಟನ್ ಸ್ಟೀಲ್, 66 ಸಾವಿರ ಕ್ಯುಬಿಕ್ ಮೀಟರ್ ಕಾಂಕ್ರೀಟ್ ಬಳಕೆಯಾಗಲಿದೆ. ಗಂಟೆಗೆ 266 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯ ವೇಗ ಹಾಗೂ ಪ್ರಬಲ ಭೂಕಂಪವನ್ನು ತಡೆದುಕೊಳ್ಳುವಂತೆ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಸೇತುವೆಯು ಕಾಶ್ಮೀರ ಮತ್ತು ದೇಶದ ಇತರ ಭಾಗಗಳೊಂದಿಗೆ ಸರ್ವಋತು ಸಂಪರ್ಕ ಕಲ್ಪಿಸಲು ನೆರವಾಗಲಿದೆ. ಈ ಸೇತುವೆಯ ಆಯಸ್ಸು 120 ವರ್ಷಗಳಾಗಿದ್ದು, ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ರೈಲು ಪ್ರಯಾಣಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.