mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Thursday, 6 May 2021

ಬೆಮೆಲ್ ಸಂಸ್ಥೆಯ ಖಾಸಗೀಕರಣಕ್ಕೆ ಸಿದ್ಧತೆ



ಕರ್ನಾಟಕದ ಕೆಜಿಎಫ್‌ನಲ್ಲಿ (1964ರಲ್ಲಿ ಸ್ಥಾಪನೆಯಾದ ಹಾಗೂ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರ ಸ್ಮಾಮ್ಯದ ಬೆಮೆಲ್ (BEML-Bharath Earth Movers Limited) ಕಂಪನಿಯ ಸಂಪೂರ್ಣ ಖಾಸಗೀಕರಣಕ್ಕೆ ಕೇಂದ ಸರ್ಕಾರವು ಸಿದ್ಧತೆ ನಡೆಸಿದೆ. ಈ ಕಂಪನಿಯ ಶೇ. 26ರಷ್ಟು ಷೇರುಗಳನ್ನು ಮಾರಾಟ ಮಾಡಲು ಮತ್ತು ಕಂಪನಿಯ ಆಡಳಿತಾತ್ಮಕ ನಿಯಂತ್ರಣವನ್ನು ವರ್ಗಾವಣೆ ಮಾಡಲು ಕೇಂದ್ರ ಸರ್ಕಾರವು ಪ್ರಾಥಮಿಕ ಬಿಡ್‌ಗಳನ್ನು ಆಹ್ವಾನಿಸಿದೆ.beml NEW HONTERS NEW DREAMS ಬೆಮೆಲ್‌ನಲ್ಲಿ ಸರ್ಕಾರದ ಶೇ.54.03ರಷ್ಟು ಷೇರುಗಳಿದ್ದು, ಸರ್ಕಾರವೇ ಮಾಲೀಕತ್ವ ಹೊಂದಿದೆ. ಇದೀಗ ಶೇ. 26ರಷ್ಟು ಷೇರು ಮಾರಾಟವಾದರೆ ಸರ್ಕಾರದ ಪಾಲು ಶೇ.50ಕ್ಕಿಂತ ಕೆಳಕ್ಕಿಳಿಯಲಿದೆ. ಈ ಷೇರು ವಿಕ್ರಯದಿಂದ ಸರ್ಕಾರದ ಬೊಕ್ಕಸಕ್ಕೆ 1000 ಕೋಟಿ ರೂ. ಆದಾಯ ಹರಿದು ಬರುವ ನಿರೀಕ್ಷೆಯಿದೆ. ಷೇರು ವಿಕ್ರಯವು 2 ಹಂತಗಳಲ್ಲಿ ಜರುಗಲಿದೆ. 2021ರ ಮಾರ್ಚ್ 1ರೊಳಗೆ ಕಂಪನಿಯ ಷೇರು ಖರೀದಿಸಲು ಬಯಸುವವರು ಆಸಕ್ತಿ ವ್ಯಕ್ತಪಡಿಸುವಿಕೆಯ ಅರ್ಜಿಯನ್ನು ಸಲ್ಲಿಸಲು ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ. ಕೇಂದ್ರ ಸರ್ಕಾರವು ಎಸ್‌ಬಿಐ ಅನ್ನು ಈ ಕಂಪನಿಯ ಲ್ಲಿನ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ವ್ಯವಹಾರದ ಬಂಡವಾಳ ಮಾರುಕಟ್ಟೆಯ ಸಲಹೆಗಾರರನ್ನಾಗಿ ನೇಮಿಸಿದೆ.


ಬೆಮೆಲ್ ಬಗ್ಗೆ ಮಾಹಿತಿ

ಸ್ಥಾಪನೆ: 1964 ಮೇ (ಕೆಜಿಎಫ್) ಪ್ರಸ್ತುತ ಮುಖ್ಯಸ್ಥರು: ಡಿ.ಕೆ ಹೋತಾ

ಕೇಂದ್ರ ಕಚೇರಿ: ಬೆಂಗಳೂರು

ವಿಶೇಷತೆ: ಇದೊಂದು ಸಾರ್ವಜನಿಕ ಒಡೆತನದ ಕಂಪನಿಯಾಗಿದೆ. ಮತ್ತು ಮಿನಿರತ್ನ ವರ್ಗ-1 ಸ್ಥಾನಮಾನ ಹೊಂದಿದೆ. ಕೆಜಿಎಫ್, ಬೆಂಗಳೂರು, ಮೈಸೂರು ಮತ್ತು ಪಾಲಕ್ಕಾಡ್‌ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಭಾರತೀಯ ಸೇನೆ ಹಾಗೂ ರೈಲ್ವೆಗೆ ಅಗತ್ಯವಾದ ಭಾರವಾದ ಸಾಧನಗಳನ್ನು ತಯಾರಿಸುತ್ತದೆ. ಬೆಮೆಲ್ ಕಂಪನಿಯು ಮೆಟ್ರೋ ಕೋಚ್‌ಗಳನ್ನು ತಯಾರಿಸಿದೆ. ದೆಹಲಿ ಮೆಟೋ, ನಮ್ಮ ಮೆಟ್ರೋ, ಜೈಪುರ ಮೆಟ್ರೋಗಳಿಗೆ ಕೋಚ್‌ಗಳನ್ನು ಒದಗಿಸಿದೆ. 2020ರ ಆಗಸ್ಟ್ 10 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿನ ಬೆಮೆಲ್‌ನಲ್ಲಿ ಕೈಗಾರಿಕಾ ವಿನ್ಯಾಸ ಕೇಂದ್ರವನ್ನು ಉದ್ಘಾಟಿಸಿದ್ದರು.

ನೆನಪಿರಲಿ: ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಧೀನದ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣೆ ಇಲಾಖೆಯ (DIPAM- Department of Investment and Public Assets Management)ವತಿಯಿಂದ ದೇಶದ ಅತ್ಯಂತ ದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿ ಯ ಖಾಸಗೀಕರಣ ಪ್ರಕ್ರಿಯೆಗೂ ಇತ್ತೀಚೆಗೆ ಸಿದ್ಧತೆ ನಡೆಸಿದೆ. 2020ರ ನವೆಂಬರ್‌ನಲ್ಲಿ ಡಿಐಪಿಎಎಂ ಮತ್ತು ವಿಶ್ವಬ್ಯಾಂಕ್ ನಡುವೆ ಸ್ವತ್ತು ನಗದೀಕರಣ ಮೇಲಿನ ಸಲಹೆ ಸೇವೆ | ಸಂಬಂಧ ಒಪ್ಪಂದ ಏರ್ಪಟ್ಟಿದೆ.

ಬಿಹಾರ ರಾಜ್ಯದಲ್ಲಿ ತೃತೀಯ ಲಿಂಗಿ ಪೊಲೀಸ್ ಇಲಾಖೆಯಲ್ಲಿThird gender in bihar police

 


ಬಿಹಾರ ರಾಜ್ಯದಲ್ಲಿ ತೃತೀಯ ಲಿಂಗಿಗಳಿಗೆ ಗೌರವ ಸೂಚಕ ಉದ್ಯೋಗ ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆಯಲ್ಲಿ ತೃತೀಯ ಲಿಂಗಿಗಳಿಗೆ ಮಾತ್ರ ಸೀಮಿತವಾದ ನೂತನ ಪಡೆ ರಚಿಸಲು ಬಿಹಾರ ಸರ್ಕಾರ ಸಿದ್ಧತೆ ನಡೆಸಿದೆ. ಈ ಯೋಜನೆ ಯಶಸ್ವಿಯಾದಲ್ಲಿ ದೇಶದಲ್ಲೇ ತೃತೀಯ ಲಿಂಗಿಗಳಿಗೆ ಸೀಮಿತ ಪೊಲೀಸ್ ಬೆಟಾಲಿಯನ್ ಹೊಂದಿರುವ ಏಕೈಕ ರಾಜ್ಯ (Government in Bihar is Working on a Plan to Raise a Separate Police Battalion Of Transgender People) ಎಂಬ ಹೆಗ್ಗಳಿಕೆಗೆ ಬಿಹಾರ ರಾಜ್ಯ ಪಾತ್ರವಾಗಲಿದೆ. ಬಿಹಾರದಲ್ಲಿ18 ವರ್ಷ ದಾಟಿರುವ 40 ಸಾವಿರಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದಾರೆ. ಅವರಲ್ಲಿ ಕೆಲವರಿಗೆ ಸೂಕ್ತ ತರಬೇತಿ ನೀಡಿ ಪೊಲೀಸ್ ಬೆಟಾಲಿಯನ್ ರಚಿಸಿ ಅಗತ್ಯ ಭದ್ರತಾ ವ್ಯವಸ್ಥೆಗೆ ನಿಯೋಜಿಸಲು ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಹಾಗೂ ಪೊಲೀಸ್ ಪಡೆ ಆಯ್ಕೆಗೆ ಅರ್ಹತೆ ಮತ್ತು ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿಗಳು ಮತ್ತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ.

ಭಾರತದಲ್ಲ ತೃತೀಯ ಅಂನಿಗಳಲ್ಲ ಪ್ರಥಮರು


ಮೊದಲ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ : ಪ್ರೀತಿಕಾ ಯಾಶಿನಿ (ತ.ನಾಡು), * ಮೊದಲ ಕ್ರೀಡಾಕೂಟ : ತಿರುವನಂತಪುರಂ (ಕೇರಳ)


* ಮೊದಲ ಕಾಲೇಜು ಪ್ರಾಂಶುಪಾಲರು : ಮನಾಚಿ ಭಂಡೋಪಾಧ್ಯಾಯ (ಪ.ಬಂಗಾಳ), ಮೊದಲ ಸೈನಿಕ : ಶಾಚಿ


* ಮೊದಲ ಎಂಎಲ್‌ಎ : ಶಬನಮ್ ಮೌಸಿ (ಆಂಧ್ರಪ್ರದೇಶ),


* ಮೊದಲ ವಕೀಲರು : ಸತ್ಯಶ್ರೀ ಶರ್ಮಿಳಾ (ತಮಿಳುನಾಡು)


* ಮೊದಲ ನ್ಯಾಯಾಧೀಶರು : ಚೋಂತಾ ಮೊಂಡಾಲ್ (ಪ. ಬಂಗಾಳ) * ಮೊದಲ ಶಾಲೆ : ಷಹಜಾ ಇಂಟರ್ ನ್ಯಾಷನಲ್ ಸ್ಕೂಲ್ (ಕೇರಳದ ಎರ್ನಾಕುಲಂ ಜಿಲ್ಲೆ), * ಆರಂಭಿಸಿದವರು: ಕಲ್ಕಿ ಸುಬ್ರಹ್ಮಣ್ಯಂ


* ಮೊದಲ ವಿಶ್ವವಿದ್ಯಾಲಯ : ಖುಷಿನಗರ ಜಿಲ್ಲೆ (ಉತ್ತರ ಪ್ರದೇಶ) ಭಾರತದ ಮೊದಲ ಮಿಸ್ ತೃತೀಯ ಅಂಗಿ ಸೌಂದರ್ಯ ಸ್ಪರ್ಧೆ ಜರುಗಿದ ಸ್ಥಳ : ಗುರುಗಾಂವ್ (ಹರಿಯಾಣ)


* ಮೊದಲ ತೃತೀಯ ಅಂಗಿ ಅಪರೇಟರ್ : ಜೋಯಾ ಖಾನ್ (ಗುಜರಾತ್‌ನ ಸಾಮಾನ್ಯ ಸೇವಾ ಕೇಂದ್ರ)


ತೃತೀಯ ಅಂಗಿಗಳ ಮೊದಲ ಸಾಹಿತ್ಯೋತ್ಸವ : ಕೋಲ್ಕತ್ತಾ


ಅಸ್ಲಾಂ ರಾಜ್ಯದ ಮೊದಲ ತೃತೀಯ ಅಂಗಿ ನ್ಯಾಯಾಧೀಶೆ : ಸ್ವಾಮಿ ಬಿಧಾನ್‌ ಬರುವಾ * ಇಸ್ಲಾಂ ರಾಷ್ಟ್ರಗಳಲ್ಲಿ ತೃತೀಯ ಅಂಗಿಗಳಗಾಗಿ ಶಾಲೆಯನ್ನು ಸ್ಥಾಪಿಸಿದ ಮೊದಲ ದೇಶ : ಪಾಕಿಸ್ತಾನ


* ಭಾರತದ ಮೊದಲ ತೃತೀಯ ಅಂಗಿ ನ್ಯೂಸ್ ನಿರೂಪಕಿ : ಪದ್ಮನಿ ಪ್ರಕಾಶ್ (ಲೋಟಸ್ ನ್ಯೂಸ್)


* 2014ರ ಏಪ್ರಿಲ್ 15 ರಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ಎನ್ಎಎಲ್ಎಸ್ಎ) vs ಕೇಂದ್ರ ಸರ್ಕಾರ ಪ್ರಕರಣದಲ್ಲಿ ಭಾರತದ


ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ತೃತೀಯ ಲಿಂಗಿ ಪರಿಕಲ್ಪನೆ (Transgender People to be the “Third Gender) ನೀಡಿತ್ತು.


* ತೃತೀಯ ಅಂಗಿಗಳ (ಹಕ್ಕು ರಕ್ಷಣಿ) ಕಾಯ್ದೆ-2019: ತೃತೀಯ ಲಿಂಗಿಗಳ (ಹಕ್ಕು ರಕ್ಷಣೆ) ನಿಯಮಗಳು 2020ರ ಜನವರಿ 10 ರಂದು ತೃತೀಯ ಲಿಂಗಿಗಳ ಕ್ಷೇಮಾಭಿವೃದ್ಧಿಗಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ತೃತೀಯ ಲಿಂಗಿಗಳಿಗಾಗಿ ಕೇಂದ್ರದ ಸಾಮಾಜಿಕ ಮತ್ತು ಸಬಲೀಕರಣ ಸಚಿವಾಲಯವು ತೃತೀಯ ಲಿಂಗಿಗಳ ನ್ಯಾಷನಲ್ ಪೋರ್ಟಲ್ & ತೃತೀಯ ಲಿಂಗಿಗಳಿಗೆ ವಸತಿಗಾಗಿ ಗರೀಮ್ ಗ್ರೇಹ್ (Garima Greh) ಅನ್ನು ಉದ್ಘಾಟಿಸಿದ್ದಾರೆ.

Indian turister day

 ಪ್ರವಾಸಿ ಭಾರತೀಯ ದಿವಸ್


2021ರ ಜನವರಿ 9 ರಂದು ಭಾರತದಲ್ಲಿ16ನೇ ಪ್ರವಾಸಿ ಭಾರತೀಯ ದಿವಸ ಅಥವಾ ಅನಿವಾಸಿ ಭಾರತೀಯರ ದಿನವನ್ನು ಜನವರಿ 9 2021

:AATMA-NIRBHAR'ಆತ್ಮನಿರ್ಭರ ಭಾರತ್‌ಗೆ ಕೊಡುಗೆ BHARAT Be (Contributing to Atmanirbhar Bharath) ಧೈಯವಾಕ್ಯದಲ್ಲಿ ಆಚರಿಸಲಾಗಿದೆ. ನವದೆಹಲಿಯಲ್ಲಿ ವರ್ಚ್ಯುವಲ್ ಆಧಾರದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಸುರಿನೇಮ್ ದೇಶದ ಅಧ್ಯಕ್ಷ ಚಂದ್ರಿಕಾ ಪರ್ಸಾದ್ ಸನ್‌ಕಿ ಅವರು ಮುಖ್ಯ ಅತಿಥಿಯಾಗಿದ್ದರು. 2020-2021ರ ಅವಧಿಯ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು ಹಾಗೂ ಭಾರತ್ ಕೋ ಜಾನಿಯೇ ರಸಪ್ರಶ್ನೆ ವಿಜೇತರನ್ನು ಘೋಷಿಸಲಾಗಿದೆ. ಆತ್ಮ ನಿರ್ಭರ ಭಾರತದಲ್ಲಿ ವಲಸೆಗಾರರ ಪಾತ್ರ ಹಾಗೂ ಕೋವಿಡ್ ನಂತರದ ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಸವಾಲುಗಳನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಅಧಿವೇಶನ ಜರುಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಸಮಾವೇಶದ ಉದ್ಘಾಟನೆ ಮಾಡಿ, ಜಗತ್ತಿನಾದ್ಯಂತ ಇರುವ ಭಾರತೀಯ ಮೂಲದ ಸಹದ್ಯೋಗಿಗಳು ಕೋವಿಡ್ ಸಂದರ್ಭದಲ್ಲಿ ತಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸಿದ್ದರು? ಎನ್ನುವುದು ನಮ್ಮ ಹೆಮ್ಮೆ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. 2021ರ ಜನವರಿ 8 ರಂದು ಯುವ ಪ್ರವಾಸಿ ಭಾರತೀಯ ದಿವಸವನ್ನು


ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ವತಿಯಿಂದ

Bringing together Young Achievers From India and Indian Diaspora ಧೈಯವಾಕ್ಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯೂಜಿಲ್ಯಾಂಡ್‌ನ ಸಮುದಾಯ ಮತ್ತು ಸ್ವಪ್ರೇರಿತ ವಲಯದ ಸಚಿವರಾದ ಪ್ರಿಯಾಂಕ ರಾಧಾಕೃಷ್ಣನ್ ಅವರು ವಿಶೇಷ ಅತಿಥಿಯಾಗಿದ್ದರು. ಪ್ರಿಯಾಂಕ ಅವರು ನ್ಯೂಜಿಲ್ಯಾಂಡ್ ದೇಶದಲ್ಲಿ ಸಚಿವರಾದ ಮೊಟ್ಟಮೊದಲ ಭಾರತೀಯ ಮೂಲದ ಮಹಿಳೆ ಎನಿಸಿದ್ದಾರೆ.


ಹಿನ್ನೆಲೆ: 1915ರ ಜನವರಿ 9 ರಂದು ಮಹಾತ್ಮ ಗಾಂಧೀಜಿಯವರು ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆ (ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಕ) ಅವರ ಮಾರ್ಗದರ್ಶನದ ಮೇಲೆ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಹಿಂತಿರುಗಿದರು. ಇಂತಹ ಐತಿಹಾಸಿಕ ಹಿನ್ನೆಲೆಯಲ್ಲಿ ಜನವರಿ 9 ಅನ್ನು ಪ್ರವಾಸಿ ಭಾರತೀಯ ದಿವಸವನ್ನಾಗಿ ಆಚರಿಸಲಾಗುವುದು. 2003ರ ಜನವರಿ 9 ರಿಂದ 11ರವರೆಗೆ ಮೊದಲ ಬಾರಿ ಈ ದಿನವು ಆಚರಣೆಯಾಗಿತ್ತು. (ಮಾರಿಷಸ್‌ನ ಅನಿರುದ್ ಜುಗುನ್ನಾಥ್ ಅತಿಥಿ) 2019ರಲ್ಲಿ ಪ್ರವಾಸಿ ಭಾರತೀಯ ದಿವಸವು ವಾರಣಾಸಿಯಲ್ಲಿ ಜರುಗಿತ್ತು (ಪ್ರವೀಂದ್‌ ಜುಗುನ್ನಾಥ್ ಅತಿಥಿ)

Amarshilpi jakanachari

 

2021ರ ಜನವರಿ 1 ರಾಜ್ಯಾದ್ಯಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿತ್ತು. 2020-21ನೇ ಸಾಲಿನ ಆಯವ್ಯಯದಲ್ಲಿ ಜಕಣಾಚಾರಿ ಸಂಸ್ಮರಣಾ ದಿನ ಆಚರಣೆ ಬಗ್ಗೆ ಘೋಷಣೆ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2021ರ ಜನವರಿ 1 ಅನ್ನು ಜಕಣಾಚಾರಿಯವರ ಜನ್ಮ ದಿನವನ್ನಾಗಿ ರಾಜ್ಯ ಸರ್ಕಾರ ಆಚರಿಸಿದೆ. ಅಮರಶಿಲ್ಪಿ ಜಕಣಾಚಾರಿಯವರು ತಮ್ಮ ಜೀವನವನ್ನು ಕಲೆಗಾಗಿ ಮುಡುಪಾಗಿಟ್ಟಿದ್ದು, ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತ ಕಥೆಯಾಗಿದ್ದಾರೆ. ಹಾಗೂ ಶಿಲ್ಪಿಯಾಗಿ ವಿಶ್ವ ಖ್ಯಾತ ಹೊಂದಿದ್ದಾರೆ. 

ಅಮರಶಿಲ್ಪಿ ಜಕಣಾಚಾರಿ ಬಗ್ಗೆ ಮಾಹಿತಿ ಅಮರಶಿಲ್ಪಿ ಜಕಣಾಚಾರಿಯವರು ಅತ್ಯಂತನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ - ದಂತಕಥೆಯಾದ ಶಿಲ್ಪಿ. ಇವರು ಕಲ್ಯಾಣಿ ಚಾಲುಕ್ಯರು ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಮತ್ತು ಹಳೇಬೀಡುಗಳಲ್ಲಿ ನಿರ್ಮಿಸಿದ್ದಾರೆ. ತುಮಕೂರು ಜಿಲ್ಲೆಯ ಕೈದಾಳದಲ್ಲಿ ಜಕಣಾಚಾರಿಯವರು ಜನಿಸಿದ್ದರು. ತನ್ನ ಹುಟ್ಟೂರಾದ ಕ್ರೀಡಾಪುರದಲ್ಲಿ ಚೆನ್ನಕೇಶವ ದೇವಾಲಯವನ್ನು ನಿರ್ಮಿಸಿದರು. ಈ ಕಾರ್ಯ ಮುಗಿದ ನಂತರ ಅವರ ಬಲಗೈ ಅನ್ನು ದೇವರು ಕರುಣಿಸಿದನೆಂಬ ದಂತ ಕಥೆಯಿದ್ದು, ಈ ಘಟನೆಯನ್ನು ಆಚರಿಸಿದ ನಂತರ ಈ ಕ್ರೀಡಾಪುರ ಗ್ರಾಮಕ್ಕೆ ಕೈದಾಳ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.


ಜಕಣಾಚಾರಿ ಪ್ರಶಸ್ತಿ ಬಗ್ಗೆ ಮಾಹಿತಿ: ಕರ್ನಾಟಕ ರಾಜ್ಯ ಸರ್ಕಾರವು ಶ್ರೇಷ್ಠಮ ಅಮರಶಿಲ್ಪಿ ಜಕಣಾಚಾರಿಯವರ ಕೊಡುಗೆಯನ್ನು ಸ್ಮರಿಸಲು ಪ್ರತೀ ವರ್ಷ ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ 1995 ರಿಂದ ಜಕಣಾಚಾರಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. 2019ರಲ್ಲಿ ಬಿ.ಎಸ್.ಯೋಗಿರಾಜ ಅವರು ಪ್ರಶಸ್ತಿಗೆ ಪುರಸ್ಕೃತರಾಗಿದ್ದರು.

Sunday, 2 May 2021

Gk nots fundamental duties

 ಮೂಲಭೂತ ಕರ್ತವ್ಯ ಎಂದರೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ದೇಶಕ್ಕಾಗಿ ಮಾಡಬೇಕಾದ ಹೊಣೆ. ಮೂಲಭೂತ ಕರ್ತವ್ಯಗಳ ಪರಿಕಲ್ಪನೆಯನ್ನು ರಷ್ಯಾದಿಂದ ಎರವಲು ಪಡೆಯಲಾಗಿದೆ. 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿ ಮೂಲಕ 10 ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಭಾಗ 4ಎ ನಲ್ಲಿ 51ಎ ವಿಧಿ ಅಡಿಯಲ್ಲಿ ಸೇರ್ಪಡೆ ಮಾಡಲಾಯಿತು. 2002ರ 86ನೇ ತಿದ್ದುಪಡಿ, ಅನ್ವಯ 11ನೇ ಕರ್ತವ್ಯವಾಗಿ ಶಿಕ್ಷಣದ ಕರ್ತವನ್ನು ಸೇರ್ಪಡೆ ಮಾಡಲಾಯಿತು. ಪ್ರಸ್ತುತ 11 ಮೂಲಭೂತ ಕರ್ತವ್ಯಗಳಿವೆ.


1) ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು. 

2) ಸ್ವಾತಂತ್ರ್ಯ ಚಳವಳಿಯ ಉನ್ನತ ಆದರ್ಶಗಳನ್ನು ಪಾಲಿಸುವುದು.


3) ಭಾರತದ ಏಕತೆಯನ್ನು ರಕ್ಷಿಸುವುದು.


4) ಮಾತೃ ಭೂಮಿಯನ್ನು ರಕ್ಷಿಸುವುದು.


5) ಭಾರತೀಯರಾದ ನಾವೆಲ್ಲಾ ಒಂದು ಭಾವನೆಯನ್ನು ಬೆಳೆಸುವುದು. 

6) ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು. 

7) ಪ್ರಾಕೃತಿಕ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ಧಿ ಪಡಿಸುವುದು.


8) ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವುದು. 


9) ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ಹಿಂಸೆಯನ್ನು ತ್ಯಜಿಸುವುದು.


10) ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆ ಪಡೆದು ದೇಶದ ಪ್ರಗತಿಗೆ ಶ್ರಮಿಸುವುದು.


11) ಎಲ್ಲಾ ತಂದೆ ತಾಯಿಯಂದಿರು ಹಾಗೂ ಪೋಷಕರು 6 ರಿಂದ 14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶಗಳನ್ನು ಒದಗಿಸುವುದು.

Friday, 30 April 2021

Indian council act 1919


ಭಾರತ ಕೌನ್ಸಿಲ್ ಕಾಯ್ದೆ 1909

ಭಾರತ ಕೌನ್ಸಿಲ್ ಕಾಯ್ದೆ 1909 ಅನ್ನು ಮಾರ್ಲೆ ಮಿಂಟೋ ಸುಧಾರಣೆಗಳು ಎಂದು ಸಹ ಕರೆಯುತ್ತಾರೆ ಈ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಲಾರ್ಡ್ ಮಾರ್ಲೆ ಕಾರ್ಯದರ್ಶಿಯಾಗಿದ್ದರು ಮತ್ತು ಲಾರ್ಡ್ ಮಿಂಟೋ ಭಾರತದ ವೈಸರಾಯ ರಾಗಿದ್ದರು.


 ಕಾಯ್ದೆಯ ಪ್ರಮುಖ ಲಕ್ಷಣಗಳು : 


1. ಈ ಕಾಯ್ದೆಯ ಮೂಲಕ ಕೇಂದ್ರ ಶಾಸನಸಭೆ ಹಾಗೂ ಪ್ರಾಂತೀಯ ಶಾಸನ ಸಭೆಗಳ ಸದಸ್ಯರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾ ಇ ಯಿತು. ಕೇಂದ್ರ ಶಾಸನಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 68ಕ್ಕೆ ಹೆಚ್ಚಿಸಲಾಯಿತು. ಅದರಲ್ಲಿ 36 ಮಂದಿ ಸರ್ಕಾರಿ (Official) ಸದಸ್ಯರಾಗಿದ್ದರು ಹಾಗೂ 32 ಮಂದಿ ಸರ್ಕಾರೇತರ (Non-official) ಸದಸ್ಯರಾಗಿದ್ದರು. 32 ಮಂದಿ ಸರ್ಕಾರೇತರ ಸದಸ್ಯರ ಪೈಕಿ 5 ಮಂದಿ ನಾಮಕರಣಗೊಂಡ ಸದಸ್ಯರಾಗಿದ್ದು, ಉಳಿದವರನ್ನು ಪರೋಕ್ಷವಾಗಿ ಚುನಾಯಿಸಲಾಗುತ್ತಿತ್ತು. ಪ್ರಾಂತೀಯ ಶಾಸನ ಸಭೆಗಳ ಸದಸ್ಯರ ಸಂಖ್ಯೆ ಏಕರೂಪವಾಗಿರದೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನವಾಗಿತ್ತು. 


2. ಕೇಂದ್ರ ಶಾಸನ ಸಭೆಯಲ್ಲಿ ಸರ್ಕಾರಿ ಸದಸ್ಯರು ಬಹುಮತದಲ್ಲಿದ್ದರು. ಆದರೆ ಪ್ರಾಂತೀಯ ಶಾಸನ ಸಭೆಗಳಲ್ಲಿ ಖಾಸಗಿ ಸದಸ್ಯರ (ಸರ್ಕಾರ ತರ ಸದಸ್ಯರ) ಬಹುಮತಕ್ಕೆ ಅವಕಾಶ ನೀಡಲಾಯಿತು.


3. ಶಾಸನ ಸಭೆಗಳ ಅವಧಿಯನ್ನು 3 ವರ್ಷಗಳಿಗೆ ನಿಗದಿಪಡಿಸಲಾಯಿತು.


4. ಶಾಸನ ಸಭೆಗಳ ಅಧಿಕಾರವನ್ನು ಹೆಚ್ಚಿಸಲಾಯಿತು. ಕೇಂದ್ರ ಹಾಗೂ ಪ್ರಾಂತೀಯ ಶಾಸನ ಸಭೆಗಳ ಸದಸ್ಯರಿಗೆ ಪೂರಕ ಪ್ರಶ್ನೆಗಳನ್ನು ಕೇಳುವ, ನಿರ್ಣಯಗಳನ್ನು ಮಂಡಿಸುವ ಹಾಗೂ ಆಯವ್ಯಯ ಪಟ್ಟಿಯನ್ನು ಕುರಿತು ಚರ್ಚಿಸುವ ಅಧಿಕಾರ ನೀಡಲಾಯಿತು.


5. ವೈಸ್‌ರಾಯ್‌ರವರ ಕಾರ್ಯ ನಿರ್ವಾಹಕ ಸಮಿತಿಗೆ ಒಬ್ಬ ಭಾರತೀಯನನ್ನು ನಾಮಕರಣ ಮಾಡಲು ಪ್ರಥಮ ಬಾರಿಗೆ ಅವಕಾಶ ನೀಡಲಾಯಿತು. ಸತ್ಯೇಂದ್ರ ಪ್ರಸಾದ್‌ ಸಿನ್ಹಾರವರು ವೈಸ್‌ರಾಯ್‌ರವರ ಕಾರ್ಯ ನಿರ್ವಾಹಕ ಸಮಿತಿಗೆ ಸದಸ್ಯರಾಗಿ ನಾಮಕರಣಗೊಂಡ ಪ್ರಥಮ ಭಾರತೀಯರಾಗಿದ್ದಾರೆ. ಅವರನ್ನು ಕಾನೂನು ಸದಸ್ಯರಾಗಿ ನೇಮಿಸಲಾಯಿತು.


6. ಬಾಂಬೆ, ಮದ್ರಾಸ್ ಮತ್ತು ಬೆಂಗಾಳ ಪ್ರಾಂತ್ಯಗಳಲ್ಲಿ ಕಾರ್ಯ ನಿರ್ವಾಹಕ ಕೌನ್ಸಿಲರ್‌ಗಳ ಸಂಖ್ಯೆಯನ್ನು 4ಕ್ಕೆ ಏರಿಸಲಾಯಿತು. ಈ ನಾಲ್ವರ ಪೈಕಿ ಇಬ್ಬರು ಕನಿಷ್ಠ 12 ವರ್ಷಗಳ ಕಾಲ ಬ್ರಿಟಿಷ್ ಸರ್ಕಾರದಲ್ಲಿ ಸೇವೆ ಸಲ್ಲಿಸಿರಬೇಕಿತ್ತು.


7. ಪ್ರತ್ಯೇಕ ಮತದಾರ ವರ್ಗದ (Seperate electorate) ಪರಿಕಲ್ಪನೆಯನ್ನು ಒಪ್ಪಿಕೊಳ್ಳುವುದರ ಮೂಲಕ ಮುಸ್ಲಿಮರಿಗೆ ಕೋಮು ಪ್ರಾತಿನಿಧ್ಯ ಪದ್ಧತಿಯನ್ನು ಜಾರಿಗೆ ತರಲಾಯಿತು. ಈ ಪದ್ಧತಿಯ ಪ್ರಕಾರ ಮುಸ್ಲಿಂ ಪ್ರತಿನಿಧಿಗಳು ಮುಸ್ಲಿಂ ಮತದಾರರಿಂದಲೇ ಚುನಾಯಿಸಲ್ಪಡಬೇಕು. ಈ ಪದ್ಧತಿ ಕೋಮುವಾದವನ್ನು ಕಾನೂನುಬದ್ಧಗೊಳಿಸಿತು. ಆದ್ದರಿಂದ ಲಾರ್ಡ್ ಮಿಂಟೋರವರನ್ನು ಕೋಮು ಮತದಾರ ವರ್ಗ (Communal Electorate) ದ ಪಿತಾಮಹ ಎಂದು ಕರೆಯಲಾಗುತ್ತದೆ. ಇಬ


8. ಪ್ರೆಸಿಡೆನ್ಸಿ ಕಾರ್ಪೋರೇಷನ್‌ಗಳಿಗೆ, ವಾಣಿಜ್ಯೋದ್ಯಮಿಗಳಿಗೆ, ವಿಶ್ವವಿದ್ಯಾಲಯಗಳಿಗೆ ಹಾಗೂ ಜಮೀನ್ದಾರರಿಗೆ ಶಾಸನ ಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯತೆ ನೀಡಲಾಯಿತು.

Wednesday, 28 April 2021

SBI Clerk Recruitment - 2021 l 5121 Vacancy l Apply Online

 Name of the Post: SBI Clerk 


Post Date:  27-4-2021


Total Vacancy: - 5121




Main Dates


Starting Date to Apply Online & Payment of Fee: 27-04-2021


Last Date for Submit of Application & Payment: 17-05-2021


Last Date for Editing Application Details: 17-05-2021


Last Date for Print Your Application: 01-06-2021


Date of Preliminary Exam (Tentative): June 2021


Date of Main Exam(Tentative): 31-07-2021


important links regarding this post

Apply online.  :-register/

Notification.:-official notice

Official website. :- click here


Application Fee


For GM & OBC    : Rs. 750/-

For SC , ST, PWD & Women : Nil/-


Age

Minumum Age - 20

Maximum Age - 28


* Age relaxation is applicable as per rul

Tuesday, 27 April 2021

Firsts in the state of Karnataka

 




1) ಮೊದಲ ವಾರ್ತಾ ಪತ್ರಿಕೆ : ಮಂಗಳೂರು ಸಮಾಚಾರ್:-

ಮಂಗಳೂರಿನಿಂದ 1843 ರಲ್ಲಿ ಬಾಸೆಲ್ ಮಿಷನ್‌ನ ಮಿಷನರಿಯಾರ ಹರ್ಮನ್ ಮೊಗ್ಲಿಂಗ್‌ರವರು ಕನ್ನಡ ಮೊದಲ ವಾರ್ತಾ ಪತ್ರಿಕೆಯಾದ ಮಂಗಳೂರು ಸಮಾಚಾರ್ ಅನ್ನು ಪ್ರಕಟಿಸಿದರು.


2) ಕನ್ನಡದ ಮೊದಲ ಮಾಸಪತ್ರಿಕೆ : ಮೈಸೂರು ವೃತ್ತಾಂತ ಬೋಧಿನಿ (Mysore Vrittanta Bodhini) ಇದು ಮೈಸೂರಿನಲ್ಲಿ ಭಾಷ್ಯಂ ಭಾಷ್ಯಾಚಾರ್ಯ ಅವರಿಂದ ಆರಂಭವಾಗಿದೆ. 

3) ಮೊದಲ ದೂರದರ್ಶನ ಪ್ರಸಾರ : ಕಲಬುರಗಿ ,ಕರ್ನಾಟಕದಲ್ಲಿ ಮೊದಲ ಬಾರಿಗೆ 1977 ರಲ್ಲಿ ಕಲಬುರಗಿಯಲ್ಲಿ ದೂರದರ್ಶನ ಕೇಂದ್ರವು ಆರಂಭಗೊಂಡಿತು.


4) ಕರ್ನಾಟಕದ ಮೊದಲ ವಿಮಾನ ನಿಲ್ದಾಣ - ಬಳ್ಳಾರಿ ಕರ್ನಾಟಕದಲ್ಲಿ ಮೊದಲ ವಿಮಾನ ನಿಲ್ದಾಣವು ಬಳ್ಳಾರಿಯಲ್ಲಿ 1932 ರಲ್ಲಿ ಆರಂಭವಾಯಿತು. ಈ ವಿಮಾನ ನಿಲ್ದಾಣವು ಕರಾಚಿ-ಅಹಮದಾಬಾದ್ ಮುಂಬೈ-ಬಳ್ಳಾರಿ ಮತ್ತು ಮದ್ರಾಸ್ ವಿಮಾನ ಸೇವೆಗೆ ಸಂಪರ್ಕವಾಗಿತ್ತು.

 * ಸುಧಾಮ ಎಂಬುದು ಸಂಸ್ಕೃತ ಭಾಷೆಯಲ್ಲಿ ಮೈಸೂರಿನಿಂದ

ಪ್ರಕಟವಾಗುತ್ತಿರುವ ದೈನಂದಿನ ಏಕೈಕ ಪತ್ರಿಕೆಯಾಗಿದೆ.

Niti aayog in kannada gk

 



ವಿಸ್ತ್ರತ ರೂಪ: National Institution

for Transforming India (NITI)


* ಮೊದಲ ಹೆಸರು: ರಾಷ್ಟ್ರೀಯ ಯೋಜನಾ Goioen- (NPC-National Planning Comission) (1950 ಮಾರ್ಚ್ 15 ರಲ್ಲಿ ಸ್ಥಾಪನೆ-ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರು


* ಮರುನಾಮಕರಣ ವರ್ಷ: 2015ರ ಜನವರಿ 1


ಕೇಂದ್ರ ಕಚೇರಿ: ನವದೆಹಲಿ


Official website :-http://niti.gov.in/


 ವಿಶೇಷತೆ: ಸಂವಿಧಾನೇತರ ಸಂಸ್ಥೆ, ಥಿಂಕ್ ಟ್ಯಾಂಕ್ ಸಂಸ್ಥೆ, ನವ ಭಾರತ ನಿರ್ಮಾಣದ ಮುಂದಾಳು ಹಾಗೂ ಸುಸ್ಥಿರ ಅಭಿವೃದ್ಧಿ

ಗುರಿಗಳನ್ನು ಅನುಷ್ಠಾನಕ್ಕೆ ತರುತ್ತಿರುವ ನೋಡಲ್ ಘಟಕವಾಗಿದೆ. ಆಯೋಗದ ಪದನಿಮಿತ್ತ ಅಧ್ಯಕ್ಷರು: ಪ್ರಧಾನ ಮಂತ್ರಿ (ಪ್ರಸ್ತುತ ಹಾಗೂ


ಮೊದಲ ಅಧ್ಯಕ್ಷರು : ನರೇಂದ್ರ ಮೋದಿ ಉಪಾಧ್ಯಕ್ಷರು: ಡಾ|| ರಾಜೀವ್ ಕುಮಾರ್ (ಪ್ರಸ್ತುತ), (ಆಯೋಗದ


ಮೊದಲ ಉಪಾಧ್ಯಕ್ಷ - ಅರವಿಂದ್

ಪನಗರಿಯಾ)

Sunday, 25 April 2021

quad group countries

 



ಇದರ ಅರ್ಥ 'ಚತುರ್ಭುಜ ಭದ್ರತಾ ಸಂವಾದ'. ಇದು ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಬಹುಪಕ್ಷೀಯ ಒಪ್ಪಂದವಾಗಿದೆ. ಈ ಸಂಸ್ಥೆ ಮೂಲತಃ ಏಷ್ಯಾ-ಪೆಸಿಫಿಕ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವುದು ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವುದು ಇದರ ಉದ್ದೇಶ. 2007ರಲ್ಲಿ, ಅಂದಿನ ಜಪಾನ್‌ನ ಪ್ರಧಾನಿ ಶಿಂಜೊ ಅಬೆ QUAD ಅನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾಪವನ್ನು ಭಾರತ, ಯುಎಸ್ ಮತ್ತು ಆಸ್ಟ್ರೇಲಿಯಾ ಬೆಂಬಲಿಸಿದವು. 2019ರಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರು ಭೇಟಿಯಾದರು. ಇದರ ನಂತರ, ನಾಲ್ಕು ದೇಶಗಳ ಉನ್ನತ ನಾಯಕರ ನಡುವೆ ಮೊದಲ ಶೃಂಗಸಭೆಯನ್ನು 2021ರ ಮಾರ್ಚ್ 12ರಂದು ಆನ್‌ಲೈನ್ ಆಗಿ ಆಯೋಜಿಸಲಾಯಿತು.


ಆಡು ಭಾಷೆಯಲ್ಲಿ ಈ ನಾಲ್ಕು ದೇಶಗಳ ಕೂಟವನ್ನು ಕ್ವಾಡ್ (ನಾಲ್ವರ ಕೂಟ) ಎಂದು ಕರೆಯಲಾಗುತ್ತದೆ. ಕ್ವಾಡ್ ಸದಸ್ಯರ ಪ್ರಕಾರ ಈ ಕೂಟವನ್ನು ಅಂತರರಾಷ್ಟ್ರೀಯ ಕಾನೂನುಗಳ ಬಗ್ಗೆ ಗೌರವ ಹಾಗೂ ನಿಯಮ ಬದ್ಧ ಆಳ್ವಿಕೆಯ ಆಧಾರದಲ್ಲಿ ಕಟ್ಟಿಕೊಳ್ಳಲಾಗಿದೆ.

Saturday, 24 April 2021

Anganwadi Worker / Helper

 

Applications for Recruitment of Anganwadi Worker / Helper





Women and Child Development in Davanagere District

 Applications have been invited for online applications from eligible female candidates to be appointed to the vacancies of 17 Anganwadi Workers and 63 Anganwadi Assistants in the Anganwadi Centers that fall under the Department's five child development projects.  It is requested to contact the relevant Child Development Planning Officers at office hours for further details.


Application start date:-
08-04-2021

Application close date :-
07-05-2021  5:30pm



HFI-Human Freedom Index

 2020ರ ಡಿಸೆಂಬರ್ 17 ರಂದು ಪ್ರಕಟವಾದ ಮಾನವ ಸ್ವಾತಂತ್ರ್ಯ ಸೂಚ್ಯಂಕದ ವರದಿಯನ್ವಯ ಭಾರತವು 162 ದೇಶಗಳ ವರದಿಯಲ್ಲಿ 111ನೇ ಸ್ಥಾನ ಪಡೆದಿದೆ.

 ಫ್ರೆಡ್ ಮ್ಯಾಕ್‌ಮೋಹನ್ ಮತ್ತು ಇಯಾನ್ ವಾಸ್‌ಕ್ವೆಜ್ ಅವರು ಈ ವರದಿಯ ಲೇಖಕರಾಗಿದ್ದಾರೆ. ಅಮೆರಿಕಾದ ಥಿಂಕ್‌ಟ್ಯಾಂಕ್ ಕ್ಯಾಟೋ ಇನ್‌ಸ್ಟಿಟ್ಯೂಟ್ ಮತ್ತು ಕೆನಡಾದ ಫೇಜರ್ ಇನ್‌ಸ್ಟಿಟ್ಯೂಟ್‌ ಜಂಟಿಯಾಗಿ ವರದಿ ಪ್ರಕಟಿಸಿವೆ. ಇದು ನಾಗರಿಕ, ಆರ್ಥಿಕ ಮತ್ತು ವೈಯಕ್ತಿಕ ಸ್ವಾತಂತ್ರಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿದೆ. 2019 ರ ವರದಿಯಲ್ಲಿ ಭಾರತವು 94ನೇ ಸ್ಥಾನ ಪಡೆದಿತ್ತು.


 2020ರ ವರದಿಯಲ್ಲಿ ಭಾರತವು ಒಟ್ಟಾರೆ ಬ್ಯಾಂಕಿಂಗ್‌ನಲ್ಲಿ 6.43 ಅಂಕ ಪಡೆದಿದೆ. ವೈಯಕ್ತಿಕ ಸ್ವಾತಂತ್ರದಲ್ಲಿ 6.3 ಅಂಕ, ಆರ್ಥಿಕ ಸ್ವಾತಂತ್ರ್ಯದಲ್ಲಿ 6.56 ಅಂಕ

ಪಡೆದಿವೆ. 


ನ್ಯೂಜಿಲೆಂಡ್, ಸ್ವಿಟ್ಟರ್ಲೆಂಡ್ ಮತ್ತು ಹಾಂಕಾಂಗ್ ದೇಶಗಳು ಈ ಸೂಚ್ಯಂಕದಲ್ಲಿ ಮೊದಲ 3 ಸ್ಥಾನ ಪಡೆದಿವೆ. ಸಿರಿಯಾ ದೇಶವು ವರದಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಭಾರತದ ಪ್ರಮುಖ ನೆರೆಯ ದೇಶ ಚೀನಾವು 129ನೇ ಸ್ಥಾನ ಮತ್ತು ಬಾಂಗ್ಲಾದೇಶವು 139ನೇ ಸ್ಥಾನ ಪಡೆದಿದೆ.




World's Highest Railway Bridge

 ಜಮ್ಮು-ಕಾಶ್ಮೀರದಲ್ಲಿ ಚಿನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ


ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆಯ (World's Highest Railway Bridge) ಪ್ರಮುಖ


ಭಾಗವಾಗಿರುವ ಬೃಹತ್ ಕಮಾನಿನ (Arch) ನಿರ್ಮಾಣ ಕಾರ್ಯವು 2021ರ ಏಪ್ರಿಲ್ ರಂದು 5 ಪೂರ್ಣಗೊಂಡಿದೆ. 5.6 ಮೀಟರ್


ಉದ್ದದ ಕೊನೆಯ ಲೋಹದ ಭಾಗವನ್ನು ಕಮಾನಿನ ಅತಿ ಎತ್ತರದ ಭಾಗದಲ್ಲಿ ಅಳವಡಿಸಲಾಯಿತು. ಕಮಾನಿನ ಆಕಾರವು ಪೂರ್ಣಗೊಂಡಿತು. ಈ ಮೂಲಕ ನದಿಯ ಎರಡೂ ದಡಗಳನ್ನು ಸೇರಿಸುವ ಕಮಾನನ್ನು ಜೋಡಿಸಿದಂತಾಗಿದೆ. ಈ ಸೇತುವೆಯ ಕಾಮಗಾರಿಯು 2 ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಇದು ಹೊಸ ಇತಿಹಾಸವನ್ನು ಸೃಷ್ಟಿಸಲಿದೆ.


ಸೇತುವೆಯ ವಿಶೇಷತೆ: ಉದಾಮ್‌ಪುರ-ಶ್ರೀನಗರ-ಬಾರಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಭಾಗವಾಗಿ 1.315 ಕಿ.ಮೀ (1,315 ಮೀಟರ್) ಉದ್ದದ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಸೇತುವೆಯು ನೆಲಮಟ್ಟದಿಂದ 359 ಮೀಟರ್ ಎತ್ತರವಿದ್ದು ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಿರಲಿದೆ. ಅಂದಾಜು 1,486 ಕೋಟಿ ರೂ. ಮೊತ್ತದ ಈ ಯೋಜನೆಯ ಪ್ರಮುಖ ಭಾಗವಾದ ಕಮಾನಿನ ಕಾಮಗಾರಿಯು ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಇತರೆ ತಾಂತ್ರಿಕ ಹಾಗೂ ಸಿವಿಲ್ ಕಾಮಗಾರಿಗಳು ತ್ವರಿತವಾಗಿ ಸಾಗುತ್ತಿವೆ. 28,660 ಮೆಟ್ರಿಕ್ ಟನ್ ಸ್ಟೀಲ್, 66 ಸಾವಿರ ಕ್ಯುಬಿಕ್ ಮೀಟರ್ ಕಾಂಕ್ರೀಟ್ ಬಳಕೆಯಾಗಲಿದೆ. ಗಂಟೆಗೆ 266 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯ ವೇಗ ಹಾಗೂ ಪ್ರಬಲ ಭೂಕಂಪವನ್ನು ತಡೆದುಕೊಳ್ಳುವಂತೆ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಸೇತುವೆಯು ಕಾಶ್ಮೀರ ಮತ್ತು ದೇಶದ ಇತರ ಭಾಗಗಳೊಂದಿಗೆ ಸರ್ವಋತು ಸಂಪರ್ಕ ಕಲ್ಪಿಸಲು ನೆರವಾಗಲಿದೆ. ಈ ಸೇತುವೆಯ ಆಯಸ್ಸು 120 ವರ್ಷಗಳಾಗಿದ್ದು, ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ರೈಲು ಪ್ರಯಾಣಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದ ನೆರೆಯ ರಾಷ್ಟ್ರಗಳು, ಪಟ್ಟಿ, ನಕ್ಷೆ, ರಾಜಧಾನಿಗಳು, ಧ್ವಜಗಳು

ಭಾರತದ ನೆರೆಯ ರಾಷ್ಟ್ರಗಳು ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ. UPSC ಗಾಗಿ ಭಾರತದ ನೆರೆಯ ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ     ಪರಿವಿಡಿ ಭಾರತದ ನೆರೆಯ ರಾಷ್ಟ್ರಗಳು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಭಾರತದ ಗಡಿಯಲ್ಲಿರುವ ದೇಶಗಳು. ಮ್ಯಾನ್ಮಾರ್ ಮತ್ತು ಶ್ರೀಲಂಕಾ ಭಾರತದೊಂದಿಗೆ ಕರಾವಳಿ ಗಡಿಯನ್ನು ಹಂಚಿಕೊಂಡಿವೆ. ಭಾರತದ ಭೂ ಗಡಿಯು 15,106.7 ಕಿಮೀ ಉದ್ದವಾಗಿದೆ ಮತ್ತು ಅದರ ಕರಾವಳಿ 7,516.6 ಕಿಮೀ ಉದ್ದವಾಗಿದೆ. ಏಕೈಕ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಮೂರು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ. ಈ ಲೇಖನದಲ್ಲಿ ನಾವು ಭಾರತದ ಗಡಿಯಲ್ಲಿರುವ ನೆರೆಯ ದೇಶಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಚೀನಾ ಮತ್ತು ರಷ್ಯಾ ನಂತರ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ದುರ್ಬಲ ಗಡಿಯಾಗಿದೆ, ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಒಳನುಸುಳುವಿಕ...

ಭಾರತದ ಪ್ರಮುಖ ಗವರ್ನರ್‌ಗಳು-ಜನರಲ್ ಮತ್ತು ವೈಸ್‌ರಾಯ್

  ಪರಿಚಯ 1600 ರ ಡಿಸೆಂಬರ್ 31 ರಂದು ಈಸ್ಟ್ ಇಂಡಿಯಾ ಕಂಪನಿಯು ರಾಣಿ ಎಲಿಜಬೆತ್ I ರಿಂದ ರಾಯಲ್ ಚಾರ್ಟರ್ ಪಡೆದಾಗ ಭಾರತದ ಮೇಲೆ ಬ್ರಿಟಿಷ್ ಆಡಳಿತವು ಒಂದು ವ್ಯಾಪಾರ ಘಟಕವಾಗಿ ಪ್ರಾರಂಭವಾಯಿತು . ಸುಮಾರು ಮೂರು ಶತಮಾನಗಳ ಅವಧಿಯಲ್ಲಿ , ಬ್ರಿಟಿಷರು ವ್ಯಾಪಾರ ಶಕ್ತಿಯಿಂದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದರು ಜಗತ್ತಿನಲ್ಲಿ . ಸಣ್ಣ ದ್ವೀಪ ದೇಶವಾದ ನಂತರವೂ ಬ್ರಿಟನ್ ವಿಶ್ವದ ಅತಿದೊಡ್ಡ ಸಾಮ್ರಾಜ್ಯಗಳಲ್ಲಿ ಒಂದನ್ನು ಸ್ಥಾಪಿಸಲು ಸಾಧ್ಯವಾಯಿತು .  " ಸೂರ್ಯನು ಎಂದಿಗೂ ಅಸ್ತಮಿಸದ ಸಾಮ್ರಾಜ್ಯ " ಎಂಬ   ಪದಗುಚ್ by ದಿಂದ ಸಾಮ್ರಾಜ್ಯದ ವ್ಯಾಪ್ತಿಯನ್ನು ಚಿತ್ರಿಸಬಹುದು   . ತನ್ನ ವಸಾಹತುಗಳಲ್ಲಿ ಸ್ಥಾಪಿಸಿದ ಬಲವಾದ ಮತ್ತು ಪರಿಣಾಮಕಾರಿ ಅಧಿಕಾರಶಾಹಿಯ ಹಿನ್ನೆಲೆಯಲ್ಲಿ ಬ್ರಿಟನ್ ಈ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು .  ಭಾರತದಲ್ಲಿ , ಗವರ್ನರ್ - ಜನರಲ್ ಮತ್ತು ವೈಸ್ ‌ ರಾಯ್ ‌ ಗಳ ಮೂಲಕ ಬ್ರಿಟಿಷರು ಈ ನಿಯಂತ್ರಣವನ್ನು ಸ್ಥಾಪಿಸಲು ಸಾಧ್ಯವಾಯಿತು . §   ಬಂಗಾಳದ ಗವರ್ನರ್ - ಜನರಲ್ (1773-1833):   ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದಾಗ , ಅದು " ಬಂಗಾಳದ ಗವರ್ನರ್ "  (   ಬಂಗಾಳದ   ಮೊದಲ ಗವರ್ನರ್ : ರಾಬರ್ಟ್ ಕ್ಲೈವ್ )   ಎಂಬ ಹುದ್ದೆ...

Criminal Procedure Bill in kannada

  ಕ್ರಿ ಮಿನಲ್ ಪ್ರೊಸೀಜರ್ ಬಿಲ್ ಈ ಸಂಪಾದಕೀಯವು ದಿ ಹಿಂದೂ 01/04/2022 ರಲ್ಲಿ ಪ್ರಕಟವಾದ “ಇದು   ಗೌಪ್ಯತೆಯ ಮೇಲಿನ ಕ್ರಿಮಿನಲ್ ಅಟ್ಯಾಕ್  ” ಅನ್ನು ಆಧರಿಸಿದೆ .   ಇದು ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022 ಗೆ ಸಂಬಂಧಿಸಿದ ಮಹತ್ವ ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡುತ್ತದೆ. ಪ್ರಿಲಿಮ್ಸ್‌ಗಾಗಿ:   ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022, ಗೌಪ್ಯತೆಯ ಹಕ್ಕು , ಕೆ.ಎಸ್.ಪುಟ್ಟಸ್ವಾಮಿ ತೀರ್ಪು , ಪ್ರಿವೆಂಟಿವ್ ಡಿಟೆನ್ಶನ್ , NCRB, ರಾಜ್ಯ ವಿರುದ್ಧ ರಾಮ್ ಬಾಬು ಮಿಶ್ರಾ ( 1980), ಡೇಟಾ ಸಂರಕ್ಷಣಾ ಕಾನೂನು , ಭಾರತದ ಕಾನೂನು ಆಯೋಗ , ಮೂಲಭೂತ ಹಕ್ಕುಗಳು ಮುಖ್ಯ ವಿಷಯಗಳಿಗೆ:   ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022 ಮತ್ತು ಸಮಸ್ಯೆಗಳು , ತೀರ್ಪುಗಳು ಮತ್ತು ಪ್ರಕರಣಗಳು , ಮೂಲಭೂತ ಹಕ್ಕುಗಳು ಇತ್ತೀಚೆಗೆ , ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರು   ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022   ಅನ್ನು   ಲೋಕಸಭೆಯಲ್ಲಿ   ಪರಿಚಯಿಸಿದರು , ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಪರಾಧದ ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತ ತನಿಖೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ. ಆದಾಗ್ಯೂ , ಬಯೋಮೆಟ್ರಿಕ್ ಮತ್ತು ಜೈವಿಕ ದತ್ತಾಂಶಗಳ ಸಂಗ್ರಹವನ್ನು ಸಕ್ರಿಯಗೊಳಿಸುವ ಪ್ರಸ್ತಾಪವು ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.