ಭಾರತದ ಸ್ವಾತಂತ್ರ್ಯ ಕಾಯ್ದೆ 1947 (Indian Independence Act 1947) ಭಾರತ ಮತ್ತು ಪಾಕಿಸ್ತಾನದ ರಚನೆಯನ್ನು ಮಾಡಿತು. 562 ದೇಶೀಯ ರಾಜ್ಯಗಳಿಗೆ ಭಾರತ ಅಥವಾ ಪಾಕಿಸ್ತಾನವನ್ನುಸೇರುವ ಇಲ್ಲವೇ ಸ್ವತಂತ್ರವಾಗಿರುವ ಆಯ್ಕೆ ನೀಡಿತು. ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಬಭಾಯಿ ಪಟೇಲ್ ಸ್ವತಂತ್ರವಾಗಿರಬಯಸಿದ್ದ ದೇಶೀಯ ರಾಜ್ಯಗಳನ್ನು ಭಾರತದ ಒಕ್ಕೂಟವನ್ನು ಸೇರುವಂತೆ ಮನವೊಲಿಸಿದರು. ವಿಲೀನ ಒಪ್ಪಂದಕ್ಕೆ (Irnstrument of Accesion) ಸಹಿ ಹಾಕಿದ ರಾಜರಿಗೆ ಸರ್ಕಾರವು ನಿಗದಿತ ಮೊತ್ತದ 'ರಾಜಧನವನ್ನು ನೀಡಿತು ಹಾಗು ಕೆಲವು ಸವಲತ್ತುಗಳನ್ನು ಮತ್ತು ಬಿರುದುಗಳನ್ನು ಹೊಂದಿರಲು ಅನುಮತಿಸಿತು. ಹೈದರಾಬಾದ್, ಕಾಶ್ಮೀರ ಹಾಗು ಜೂನಾಗಡದ ರಾಜರು ಭಾರತದ ಒಕ್ಕೂಟವನ್ನು ಸೇರಲು ನಿರಾಕರಿಸಿದರು. ಜೂನಾಗಡದ ನವಾಬ ಪಾಕಿಸ್ತಾನಕ್ಕೆ ಸೇರಲು ಪ್ರಯತ್ನಗಳನ್ನು ನಡೆಸಿದ್ದ ಹಾಗು ಜನರು ಅವನ ವಿರುದ್ಧ ದಂಗೆಯೆದ್ದದ್ದರಿಂದ ನವಾಬ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಸರ್ದಾರ್ ಪಟೇಲರು ಜೂನಾಗಡವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು. ಕಾಶ್ಮೀರದ ರಾಜ ಹರಿಸಿಂಗ್ ಭಾರತದ ಒಕ್ಕೂಟವನ್ನು ಸೇರುವ ನಿರ್ಧಾರವನ್ನು ನಿಧಾನ ಮಾಡುತ್ತಿದ್ದುದರಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ದಾಳಿ ಕೋರರನ್ನು ಕಳುಹಿಸುವ ಅವಕಾಶ ಪಾಕಿಸ್ತಾನಕ್ಕೆ ದೊರೆಯಿತು. ಭಾರತದ ಸೇನೆಯು ಈ ದಾಳಿಕೋರರನ್ನು ಹಿಮ್ಮೆಟ್ಟಿಸಿತು. ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್‌ಫರೆನ್ಸ್‌ನ ನಾಯಕರಾದ ಷೇಕ್ ಅಬ್ದುಲ್ಲಾ ಭಾರತದ ಒಕ್ಕೂಟವನ್ನು ಸೇರಲು ಒಪ್ಪಿದರು. ಆಗಿನಿಂದಲೂ ಪಾಕಿಸ್ತಾನ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಅನೇಕ ಸಲ ಪ್ರಯತ್ನಿಸಿದೆ ಹಾಗು ಕಾಶ್ಮೀರದ ಹಲವು ಭಾಗಗಳನ್ನು ವಶಪಡಿಸಿಕೊಂಡಿದೆ. ಭಾರತದಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಆದು ಈಗ ಭಯೋತ್ಪಾದಕರನ್ನು ಕಳುಹಿಸುತ್ತಿದೆ. ಪೊಲೀಸ್ ಕಾರ್ಯಾಚರಣೆಯ ನಂತರ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸಲಾಯಿತು. ಹೈದರಾಬಾದಿನ ಜನರ ಮೇಲೆ ನಿಜಾಮನ ದಬ್ಬಾಳಿಕೆಯಿಂದಾಗಿ ಈ ಕ್ರಮ ಅನಿವಾರ್ಯ ವಾಯಿತು.
ರಾಜ್ಯಗಳ ಪುನರ್ ಸಂಘಟನೆ:
ಹೈದರಾಬಾದಿನ ವಿಲೀನದ ನಂತರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತೆಲುಗು ಭಾಷೆಯನ್ನು ಮಾತನಾಡುವ ಜನರನ್ನೆಲ್ಲಾ ಒಗ್ಗೂಡಿಸಿ, ಆಂಧ್ರಪ್ರದೇಶವನ್ನು ಸೃಷ್ಟಿಸಲು ಒಪ್ಪಿತು, ಹೊಟ್ಟಿ ಶ್ರೀರಾಮುಲು ಆಂಧ್ರಪ್ರದೇಶದ ರಚನೆಯನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿ 58ನೇ ದಿನದಂದು 1952ರಲ್ಲಿ ಸಾವನ್ನಪ್ಪಿದರು. ಇದು ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿರ್ಮಿಸಿತು. ಈ ಪುಬ್ಧತೆಯು ಭಾಷೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಏಕೀಕರಣವನ್ನು ಬಯಸುತ್ತಿದ್ದ ಇತರೆ ಸಾಂತ್ಯಗಳಿಗೂ ಪರಡಿತು.
ಕನ್ನಡ ಮಾತನಾಡುತ್ತಿದ್ದ ಪ್ರದೇಶಗಳೂ ಏಕೀಕರಣ ಬಯಸುತ್ತಿದ್ದವು. ಆದರೆ ಆ ಪ್ರದೇಶಗಳು ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯಾಡಳಿತ ಹಾಗು ಉಳಿದ ಭಾಗಗಳು ಮೈಸೂರು ರಾಜ್ಯ, ಹೈದರಾಬಾದ್, ಸಾಂಗ್ಲಿ, ಮೀರಜ್, ಜಮಖಂಡಿ, ಸಂಡೂರು, ಸವಣೂರು, ಮುಧೋಳ, ಅಕ್ಕಲ್‌ಕೋಟೆ, ಜತ್ತ, ರಾಮದುರ್ಗ, ಮುಂತಾದ ದೇಶೀಯ ಆಡಳಿತಗಳಲ್ಲಿದ್ದವು.
ಐಕ್ಯತೆಗೆ ಕಾರಣವಾದ ಪ್ರಮುಖ ಅಂಶಗಳು
1. ಸಂಯುಕ್ತ ಕರ್ನಾಟಕ, ವಿಶಾಲ ಕರ್ನಾಟಕ, ಕರ್ನಾಟಕ ವೃತ್ತ ಮುಂತಾದ ವೃತ್ತ ಪತ್ರಿಕೆಗಳು,
2. ಆಲೂರು ವೆಂಕಟರಾಯರ ಪ್ರಸಿದ್ಧ ಕೃತಿ 'ಕರ್ನಾಟಕ ಗತ ವೈಭವ' ಮತ್ತು ಅಂತಹ ಇತರ ಕೃತಿಗಳು. 3. ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ಸಾಹಿತ್ಯ ಪರಿಷತ್, ಮುಂತಾದ ಸಂಘ-ಸಂಸ್ಥೆಗಳು,
4. ಹುಯಿಲಗೋಳ ನಾರಾಯಣರಾಯರ 'ಉದಯವಾಗಲಿ
ನಮ್ಮ ಚೆಲುವ ಕನ್ನಡ ನಾಡು, ಶಾಂತ
ಕವಿಯ 'ರಕ್ಷಿಸು ಕರ್ನಾಟಕ ದೇವಿ', ಕುವೆಂಪುರವರ 'ಜಯ ಭಾರತ ಜನನಿಯ ತನುಜಾತೆ' ಬಿ.ಎಂ.ಶ್ರೀಯವರ 'ಏರಿಸು ಹಾರಿಸು ಕನ್ನಡದ ಬಾವುಟ', ಮಂಗೇಶ ಪೈಯವರ 'ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೇ' ಮುಂತಾದ ಕವನಗಳು 5. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಕರ್ನಾಟಕ ಸಭಾ, ಮುಂತಾದವು ಏಕಿಕರಣದ ಕಾರ್ಯವನ್ನು
ಕೈಗೆತ್ತಿಕೊಂಡವು. ಕರ್ನಾಟಕ ಸಭಾ ಮುಂದೆ ಕರ್ನಾಟಕ ಏಕೀಕರಣ ಸಮಿತಿಯಾಯಿತು. ಸಿದ್ದಪ ಕಂಬ್ಳೆ ಇದರ ಪ್ರಥಮ ಅಧ್ಯಕ್ಷರಾಗಿದ್ದರು.
6. ಭಾಷಾಧಾರಿತ ರಾಜ್ಯಗಳ ರಚನೆಯನ್ನು ಗಾಂಧೀಜಿ ಸಹ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಒಪ್ಪಿಕೊಂಡರು. 7. 1928ರ ನೆಹರೂ ಸಮಿತಿ ಕರ್ನಾಟಕದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತ್ತು.
8. ಆಲೂರು ವೆಂಕಟರಾಯರು, ಸಿದ್ದಪ್ಪ ಕಂಬಿ, ಗುದ್ದೆಪ್ಪ ಹಳ್ಳಿಕೇರಿ, ಆರ್.ಎಚ್. ದೇಶಪಾಂಡೆ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಶ್ರೀನಿವಾಸರಾವ್ ಮಂಗಳವೇಡೆ, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ಅಂದಾನಪ್ಪ ದೊಡ್ಡಮೇಟಿ ಮುಂತಾದ ನಾಯಕರ ಪ್ರಯತ್ನಗಳು.
ರಾಜ್ಯಗಳ ಪುನರ್‌ರಚನೆಯ ಪ್ರಶ್ನೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು 'ಧಾರ್ ಸಮಿತಿಯನ್ನು ನೇಮಿಸಿತು. ಈ ಸಮಿತಿಯು
ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ತಿರಸ್ಕರಿಸಿತು ಹಾಗು ಇದು ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯುಂಟು ಮಾಡುತ್ತದೆ' ಎಂದು ಅಭಿಪ್ರಾಯಪಟ್ಟಿತು. ಇದರಿಂದ ಜನರು ಅತೃಪ್ತಗೊಂಡರು ಮತ್ತು ಹೋರಾಟಗಳು ಮುಂದುವರೆದವು. 1949ರಲ್ಲಿ ಜೆ.ವಿ.ಪಿ ಸಮಿತಿ'ಯನ್ನು (ಜವಹಾರ್‌ಲಾಲ್ ನೆಹರು, ವಲ್ಲಬಭಾಯಿ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ) ರಚಿಸಲಾಯಿತು. ಈ ಸಮಿತಿಯು ಆಂಧ್ರಪ್ರದೇಶದ ರಚನೆಗೆ ಒಪ್ಪಿಗೆ ಸೂಚಿಸಿತಾದರೂ ಕರ್ನಾಟಕದ ರಚನೆಯನ್ನು ತಿರಸ್ಕರಿಸಿತು. ಆಗ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಅಂದಾನಪ್ಪ ದೊಡ್ಡಮೇಟಿ ಬಾಂಬೆ ಶಾಸನ ಸಭೆಗೆ ರಾಜೀನಾಮೆ ನೀಡಿ, ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಉಪವಾಸವನ್ನು ಆರಂಭಿಸಿದರು. ಅಂತಿಮವಾಗಿ ರಾಜ್ಯಗಳ ಪುನರ್ವಿಂಗಡನಾ ಸಮಿತಿಯನ್ನು 1953ರಲ್ಲಿ ರಚಿಸಲಾಯಿತು. ಈ ಸಮಿತಿಯಲ್ಲಿ ಫಜಲ್ ಆಲಿ ಚೇರಮನ್ನರಾಗಿದ್ದರು ಮತ್ತು ಎಚ್.ಎನ್, ಬಂಜು ಹಾಗು ಕೆ.ಎಂ. ಪಣಿಕ್ಕರ್ ಸದಸ್ಯರಾಗಿದ್ದರು. ಆದ್ದರಿಂದ ಇದನ್ನು 'ಫಜಲ್ ಅಲಿ ಸಮಿತಿ' ಎಂದೂ ಕರೆಯಲಾಗಿದೆ. 1955ರಲ್ಲಿಅದು ವರದಿ ಸಲ್ಲಿಸಿತು. ಈ ಸಮಿತಿಯ ಶಿಫಾರಸ್ಸುಗಳು 1 ನವೆಂಬರ್ 1956ರಂದು ಅನುಷ್ಠಾನಗೊಂಡು ಮನರ್ ಸಂಘಟಿತ ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದಿತು. ಇದನ್ನು ಹೊಸ ಮೈಸೂರು ರಾಜ್ಯ ಎಂದು ಕರೆಯಲಾಯಿತು.
ಹಳೆಯ ಮೈಸೂರು ರಾಜ್ಯ, ಹೈದರಾಬಾದ್ ಪ್ರಾಂತ್ಯದಿಂದ ರಾಯಚೂರು, ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳು, ಬಾಂಬೆ ಪ್ರಾಂತ್ಯದಿಂದ ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗು ಮದ್ರಾಸ್ ಪ್ರಾಂತ್ಯದಿಂದ ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಕೊಳ್ಳೇಗಾಲ ಹಾಗು ಕೊಡಗುಗಳನ್ನು ಒಗ್ಗೂಡಿಸಿ 1 ನವೆಂಬರ್ 1956ರಂದು ಏಕೀಕೃತ ನವ ಮೈಸೂರು ರಾಜ್ಯ ರಚಿಸಲ್ಪಟ್ಟಿತು. ಇದರಲ್ಲಿ 19ಜಿಲ್ಲೆಗಳಿದ್ದವು, ಎಸ್. ನಿಜಲಿಂಗಪ್ಪನವರು ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. 1 ನವೆಂಬರ್ 1973ರಂದು ಇದು ಕರ್ನಾಟಕ ಎಂದು ಮರು ನಾಮಕರಣಗೊಂಡಿತು. ಆಗ ದೇವರಾಜ ಅರಸ್ ಮುಖ್ಯಮಂತ್ರಿಯಾಗಿದ್ದರು.
ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು https://www.mahitiloka.co.in/2021/05/blog-post_26.html ಮೈಸೂರು ಒಂದು ಮಾದರಿ ರಾಜ್ಯ https://www.mahitiloka.co.in/2021/05/blog-post_38.html