MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!
ಸ್ನೇಹಿತರೆ ಪಿಯುಸಿ ಪ್ರಥಮ ವರ್ಷದ ಭೂಗೋಳಶಾಸ್ತ್ರ
ವಿಷಯದ ಪಾಠ ಒಂದು ಮತ್ತು ಎರಡರಿಂದ ಪ್ರಮುಖವಾದ ಪ್ರಶ್ನೆಗಳನ್ನು ಆಯ್ಕೆ ಮಾಡಲಾಗಿದೆ ಈ ಕೆಳಗೆ ನೀಡಲಾದ ಆನ್ಲೈನ್ ಪರೀಕ್ಷೆಗೆ ಹಾಜರಾಗಿ
ಸ್ನೇಹಿತರೆ ಈ ಕೆಳಕಾಣಿಸಿದ ಲಿಂಕಗಳ
ಮೂಲಕ ವಿವಿಧ ವಿಷಯಗಳ ಮೇಲೆ ಪಠ್ಯವನ್ನು ನೀಡಲಾಗಿದೆ ಅದರ ಜೊತೆಗೆ ಅದಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಕ್ವಿಜ್ ಮೂಲಕ ನೀಡಲಾಗಿದೆ ಕೆಳಕಾಣಿಸಿದ
Link ಗಳನ್ನು ಓಪನ್ ಮಾಡಿ ಆನ್ಲೈನ್ ಕ್ವಿಜ್ ಅಟೆಂಡ್ ಮಾಡಿ
ಮೌರ್ಯರು
https://www.mahitiloka.co.in/2021/05/324-180.html
ಜೈನ ಧರ್ಮದ ಬಗ್ಗೆ ಪ್ರಮುಖ ಪ್ರಶ್ನೆಗಳು
https://www.mahitiloka.co.in/2021/05/blog-post_28.html
ಕರ್ನಾಟಕ ಏಕೀಕರಣ
https://www.mahitiloka.co.in/2021/05/blog-post_27.html
ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು
https://www.mahitiloka.co.in/2021/05/blog-post_26.html
ಮೈಸೂರು ಒಂದು ಮಾದರಿ ರಾಜ್ಯ
https://www.mahitiloka.co.in/2021/05/blog-post_38.html
ಭೂಮಿ ನಮ್ಮ ಜೀವಂತ ಗ್ರಹ
https://www.mahitiloka.co.in/2021/05/blog-post_37.html
ರಾಷ್ಟ್ರಕೂಟರು
https://www.mahitiloka.co.in/2021/05/blog-post_48.html
ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
https://www.mahitiloka.co.in/2021/05/blog-post_91.html
📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
📌https://www.mahitiloka.co.in/2021/05/blog-post_20.html
➡ ಕೃಷಿ ವಿಧಗಳು
➡ ವಾಯುಮಂಡಲದ ರಚನೆ
➡ ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು
ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ
🙏🙏🙏🙏🙏🙏🙏🙏🙏🙏🙏🙏🙏
OUR SOCIAL LINKS ;-
YOU TUBE :-https://youtube.com/c/SGKKANNADA
TELEGRAM :-https://telegram.me/s/spardhakiran
INSTAGRAM :-https://instagram.com/shoyal2000?utm_medium=copy_link
FACE BOOK :-https://www.facebook.com/SGK-Kannada-112808230846685/
SHARECHAT :-https://b.sharechat.com/s2xoaNCEW7
https://b.sharechat.com/KaG9DabEGcb
ಮೌರ್ಯ ಸಾಮ್ರಾಜ್ಯವು ಭಾರತದ ಮೊದಲ ಮಹಾನ್ ಸಾಮ್ರಾಜ್ಯವಾಗಿದೆ. ಅವರ ಅಧಿಕಾರದ ಅವಧಿಯಲ್ಲಿ ಅನೇಕ ಸಣ್ಣಪುಟ್ಟ ಸಂಸ್ಥಾನಗಳನ್ನು ಒಟ್ಟುಗೂಡಿಸಿ, ಏಕಚಕ್ರಾಧಿಪತ್ಯದಡಿಯಲ್ಲಿ ತರಲಾಯಿತು. ಮೊದಲ ಬಾರಿಗೆ ಭಾರತ ರಾಜಕೀಯ ಐಕ್ಯತೆಯನ್ನು ಸಾಧಿಸಿತು. ಮೌರ್ಯರು ಭಾರತದ ವಾಯುವ್ಯ ಭಾಗವನ್ನು ವಿದೇಶೀಯರ ಆಳ್ವಿಕೆಯಿಂದ ಮುಕ್ತಗೊಳಿಸಿದ್ದಲ್ಲದೆ ಹಲವಾರು ಶತಮಾನಗಳ ಕಾಲ ಮುಂದುವರೆದ ಏಕರೂಪದಆಡಳಿತ ಜಾರಿಗೆ ತಂದರು. ಚಂದ್ರಗುಪ್ತ ಮೌರ್ಯ ಈ ವಂಶದ ಸ್ಥಾಪಕ. ಪಾಟಲೀಪುತ್ರ (ಇಂದಿನ ಪಾಟ್ನಾ) ಅವರ ರಾಜಧಾನಿಯಾಗಿತ್ತು. ಧರ್ಮಚಕ್ರ ಅವರ ರಾಜ ಲಾಂಛನವಾಗಿತ್ತು.
ಜೈನ ಧರ್ಮದ ಬಗ್ಗೆ ಪ್ರಮುಖ ಪ್ರಶ್ನೆಗಳು
https://www.mahitiloka.co.in/2021/05/blog-post_28.html
ಕರ್ನಾಟಕ ಏಕೀಕರಣ
https://www.mahitiloka.co.in/2021/05/blog-post_27.html
ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು
https://www.mahitiloka.co.in/2021/05/blog-post_26.html
ಮೈಸೂರು ಒಂದು ಮಾದರಿ ರಾಜ್ಯ
https://www.mahitiloka.co.in/2021/05/blog-post_38.html
ಭೂಮಿ ನಮ್ಮ ಜೀವಂತ ಗ್ರಹ
https://www.mahitiloka.co.in/2021/05/blog-post_37.html
ರಾಷ್ಟ್ರಕೂಟರು
https://www.mahitiloka.co.in/2021/05/blog-post_48.html
ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
https://www.mahitiloka.co.in/2021/05/blog-post_91.html
📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
📌https://www.mahitiloka.co.in/2021/05/blog-post_20.html
➡ ಕೃಷಿ ವಿಧಗಳು
➡ ವಾಯುಮಂಡಲದ ರಚನೆ
➡ ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು
ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ
🙏🙏🙏🙏🙏🙏🙏🙏🙏🙏🙏🙏🙏
OUR SOCIAL LINKS ;-
YOU TUBE :-https://youtube.com/c/SGKKANNADA
TELEGRAM :-https://telegram.me/s/spardhakiran
INSTAGRAM :-https://instagram.com/shoyal2000?utm_medium=copy_link
FACE BOOK :-https://www.facebook.com/SGK-Kannada-112808230846685/
SHARECHAT :-https://b.sharechat.com/s2xoaNCEW7
https://b.sharechat.com/KaG9DabEGcb
ಚಂದ್ರಗುಪ್ತಮೌರ್ಯನ ಮೂಲಕ್ಕೆ ಸಂಬಂಧಿಸಿದಂತೆ ಅನೇಕ
ಸಿದ್ಧಾಂತಗಳಿವೆ.
1. ವಿಶಾಖದತ್ತನ ಮುದ್ರಾರಾಕ್ಷಸ ಚಂದ್ರಗುಪ್ತಮೌರ್ಯನನ್ನು ಮಯೂರ ಸುತನೆಂದು ಕರೆದಿದೆ.
2. ಜೈನ ಸಾಹಿತ್ಯವು ಅವನು ನವಿಲುಗಳನ್ನು ಸಾಕುವ ಅಥವಾ ಮಯೂರ ಪೋಷಕ ಪಂಗಡಕ್ಕೆ ಸೇರಿದವನು ಎಂದು ಹೇಳುತ್ತದೆ.
3. 'ಮೌರ್ಯ' ಎಂಬ ಪದವು ಮಗಧ ಸಾಮ್ರಾಜ್ಯದ ನಂದರಾಜನ ಉಪಪತ್ನಿ ಎನ್ನಲಾದ 'ಮುರಾ' ಎಂಬುವವಳಿಂದ ಉತ್ಪತ್ತಿಯಾಗಿದೆ.
4. ಬೌದ್ಧ ಸಾಹಿತ್ಯ ಮಹಾವಂಶದ ಪ್ರಕಾರ, ಅವನು ಪಿಪ್ಪಲವನವನ್ನು ಆಳುತ್ತಿದ್ದ 'ಮೋರಿಯಾ' ಎಂಬ ಕ್ಷತ್ರಿಯ ಕುಲಕ್ಕೆ ಸೇರಿದವನು. ಅನೇಕ ಇತಿಹಾಸಕಾರರು ಈ ಅಭಿಪ್ರಾಯವನ್ನು ಒಪ್ಪಿದ್ದಾರೆ.
ಅಧಾರಗಳು:
ಮೌರ್ಯರ ಇತಿಹಾಸವನ್ನು ತಿಳಿಯಲು ನಮಗೆ ಸಹಾಯವಾಗಿರುವ ಪ್ರಮುಖ ಆಧಾರಗಳೆಂದರೆ,
1. ಕೌಟಿಲ್ಯನ ಅರ್ಥಶಾಸ್ತ್ರ
2. ಮೆಗಾಸ್ಥನೀಸನ ಇಂಡಿಕಾ
3. ವಿಶಾಖದತ್ತನ ಮುದ್ರಾರಾಕ್ಷಸ
4. ಆಶೋಕನ ಶಾಸನಗಳು
5, ಸಾರಕಗಳು
6. ಸಿಲೋನಿನ ಕೃತಿಗಳಾದ ದೀಪವಂಶ ಮತ್ತು ಮಹಾವಂಶ
ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕ, ಆದಾಗ್ಯೂ ಚಂದ್ರಗುಪ್ತಮೌರ್ಯನ ಬಗೆಗೆ ತಿಳಿದಿರುವ ಸಂಗತಿ ತುಂಬಾ ಕಡಿಮೆ, ತಂದೆಯನ್ನು ಕಳೆದುಕೊಂಡಿದ್ದ ಚಂದ್ರಗುಪ್ತಮೌರ್ಯನನ್ನು ತಕ್ಷಶಿಲೆಯ ವಾಹನಾದ ಚಾಣಕ್ಯನು ಕರೆದೊಯ್ದು ಅಗತ್ಯ ಶಿಕ್ಷಣವನ್ನು ನೀಡಿದನು. ಮೌರ್ಯಸಾಮಾಜ್ಯವನ್ನು ಸ್ಥಾಪಿಸುವಲ್ಲಿ ಆತನು ಚಂದ್ರಗುಪ್ತಮೌರ್ಯನಿಗೆ ಸಹಾಯ ಮಾಡಿದನು.
ಪಂಜಾಬ್ ಮತ್ತು ಮಗದಗಳ ದಿಗ್ವಿಜಯ
ಚಾಣಕ್ಯನ ಮಾರ್ಗದರ್ಶನದಡಿಯಲ್ಲಿ ಚಂದ್ರಗುಪ್ತನು ಒಂದು ಬಲಿಷ್ಠ ಸೈನ್ಯವನ್ನು ಕಟ್ಟಿದನು. ಪಂಜಾಬಿನ ಸಣ್ಣ ರಾಜರುಗಳನ್ನು ಸೋಲಿಸಿ ಅದನ್ನು ವಶಪಡಿಸಿಕೊಂಡನು. ಆನಂತರ ಮಗಧ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದನು. ನಂದರ ಕೊನೆಯ ದೊರೆ ಧನನಂದನನ್ನು ಕೊಂದು ಆತನ ಕ್ರೂರ ಆಡಳಿತವನ್ನು ಕೊನೆಗಾಣಿಸಿ, ಮೌರ್ಯ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದನು.
ಸಲ್ಕುಕಪ್‌ನೊಂದಿಗೆ ಯುದ್ಧ
ಅಲೆಕ್ಸಾಂಡರನು ಭಾರತದ ವಾಯುವ್ಯ ಭಾಗಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿ, ಅವುಗಳನ್ನು ಆಳಲು ತನ್ನ ಪ್ರತಿನಿಧಿಗಳನ್ನು ನೇಮಿಸಿದ್ದನು. ಚಂದ್ರಗುಪ್ತಮೌರ್ಯನು ಅವರನ್ನು ಸೋಲಿಸಿ, ಅವರ ಪ್ರದೇಶಗಳನ್ನು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು. ಆಲೆಗ್ಲಾಂಡರನ ಮರಣಾನಂತರ ಮಧ್ಯ ಏಷ್ಯಾದಲ್ಲಿಯ ಗ್ರೀಕ್ ಸಾಮ್ರಾಜ್ಯಕ್ಕೆ ಸೆಲ್ಯುಕಸ್ ಅಧಿಪತಿಯಾದನು. ಸಾ.ಶ.ಪೂ. 305ರಲ್ಲಿ ಅಲೆಕ್ಸಾಂಡರ್ ಹೊಂದಿದ್ದ ಭಾರತೀಯ ಪ್ರದೇಶಗಳನ್ನು ಮುನ: ವಶಪಡಿಸಿಕೊಳ್ಳಲು ಸಿಂಧೂ ನದಿಯನ್ನು ದಾಟಿ ಬಂದನು. ಚಂದ್ರಗುಪ್ತಮೌರ್ಯ ಆವನನ್ನು ಸೋಲಿಸಿದನು. ಆದ್ದರಿಂದ ಸೆಲ್ಯುಕಸ್ ಚಂದ್ರಗುಪ್ತನೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕಾಯಿತು. ಆದರಂತೆ, ಅವನು ಕಾಬೂಲ್, ಆಫ್ಘಾನಿಸ್ಥಾನ, ಕಾಂದಹಾರ ಮತ್ತು ಬಲೂಚಿಸ್ಥಾನಗಳನ್ನೊಳಗೊಂಡ ವಿಸ್ತಾರವಾದ ಪ್ರದೇಶವನ್ನು ಚಂದ್ರಗುಪ್ತಮೌರ್ಯನಿಗೆ ನೀಡಿದನು. ಚಂದ್ರಗುಪ್ತಮೌರ್ಯನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಟ್ಟನು. ಇದಕ್ಕೆ ಪ್ರತಿಯಾಗಿ ಚಂದ್ರಗುಪ್ತಮೌರ್ಯನು ಯುದ್ಧ ತರಬೇತಿ ಹೊಂದಿದ್ದ 500 ಆನೆಗಳನ್ನು ಅವನಿಗೆ ಬಳುವಳಿಯಾಗಿ ನೀಡಿದನು. ಸೆಲ್ಯುಕಸ್‌ನು ಮೌರ್ಯರೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದಲ್ಲದೇ ಮೆಗಾಸ್ಟನೀಸನನ್ನು ಪಾಟಲೀಪತ್ರಕ್ಕೆ ರಾಯಭಾರಿಯಾಗಿ ಕಳುಹಿಸಿದ್ದನು.
ಚಂದ್ರಗುಪ್ತಮೌರ್ಯನು ಇನ್ನೂ ಅನೇಕ ಸೇನಾ ದಿಗ್ವಿಜಯಗಳನ್ನು ಕೈಗೊಂಡು ಒಂದು ಬೃಹತ್ ಸಾಮ್ರಾಜ್ಯ ಸ್ಥಾಪಿಸಿದನೆಂದು ಹೇಳಲಾಗಿದೆ. ಆದರೆ, ಆ ಎಲ್ಲಾ ದಿಗ್ವಿಜಯಗಳ ಬಗ್ಗೆ ನಾವು ಸ್ಪಷ್ಟ ಚಿತ್ರಣ ಹೊಂದಿಲ್ಲ. ಅದೇ ರೀತಿಯಾಗಿ ಆತನ ಸಾಮ್ರಾಜ್ಯದ ಎಲ್ಲೆಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.
ಜೈನ ಸಂಪ್ರದಾಯದ ಪ್ರಕಾರ, ಚಂದ್ರಗುಪ್ತನು ತನ್ನ ಆಳ್ವಿಕೆಯ ಕೊನೆಯ ದಿನಗಳಲ್ಲಿ ಸಿಂಹಾಸನವನ್ನು ಭದ್ರಬಾಹುವಿನ ಪ್ರಭಾವದಿಂದ ಜೈನಧರ್ಮವನ್ನು ಸ್ವೀಕರಿಸಿದನು. ತನ್ನ ಕೊನೆಯ ದಿನಗಳನ್ನು ಕರ್ನಾಟಕದ ಶ್ರವಣಬೆಳಗೊಳದಲ್ಲಿ ಕಳೆದನು ಮತ್ತು ಸಾಶಪ್: 300ರಲ್ಲಿ 'ಸಲ್ಲೇಖನ'ವನ್ನು ಆಚರಿಸಿ ಪ್ರಾಣತ್ಯಾಗ ಮಾಡಿದನು. ಆತನು ನೆಲೆಸಿದ್ದ ಬೆಟ್ಟವು 'ಚಂದ್ರಗಿರಿ'ಯೆಂದು, ಆತನಿಂದ ನಿರ್ಮಿಸಲ್ಪಟ್ಟ
ತ್ಯಜಿಸಿ, ಜೈನವಿದ್ವಾಂಸ
ದೇವಾಲಯವು 'ಚಂದ್ರಗುಪ್ತ ಬಸದಿ'ಯೆಂದು ಹೆಸರಾಗಿದೆ.
ಜೈನ ಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಈ ಧರ್ಮದಲ್ಲಿ 24 ತೀರ್ಥಂಕರರಿದ್ದಾರೆಂದು ಮತ್ತು ಮೊದಲ ತೀರ್ಥಂಕರನಾದ ವೃಷಭನಾಥನು ಜೈನ ಧರ್ಮವನ್ನು ಸ್ಥಾಪಿಸಿದನೆಂದು ಜೈನರು ನಂಬುತ್ತಾರೆ. 23ನೇ ತೀರ್ಥಂಕರ ಪಾರ್ಶ್ವನಾಥ ಮತ್ತು 24ನೇ ತೀರ್ಥಂಕರ ಮಹಾವೀರರಾಗಿರುತ್ತಾರೆ. |
ಕರ್ನಾಟಕ ಏಕೀಕರಣ
https://www.mahitiloka.co.in/2021/05/blog-post_27.html
ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು
https://www.mahitiloka.co.in/2021/05/blog-post_26.html
ಮೈಸೂರು ಒಂದು ಮಾದರಿ ರಾಜ್ಯ
https://www.mahitiloka.co.in/2021/05/blog-post_38.html
ಭೂಮಿ ನಮ್ಮ ಜೀವಂತ ಗ್ರಹ
https://www.mahitiloka.co.in/2021/05/blog-post_37.html
ರಾಷ್ಟ್ರಕೂಟರು
https://www.mahitiloka.co.in/2021/05/blog-post_48.html
ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
https://www.mahitiloka.co.in/2021/05/blog-post_91.html
📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
📌https://www.mahitiloka.co.in/2021/05/blog-post_20.html
➡ ಕೃಷಿ ವಿಧಗಳು
➡ ವಾಯುಮಂಡಲದ ರಚನೆ
➡ ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು
ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ
🙏🙏🙏🙏🙏🙏🙏🙏🙏🙏🙏🙏🙏
OUR SOCIAL LINKS ;-
YOU TUBE :-https://youtube.com/c/SGKKANNADA
TELEGRAM :-https://telegram.me/s/spardhakiran
INSTAGRAM :-https://instagram.com/shoyal2000?utm_medium=copy_link
FACE BOOK :-https://www.facebook.com/SGK-Kannada-112808230846685/
SHARECHAT :-https://b.sharechat.com/s2xoaNCEW7
https://b.sharechat.com/KaG9DabEGcb
'ಸ್ವಸ್ತಿಕ್' ಜೈನ ಧರ್ಮದ ಪವಿತ್ರ ಚಿಹ್ನೆಯಾಗಿದೆ.
ಸ್ವಸ್ತಿಕ್ ಚಿಹ್ನೆ
ಪಾರ್ಶ್ವನಾಥ 30ನೇ ವಯಸ್ಸಿಗೆ ಪರಮ ಜ್ಞಾನ ಪಡೆದುಕೊಂಡನು. ಅವನು ನಾಲ್ಕು ಮಹಾನ್ ತತ್ವಗಳನ್ನು ಬೋಧಿಸಿದನು. ಅವುಗಳೆಂದರೆ:
1. ಅಹಿಂಸೆ
2. ಸತ್ಯ.
3, ಆಸ್ತೇಯ- ಕಳ್ಳತನಮಾಡದಿರುವುದು.
4. ಅಪರಿಗ್ರಹ- ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತನ್ನು ಹೊಂದದಿರುವುದು. ಈ ಬೋಧನೆಗಳು ಜೈನ ಧರ್ಮದ ಮೂಲಭೂತ ತತ್ವಗಳಾಗಿವೆ.
ವರ್ಧಮಾನನು ವೈಶಾಲಿ ಸಮೀಪದ ಕುಂದಗ್ರಾಮದಲ್ಲಿ ಸಾ.ಶ.ಪೂ 599ರಲ್ಲಿ ಜನಿಸಿದನು. ಅವನ ತಂದೆ ರಾಜ ಸಿದ್ಧಾರ್ಥ ಮತ್ತು ತಾಯಿ ರಾಣಿ ತ್ರಿಶಾಲದೇವಿ. ಸಿದ್ಧಾರ್ಥನು ಕ್ಷತ್ರಿಯ ಕುಲವೊಂದರ ಮುಖ್ಯಸ್ಥನಾಗಿದ್ದನು.
ವರ್ಧಮಾನ 18ನೇ ವಯಸ್ಸಿನಲ್ಲಿ ರಾಜಕುಮಾರಿ ಯಶೋಧಳನ್ನು ವಿವಾಹವಾದನು. ಅವನಿಗೆ ಅನೊಜ್ಜ ಆಥವಾ ಪ್ರಿಯದರ್ಶಿನಿ ಎಂಬ ಮಗಳಿದ್ದಳು. ತನ್ನ ತಂದೆ ತಾಯಿಯರ ಆಕಸ್ಮಿಕ ಮರಣದಿಂದ ವರ್ಧಮಾನ ಉಡುಪನ್ನೂ ಸೇರಿದಂತೆ ಪ್ರಾಪಂಚಿಕ ಸುಖಭೋಗಗಳನ್ನು ತ್ಯಜಿಸಿದನು. ಅವನು ಸನ್ಯಾಸಿಯಾಗಿ ಜೀವನದ ಸತ್ಯವನ್ನರಸುತ್ತಾ ಸಂಚಾರ ಹೊರಟನು. ಅವನು 13 ವರ್ಷಗಳ ಕಾಲ ಸ್ವದೇಹ ದಂಡನೆ ಮತ್ತು ಆಳವಾದ ಧ್ಯಾನ ಮಾಡುತ್ತಾ ಜೀವನ ನಡೆಸಿದನು. ವೈಶಾಖದ ಹತ್ತನೇ ದಿನ ಬಿಹಾರದ ಜೃಂಭಿಕಾ ಗ್ರಾಮದಲ್ಲಿ ವರ್ಧಮಾನನಿಗೆ ಜ್ಞಾನೋದಯವಾಯಿತು. ಅವನು 'ಕೈವಲ್ಯ' ಎಂಬ ಅತ್ಯುನ್ನತ ಆಧ್ಯಾತ್ಮಿಕ ಜ್ಞಾನವನ್ನು ಪಡೆದನು ಮತ್ತು 'ಕೇವಲಿನ್' (ಸರ್ವಜ್ಜ) ಅಥವಾ 'ಜಿನ' (ಇಂದ್ರಿಯ ನಿಗ್ರಹಿಸಿದವನು) ನಾದನು. ತದನಂತರ ವರ್ಧಮಾನ ಮಹಾವೀರನೆಂದು ಕರೆಯಲ್ಪಟ್ಟನು. ಮುಂದಿನ 30 ವರ್ಷಗಳ ಕಾಲ ಕೋಸಲ, ಮಗಧ, ವಿದೇಹ ಮತ್ತು ಅಂಗಗಳಲ್ಲಿ ಜೈನಧರ್ಮದ ತತ್ವಗಳನ್ನು ಬೋಧಿಸುತ್ತಾ ಪ್ರವಾಸ ಕೈಗೊಂಡನು. ತನ್ನ 12ನೇ ವಯಸ್ಸಿನಲ್ಲಿ ದಕ್ಷಿಣ ಬಿಹಾರದ ರಾಜಗೃಹ ಸಮೀಪದ ಪಾವಾ ಎಂಬಲ್ಲಿ ಸಾಶಪೂ 527ರಲ್ಲಿ ನಿರ್ವಾಣಹೊಂದಿದನು.
ಮಹಾವೀರನು ಗೌತಮ ಬುದ್ಧನ ಸಮಾಕಾಲೀನನಾಗಿದ್ದನು. ಆದರೆ ಅವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಯಾವಾಗಲೂ ಭೇಟಿಯಾಗಲಿಲ್ಲ
ಭಾರತದ ಸ್ವಾತಂತ್ರ್ಯ ಕಾಯ್ದೆ 1947 (Indian Independence Act 1947) ಭಾರತ ಮತ್ತು ಪಾಕಿಸ್ತಾನದ ರಚನೆಯನ್ನು ಮಾಡಿತು. 562 ದೇಶೀಯ ರಾಜ್ಯಗಳಿಗೆ ಭಾರತ ಅಥವಾ ಪಾಕಿಸ್ತಾನವನ್ನುಸೇರುವ ಇಲ್ಲವೇ ಸ್ವತಂತ್ರವಾಗಿರುವ ಆಯ್ಕೆ ನೀಡಿತು. ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಬಭಾಯಿ ಪಟೇಲ್ ಸ್ವತಂತ್ರವಾಗಿರಬಯಸಿದ್ದ ದೇಶೀಯ ರಾಜ್ಯಗಳನ್ನು ಭಾರತದ ಒಕ್ಕೂಟವನ್ನು ಸೇರುವಂತೆ ಮನವೊಲಿಸಿದರು. ವಿಲೀನ ಒಪ್ಪಂದಕ್ಕೆ (Irnstrument of Accesion) ಸಹಿ ಹಾಕಿದ ರಾಜರಿಗೆ ಸರ್ಕಾರವು ನಿಗದಿತ ಮೊತ್ತದ 'ರಾಜಧನವನ್ನು ನೀಡಿತು ಹಾಗು ಕೆಲವು ಸವಲತ್ತುಗಳನ್ನು ಮತ್ತು ಬಿರುದುಗಳನ್ನು ಹೊಂದಿರಲು ಅನುಮತಿಸಿತು. ಹೈದರಾಬಾದ್, ಕಾಶ್ಮೀರ ಹಾಗು ಜೂನಾಗಡದ ರಾಜರು ಭಾರತದ ಒಕ್ಕೂಟವನ್ನು ಸೇರಲು ನಿರಾಕರಿಸಿದರು. ಜೂನಾಗಡದ ನವಾಬ ಪಾಕಿಸ್ತಾನಕ್ಕೆ ಸೇರಲು ಪ್ರಯತ್ನಗಳನ್ನು ನಡೆಸಿದ್ದ ಹಾಗು ಜನರು ಅವನ ವಿರುದ್ಧ ದಂಗೆಯೆದ್ದದ್ದರಿಂದ ನವಾಬ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಸರ್ದಾರ್ ಪಟೇಲರು ಜೂನಾಗಡವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು. ಕಾಶ್ಮೀರದ ರಾಜ ಹರಿಸಿಂಗ್ ಭಾರತದ ಒಕ್ಕೂಟವನ್ನು ಸೇರುವ ನಿರ್ಧಾರವನ್ನು ನಿಧಾನ ಮಾಡುತ್ತಿದ್ದುದರಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ದಾಳಿ ಕೋರರನ್ನು ಕಳುಹಿಸುವ ಅವಕಾಶ ಪಾಕಿಸ್ತಾನಕ್ಕೆ ದೊರೆಯಿತು. ಭಾರತದ ಸೇನೆಯು ಈ ದಾಳಿಕೋರರನ್ನು ಹಿಮ್ಮೆಟ್ಟಿಸಿತು. ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್‌ಫರೆನ್ಸ್‌ನ ನಾಯಕರಾದ ಷೇಕ್ ಅಬ್ದುಲ್ಲಾ ಭಾರತದ ಒಕ್ಕೂಟವನ್ನು ಸೇರಲು ಒಪ್ಪಿದರು. ಆಗಿನಿಂದಲೂ ಪಾಕಿಸ್ತಾನ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಅನೇಕ ಸಲ ಪ್ರಯತ್ನಿಸಿದೆ ಹಾಗು ಕಾಶ್ಮೀರದ ಹಲವು ಭಾಗಗಳನ್ನು ವಶಪಡಿಸಿಕೊಂಡಿದೆ. ಭಾರತದಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಆದು ಈಗ ಭಯೋತ್ಪಾದಕರನ್ನು ಕಳುಹಿಸುತ್ತಿದೆ. ಪೊಲೀಸ್ ಕಾರ್ಯಾಚರಣೆಯ ನಂತರ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸಲಾಯಿತು. ಹೈದರಾಬಾದಿನ ಜನರ ಮೇಲೆ ನಿಜಾಮನ ದಬ್ಬಾಳಿಕೆಯಿಂದಾಗಿ ಈ ಕ್ರಮ ಅನಿವಾರ್ಯ ವಾಯಿತು.
ರಾಜ್ಯಗಳ ಪುನರ್ ಸಂಘಟನೆ:
ಹೈದರಾಬಾದಿನ ವಿಲೀನದ ನಂತರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತೆಲುಗು ಭಾಷೆಯನ್ನು ಮಾತನಾಡುವ ಜನರನ್ನೆಲ್ಲಾ ಒಗ್ಗೂಡಿಸಿ, ಆಂಧ್ರಪ್ರದೇಶವನ್ನು ಸೃಷ್ಟಿಸಲು ಒಪ್ಪಿತು, ಹೊಟ್ಟಿ ಶ್ರೀರಾಮುಲು ಆಂಧ್ರಪ್ರದೇಶದ ರಚನೆಯನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿ 58ನೇ ದಿನದಂದು 1952ರಲ್ಲಿ ಸಾವನ್ನಪ್ಪಿದರು. ಇದು ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿರ್ಮಿಸಿತು. ಈ ಪುಬ್ಧತೆಯು ಭಾಷೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಏಕೀಕರಣವನ್ನು ಬಯಸುತ್ತಿದ್ದ ಇತರೆ ಸಾಂತ್ಯಗಳಿಗೂ ಪರಡಿತು.
ಕನ್ನಡ ಮಾತನಾಡುತ್ತಿದ್ದ ಪ್ರದೇಶಗಳೂ ಏಕೀಕರಣ ಬಯಸುತ್ತಿದ್ದವು. ಆದರೆ ಆ ಪ್ರದೇಶಗಳು ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯಾಡಳಿತ ಹಾಗು ಉಳಿದ ಭಾಗಗಳು ಮೈಸೂರು ರಾಜ್ಯ, ಹೈದರಾಬಾದ್, ಸಾಂಗ್ಲಿ, ಮೀರಜ್, ಜಮಖಂಡಿ, ಸಂಡೂರು, ಸವಣೂರು, ಮುಧೋಳ, ಅಕ್ಕಲ್‌ಕೋಟೆ, ಜತ್ತ, ರಾಮದುರ್ಗ, ಮುಂತಾದ ದೇಶೀಯ ಆಡಳಿತಗಳಲ್ಲಿದ್ದವು.
ಐಕ್ಯತೆಗೆ ಕಾರಣವಾದ ಪ್ರಮುಖ ಅಂಶಗಳು
1. ಸಂಯುಕ್ತ ಕರ್ನಾಟಕ, ವಿಶಾಲ ಕರ್ನಾಟಕ, ಕರ್ನಾಟಕ ವೃತ್ತ ಮುಂತಾದ ವೃತ್ತ ಪತ್ರಿಕೆಗಳು,
2. ಆಲೂರು ವೆಂಕಟರಾಯರ ಪ್ರಸಿದ್ಧ ಕೃತಿ 'ಕರ್ನಾಟಕ ಗತ ವೈಭವ' ಮತ್ತು ಅಂತಹ ಇತರ ಕೃತಿಗಳು. 3. ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ಸಾಹಿತ್ಯ ಪರಿಷತ್, ಮುಂತಾದ ಸಂಘ-ಸಂಸ್ಥೆಗಳು,
4. ಹುಯಿಲಗೋಳ ನಾರಾಯಣರಾಯರ 'ಉದಯವಾಗಲಿ
ನಮ್ಮ ಚೆಲುವ ಕನ್ನಡ ನಾಡು, ಶಾಂತ
ಕವಿಯ 'ರಕ್ಷಿಸು ಕರ್ನಾಟಕ ದೇವಿ', ಕುವೆಂಪುರವರ 'ಜಯ ಭಾರತ ಜನನಿಯ ತನುಜಾತೆ' ಬಿ.ಎಂ.ಶ್ರೀಯವರ 'ಏರಿಸು ಹಾರಿಸು ಕನ್ನಡದ ಬಾವುಟ', ಮಂಗೇಶ ಪೈಯವರ 'ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೇ' ಮುಂತಾದ ಕವನಗಳು 5. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಕರ್ನಾಟಕ ಸಭಾ, ಮುಂತಾದವು ಏಕಿಕರಣದ ಕಾರ್ಯವನ್ನು
ಕೈಗೆತ್ತಿಕೊಂಡವು. ಕರ್ನಾಟಕ ಸಭಾ ಮುಂದೆ ಕರ್ನಾಟಕ ಏಕೀಕರಣ ಸಮಿತಿಯಾಯಿತು. ಸಿದ್ದಪ ಕಂಬ್ಳೆ ಇದರ ಪ್ರಥಮ ಅಧ್ಯಕ್ಷರಾಗಿದ್ದರು.
6. ಭಾಷಾಧಾರಿತ ರಾಜ್ಯಗಳ ರಚನೆಯನ್ನು ಗಾಂಧೀಜಿ ಸಹ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಒಪ್ಪಿಕೊಂಡರು. 7. 1928ರ ನೆಹರೂ ಸಮಿತಿ ಕರ್ನಾಟಕದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತ್ತು.
8. ಆಲೂರು ವೆಂಕಟರಾಯರು, ಸಿದ್ದಪ್ಪ ಕಂಬಿ, ಗುದ್ದೆಪ್ಪ ಹಳ್ಳಿಕೇರಿ, ಆರ್.ಎಚ್. ದೇಶಪಾಂಡೆ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಶ್ರೀನಿವಾಸರಾವ್ ಮಂಗಳವೇಡೆ, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ಅಂದಾನಪ್ಪ ದೊಡ್ಡಮೇಟಿ ಮುಂತಾದ ನಾಯಕರ ಪ್ರಯತ್ನಗಳು.
ರಾಜ್ಯಗಳ ಪುನರ್‌ರಚನೆಯ ಪ್ರಶ್ನೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು 'ಧಾರ್ ಸಮಿತಿಯನ್ನು ನೇಮಿಸಿತು. ಈ ಸಮಿತಿಯು
ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ತಿರಸ್ಕರಿಸಿತು ಹಾಗು ಇದು ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯುಂಟು ಮಾಡುತ್ತದೆ' ಎಂದು ಅಭಿಪ್ರಾಯಪಟ್ಟಿತು. ಇದರಿಂದ ಜನರು ಅತೃಪ್ತಗೊಂಡರು ಮತ್ತು ಹೋರಾಟಗಳು ಮುಂದುವರೆದವು. 1949ರಲ್ಲಿ ಜೆ.ವಿ.ಪಿ ಸಮಿತಿ'ಯನ್ನು (ಜವಹಾರ್‌ಲಾಲ್ ನೆಹರು, ವಲ್ಲಬಭಾಯಿ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ) ರಚಿಸಲಾಯಿತು. ಈ ಸಮಿತಿಯು ಆಂಧ್ರಪ್ರದೇಶದ ರಚನೆಗೆ ಒಪ್ಪಿಗೆ ಸೂಚಿಸಿತಾದರೂ ಕರ್ನಾಟಕದ ರಚನೆಯನ್ನು ತಿರಸ್ಕರಿಸಿತು. ಆಗ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಅಂದಾನಪ್ಪ ದೊಡ್ಡಮೇಟಿ ಬಾಂಬೆ ಶಾಸನ ಸಭೆಗೆ ರಾಜೀನಾಮೆ ನೀಡಿ, ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಉಪವಾಸವನ್ನು ಆರಂಭಿಸಿದರು. ಅಂತಿಮವಾಗಿ ರಾಜ್ಯಗಳ ಪುನರ್ವಿಂಗಡನಾ ಸಮಿತಿಯನ್ನು 1953ರಲ್ಲಿ ರಚಿಸಲಾಯಿತು. ಈ ಸಮಿತಿಯಲ್ಲಿ ಫಜಲ್ ಆಲಿ ಚೇರಮನ್ನರಾಗಿದ್ದರು ಮತ್ತು ಎಚ್.ಎನ್, ಬಂಜು ಹಾಗು ಕೆ.ಎಂ. ಪಣಿಕ್ಕರ್ ಸದಸ್ಯರಾಗಿದ್ದರು. ಆದ್ದರಿಂದ ಇದನ್ನು 'ಫಜಲ್ ಅಲಿ ಸಮಿತಿ' ಎಂದೂ ಕರೆಯಲಾಗಿದೆ. 1955ರಲ್ಲಿಅದು ವರದಿ ಸಲ್ಲಿಸಿತು. ಈ ಸಮಿತಿಯ ಶಿಫಾರಸ್ಸುಗಳು 1 ನವೆಂಬರ್ 1956ರಂದು ಅನುಷ್ಠಾನಗೊಂಡು ಮನರ್ ಸಂಘಟಿತ ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದಿತು. ಇದನ್ನು ಹೊಸ ಮೈಸೂರು ರಾಜ್ಯ ಎಂದು ಕರೆಯಲಾಯಿತು.
ಹಳೆಯ ಮೈಸೂರು ರಾಜ್ಯ, ಹೈದರಾಬಾದ್ ಪ್ರಾಂತ್ಯದಿಂದ ರಾಯಚೂರು, ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳು, ಬಾಂಬೆ ಪ್ರಾಂತ್ಯದಿಂದ ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗು ಮದ್ರಾಸ್ ಪ್ರಾಂತ್ಯದಿಂದ ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಕೊಳ್ಳೇಗಾಲ ಹಾಗು ಕೊಡಗುಗಳನ್ನು ಒಗ್ಗೂಡಿಸಿ 1 ನವೆಂಬರ್ 1956ರಂದು ಏಕೀಕೃತ ನವ ಮೈಸೂರು ರಾಜ್ಯ ರಚಿಸಲ್ಪಟ್ಟಿತು. ಇದರಲ್ಲಿ 19ಜಿಲ್ಲೆಗಳಿದ್ದವು, ಎಸ್. ನಿಜಲಿಂಗಪ್ಪನವರು ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. 1 ನವೆಂಬರ್ 1973ರಂದು ಇದು ಕರ್ನಾಟಕ ಎಂದು ಮರು ನಾಮಕರಣಗೊಂಡಿತು. ಆಗ ದೇವರಾಜ ಅರಸ್ ಮುಖ್ಯಮಂತ್ರಿಯಾಗಿದ್ದರು.
ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು https://www.mahitiloka.co.in/2021/05/blog-post_26.html ಮೈಸೂರು ಒಂದು ಮಾದರಿ ರಾಜ್ಯ https://www.mahitiloka.co.in/2021/05/blog-post_38.htmlಪೀಠಿಕೆ: ಕಲ್ಲಿದ್ದಲು ಒಂದು ಸುಲಭವಾಗಿ ಉರಿಯುವ ಸಾವಯವ (ಜೈವಿಕಾಂಶ) ವಸ್ತುವಾಗಿದೆ. ಇಂಗಾಲವು ಪ್ರಧಾನವಾಗಿರುವ ಈ ಇಂಧನ ಖನಿಜವು ಕಣಶಿಲೆಗಳಲ್ಲಿ ಕಂಡು ಬರುತ್ತದೆ, ಕಲ್ಲಿದ್ದಲು ದಹಿಸುವಂತಹ ಬಾಷ್ಪಾಂಶ, ತೇವಾಂಶ, ಇಂಗಾಲ ,ಜಲಜನಕ ಮತ್ತು ಬೂದಿಗಳನ್ನು ವಿವಿಧ ಪ್ರಮಾಣದಲ್ಲಿ ಹೊಂದಿರುತ್ತದೆ.
ಉತ್ಪತ್ತಿ: ಕಲ್ಲಿದ್ದಲು ಜೈವಿಕಾಂಶಗಳಿಂದ ಉತ್ಪತ್ತಿಯಾದುದು, ಭೂಕಲ್ಪ ಯುಗವಾದ ಕಾರ್ಬೋನಿ ಫೆರಸ್ ಅವಧಿಯಲ್ಲಾದ ಪೃಥ್ವಿಯ ಚಿಪ್ಪಿನ ಸ್ಥಾನಪಲ್ಲಟದಿಂದ ಸಸ್ಯವರ್ಗವು ಭೂ ಒಡಲಿನ ಕೆಸರು ಅಥವಾ ಮಡ್ಡಿಗಳ ತಳದಲ್ಲಿ ಹುದುಗಿ ಹೋಯಿತು. ಹೀಗೆ ಹುದುಗಿ ಹೋಗಿದ್ದ ಸಸ್ಯವರ್ಗವು ಅಧಿಕ ಉಷ್ಣಾಂಶ ಮತ್ತು ಒತ್ತಡಗಳಿಗೊಳಪಟ್ಟು ತರುವಾಯ ಕಲ್ಲಿದ್ದಲಾಗಿ ರೂಪಗೊಂಡಿತು.
ಮಹತ್ವ: ಭಾರತದಲ್ಲಿ ಒಟ್ಟು ವಿದ್ವತ್ ಶಕ್ತಿಯ ಬಳಕೆಯಲ್ಲಿ ಶೇ. 70 ರಷ್ಟು ಶಕ್ತಿಯು ಕಲ್ಲಿದ್ದಲಿನಿಂದ ಪೂರೈಕೆಯಾಗುತ್ತದೆ. ಇದರಲ್ಲಿ ಶೇ. 94 ಭಾಗದಷ್ಟು ಶಕ್ತಿಯನ್ನು ಕೈಗಾರಿಕೆಗಳು ಮತ್ತು ಶಕ್ತಿ ಸಾಧನಗಳು ಉಪಯೋಗಿಸಿಕೊಳ್ಳುತ್ತವೆ. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು, ವಿವಿಧ ಪ್ರಕಾರದ ರಾಸಾಯನಿಕ ಉದ್ದಿಮೆಗಳು ದೇಶದಲ್ಲಿ ದೊರೆಯುವ ಕಲ್ಲಿದ್ದಲನ್ನು ಬಹುವಾಗಿ ಅವಲಂಬಿಸಿರುತ್ತವೆ. ಕಲ್ಲಿದ್ದಲು ಒಂದು ಪ್ರಮುಖ ಶಕ್ತಿ ಸಾಧನೆ ಹಾಗೂ ಅನೇಕ ರಾಸಾಯನಿಕ ಉದ್ದಿಮೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವುದಲ್ಲದೇ, ಅನೇಕ ಉಪೋತತಿ ವಸ್ತುಗಳನ್ನು ಪೂರೈಸುತ್ತದೆ. ಉದಾ: ಡಾಂಬರು, ಅನಿಲ, ಕೋಲಗ್ಯಾಸ, ಜಿನ್ಹಾಲ್ ಇತ್ಯಾದಿ. ಈ ಉಪವಸ್ತುಗಳನ್ನು ವಿವಿಧ ಕೈಗಾರಿಕೆಗಳಲ್ಲಿ ಕಚ್ಚಾ ನ್ಯಾಪ್ತಲಿನ್, ಅಮೋನಿಯಾ ಪದಾರ್ಥಗಳನ್ನಾಗಿ ಬಳಸಲಾಗುವುದು. ಉದಾ: ರಾಸಾಯನಿಕ ಕೈಗಾರಿಕೆಗಳು, ಬಣ್ಣಗಳ ತಯಾರಿಕೆ, ಕೃತಕ ರಬ್ಬರ್, ಪ್ಲಾಸ್ಟಿಕ್ ಮತ್ತು ಕೀಟನಾಶಕಗಳು ಇತ್ಯಾದಿ.
ಇದು ನಿಮಗೆ ಗೊತ್ತೆ:
ಬಹುಉಪಯೋಗಿ ಗುಣಗಳನ್ನಾಧರಿಸಿ ಕಲ್ಲಿದ್ದಲನ್ನು ಕಪ್ಪು ವಜ್ರ" ಎಂದು ಕರೆಯಲಾಗಿದೆ.
ಕಲ್ಲಿದ್ದಲಿನ ಪ್ರಕಾರಗಳು
ಸಂಗಾಲದ ಪ್ರಮಾಣ, ಬಣ್ಣ ಮತ್ತು ಶಾಖದ ಪ್ರಮಾಣ ಮೊದಲಾದವುಗಳನ್ನಾಧರಿಸಿ ಕಲ್ಲಿದ್ದಲನ್ನು ನಾಲ್ಕು ಪ್ರಕಾರಗಳನ್ನಾಗಿ ವಿಂಗಡಿಸಬಹುದು. ಅವುಗಳೆಂದರೆ 1) ಅಂತಸೈಟ್ 11) ಬಿಟುಮಿನಸ್ iii) ಲಿಗ್ನೆಟ್ ಮತ್ತು iv) ಪೀಟ್,
1) ಆಂತ್ರಸೈಟ್ : ಇದು ಅತ್ಯಂತ ಶ್ರೇಷ್ಠ ದರ್ಜೆಯ ಕಲ್ಲಿದ್ದಲು, ಇದರಲ್ಲಿ ಶೇ. 80 ರಿಂದ 90 ಭಾಗ ಇಂಗಾಲವಿರುತ್ತದೆ. ಇದರ ಬಣ್ಣ ಕಪ್ಪು, ಒತ್ತೊತ್ತಾದ ಕಣಗಳಿಂದ ಕೂಡಿದೆ ಮತ್ತು ಕಠಿಣವಾಗಿರುತ್ತದೆ. ಆಗ್ನಿ ಸ್ಪರ್ಷಕ್ಕೆ ಬೇಗನೆ ಹತ್ತಿಕೊಳ್ಳದಿದ್ದರೂ ಒಮ್ಮೆ ಹತ್ತಿಕೊಂಡ ಮೇಲೆ ಹೆಚ್ಚು ಕಾಲ ನೀಲಿ ಜ್ವಾಲೆಗಳಿಂದ ಉರಿದು ಹೆಚ್ಚು ಶಾಖವನ್ನು ನೀಡಿ ಹೊಗೆ ರಹಿತ ಮತ್ತು ಕಡಿಮೆ ಬೂದಿಯನ್ನು ಬಿಡುಗಡೆ ಮಾಡುತ್ತದೆ. ಭಾರತದಲ್ಲಿ, ಇದರ ನಿಕ್ಷೇಪದ ಪ್ರಮಾಣ ಕಡಿಮೆ, ಅದು ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹಂಚಿಕೆಯಾಗಿರುತ್ತದೆ. ಈ ಕಲ್ಲಿದ್ದಲನ್ನು ಸೆಂಟ್ರಲ್ ಹೀಟಿಂಗ್, ಹಡಗು ಮತ್ತು ಬಾಯಲರ್‌ಗಳಲ್ಲಿ ಉಪಯೋಗಿಸಲಾಗುವುದು.
1) ಬಿಟುಮಿನಸ್ - ಶಾಖಕ್ಕೊಳಪಡಿಸಿದ ತರುವಾಯ ಬಿಟಮಿನ್ ಬಿಡುಗಡೆಯಾಗುವ ಒಂದು ವಿಧದ ಕಲ್ಲಿದ್ದಲನ್ನು ಬಿಟುಮಿನಸ್' ಎಂದು ಕರೆಯಲಾಗಿದೆ, ಇದು ಶೇ. 50 ರಿಂದ 80 ಭಾಗ ಇಂಗಾಲವನ್ನು ಹೊಂದಿದೆ ಮತ್ತು ಅಪರಿಮಿತವಾಗಿ ದೊರೆಯುತ್ತದೆ. ಸುಲಭವಾಗಿ ಹೊತ್ತಿ ಉರಿಯಬಲ್ಲದು ಮತ್ತು ಸಾಕಷ್ಟು ಶಾಖವನ್ನು ಉತ್ಪತ್ತಿ ಮಾಡುವುದು. ಇದು ಸಾಧಾರಣ ಕಠಿಣ ಮತ್ತು ಕಪ್ಪು ವರ್ಣದಿಂದ ಕೂಡಿದೆ. ಈ ವಿಧದ ಕಲ್ಲಿದ್ದಲಿನಿಂದ ಕೋಕಿಂಗ್ ಕಲ್ಲಿದ್ದಲು, ಕಲ್ಲಿದ್ದಲು ಅನಿಲ ಹಾಗೂ ಉಗಿ ಕಲ್ಲಿದ್ದಲುಗಳನ್ನು ಪಡೆಯಲಾಗುವುದು. ಇದನ್ನು ಹೆಚ್ಚಾಗಿ ಕಬ್ಬಿಣ, ಉಕ್ಕಿನ ಕೈಗಾರಿಕೆ ಮತ್ತು ಥರ್ಮಲ್ ವಿದ್ಯುತ್ ಉತ್ಪಾದನೆಗಾಗಿ ಉಪಯೋಗಿಸಲಾಗುವುದು, ಭಾರತದಲ್ಲಿ ಈ ವಿಧದ ಕಲ್ಲಿದ್ದಲು ಅಪಾರವಾಗಿ ಲಭ್ಯವಿದೆ ಮತ್ತು ಅತಿ ಪ್ರಮುಖವಾದುದು.
iii) ಲಿಗ್ರೆಟ್ ಇದು ಕಡಿಮೆ ದರ್ಜೆಯ ಕಲ್ಲಿದ್ದಲು, ಏಕೆಂದರೆ ಇದು ಹೆಚ್ಚು ಸಸ್ಯ ಮತ್ತು ಮರದ ಕಟ್ಟಿಗೆಯಂತಹ ವಸ್ತುಗಳನ್ನು ಹೊಂದಿರುತ್ತದೆ. ಇದರಲ್ಲಿ ಇಂಗಾಲಂಶದ ಪ್ರಮಾಣ ಶೇ. 40-55 ಭಾಗ ವಿರುತ್ತದೆ. ಇದು ಕಪ್ಪು ಬಣ್ಣದಿಂದ ಕಂದು ವರ್ಣಿವನ್ನು ಹೊಂದಿರುತ್ತದೆ. ಇದು ಹೆಚ್ಚು ತೇವಾಂಶವನ್ನು ಹೊಂದಿರುವುದರಿಂದ ಕಡಿಮೆ ಶಾಖವನ್ನು ನೀಡಿ, ಹೆಚ್ಚು ಹೊಗೆ ಮತ್ತು ಬೂದಿಯನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ಇದನ್ನು ಸಾಮಾನ್ಯವಾಗಿ ಕೃತಕ ನಾರು ತಯಾರಿಕೆ, ರಸಗೊಬ್ಬರ ಕೈಗಾರಿಕೆ ಮತ್ತು ಶಾಖೋತ್ಪನ್ನ ವಿದ್ಯುಚ್ಛಕ್ತಿ ಉತ್ಪಾದಿಸಲಿಕ್ಕೆ ಉಪಯೋಗಿಸಲಾಗುವುದು.
iv) ಪೀಟ್: ಇದು ಸಸ್ಯಾಂಶ ವಸ್ತು ಕಲ್ಲಿದ್ದಲಾಗಿ ಪರಿವರ್ತನೆಯಾಗುವ ಪ್ರಾಥಮಿಕ ಹಂತದ್ದಾಗಿದೆ. ಇದು ಅತ್ಯಂತ ಕಡಿಮೆ ದರ್ಜೆಯ, ಕಲ್ಲಿದ್ದಲಾಗಿದ್ದು, ಇದರಲ್ಲಿ ಶೇ. 40 ರಷ್ಟು ಇಂಗಾಲಂಶವಿರುತ್ತದೆ. ಇದು ಕಪ್ಪು ಅಥವಾ ಕಂದು ಬಣ್ಣವನ್ನು ಹೊಂದಿದ್ದು, ಉರಿಸಿದಾಗ ಕಡಿಮೆ ಶಾಖವನ್ನು ಬಿಡುಗಡೆ ಮಾಡುವುದು, ಆದರೆ ಹೆಚ್ಚು ಹೊಗೆ ಮತ್ತು ಬೂದಿಯನ್ನು ಬಿಡುಗಡೆ ಮಾಡುವುದು, ಹೀಗಾಗಿ ಇದನ್ನು ಹೆಚ್ಚಾಗಿ ಥರ್ಮಲ್ ವಿದ್ಯುಚ್ಛಕ್ತಿ ತಯಾರಿಕೆ ಮತ್ತು ರಾಸಾಯನಿಕ ಗೊಬ್ಬರದ ಕೈಗಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಕಲ್ಲಿದ್ದಲಿನ ನಿಕ್ಷೇಪ ಮತ್ತು ಹಂಚಿಕೆ : ಭಾರತದಲ್ಲಿ ದೊರೆಯಬಹುದಾದ ಕಲ್ಲಿದ್ದಲು ಪ್ರದೇಶಗಳನ್ನು ಅದರ ಉತ್ಪತ್ತಿ ಹಾಗೂ
ಕಾಲದ ಆಧಾರದ ಮೇಲೆ ಎರಡು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. 1) ಗೊಂಡ್ವಾನ ಕಲ್ಲಿದ್ದಲು ಪ್ರದೇಶ ಮತ್ತು i
ಟರ್ಷಿಯರಿ ಕಲ್ಲಿದ್ದಲು ಪ್ರದೇಶ, ವ್ಯಾಪಕವಾಗಿ ಹಂಚಿಕೆಯಾಗಿದೆ. ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 98 ಮತ್ತು ಒಟ್ಟು ಉತ್ಪಾದನೆಯಲ್ಲಿ ಶೇ. 99 ಭಾಗವನ್ನು ಹೊಂದಿರುತ್ತದೆ. ಕಲ್ಲಿದ್ದಲು ಮುಖ್ಯವಾಗಿ ಬಿಟುಮಿನಸ್ ಪ್ರಕಾರದ್ದಾಗಿರುತ್ತದೆ. ಇದು ಹೆಚ್ಚಾಗಿ ದಾಮೋದರನದಿ, ಸೊನಾನದಿ, ಮಹಾನದಿ, ಗೋದಾವರಿನದಿ ಮತ್ತು ವಾರ್ಧಾನದಿ ಕಣಿವೆಗಳಲ್ಲಿ ಕೇಂದ್ರೀಕೃತವಾಗಿದೆ. ಈ ಕಲ್ಲಿದ್ದಲು ಪ್ರದೇಶವು ಮುಖ್ಯವಾಗಿ ಜಾರ್ಖಂಡ್, ಒಡಿಶಾ, ಪಶ್ಚಿಮಬಂಗಾಳ, ಛತ್ತಿಸಗರ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹಂಚಿಕೆಯಾಗಿದೆ.
i) ಗೊಂಡ್ವಾನ ಕಲ್ಲಿದ್ದಲಿನ ಪ್ರದೇಶ : ಗೊಂಡ್ವಾನ ಕಲ್ಲಿದ್ದಲು ನಿಕ್ಷೇಪದ ಮೊತ್ತ ಮತ್ತು ಉತ್ಪಾದನೆಗಳಲ್ಲಿ ಭಾರತದಲ್ಲಿ
ii) ಟರ್ಷಿಯರಿ ಕಲ್ಲಿದ್ದಲಿನ ಪ್ರದೇಶ: ಟರ್ಷಿಯರಿ ಕಲ್ಲಿದ್ದಲು ಪ್ರದೇಶವು ಪರ್ಯಾಯ ಪ್ರಸ್ಥಭೂಮಿಯನ್ನು ಹೊರತುಪಡಿಸಿ
ಹಂಚಿಕೆಯಾಗಿದೆ. ಸಾಮಾನ್ಯವಾಗಿ ಇದರಲ್ಲಿ ಇಂಗಾಲದ ಪ್ರಮಾಣ ಕಡಿಮೆ ಇದ್ದು, ತೇವಾಂಶ ಮತ್ತು ಸಲರ್‌ಗಳ ಪ್ರಮಾಣ ಹೆಚ್ಚು, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಜಮ್ಮುಕಾಶ್ಮೀರ, ಉತ್ತರ ಪ್ರದೇಶ, ರಾಜಸ್ತಾನ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಹಂಚಿಕೆಯಾಗಿದೆ. ಈ ಪ್ರದೇಶವು ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪ ಮತ್ತು ಉತ್ಪಾದನೆಯಲ್ಲಿ ಅನುಕ್ರಮವಾಗಿ ಶೇ. 2 ಮತ್ತು ಶೇ. 1 ಭಾಗವನ್ನು ಹೊಂದಿರುತ್ತದೆ.
ಹಂಚಿಕೆ: ಭಾರತದಲ್ಲಿ ಕಲ್ಲಿದ್ದಲಿನ ಹಂಚಿಕೆಯು ಕೆಲವೇ ರಾಜ್ಯಗಳಲ್ಲಿ ವ್ಯಾಪಕವಾಗಿ ಕೇಂದ್ರೀಕೃತವಾಗಿರುತ್ತದೆ. ಅಪಾರವಾದ ಕಲ್ಲಿದ್ದಲು ನಿಕ್ಷೇಪವು ಜಾರ್ಖಂಡ್, ಛತ್ತೀಸಗರ್, ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಪಶ್ಚಿಮಬಂಗಾಳಗಳಲ್ಲಿ ಹಂಚಿಕೆಯಾಗಿದೆ. ಈ ರಾಜ್ಯಗಳು ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 96 ಭಾಗವನ್ನು ಹೊಂದಿದೆ. ಉಳಿದ ಕಲ್ಲಿದ್ದಲಿನ ನಿಕ್ಷೇಪವು ಉತ್ತರಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಂಚಿಕೆಯಾಗಿದೆ. ಇಂದು ಪ್ರಮುಖ ಕಲ್ಲಿದ್ದಲನ್ನು ಉತ್ಪಾದಿಸುವ ರಾಜ್ಯಗಳೆಂದರೆ ಜಾರ್ಖಂಡ್, ಛತ್ತೀಸಗರ್, ಒಡಿಶಾ ಮತ್ತು ಮಧ್ಯಪ್ರದೇಶ, ಇವು ದೇಶದ ಒಟ್ಟು ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ. 84.3 ಭಾಗವನ್ನು ಪೂರೈಸುತ್ತವೆ.
ಛತ್ತೀಸ್ಗರ್ : ಕಲ್ಲಿದ್ದಲು ನಿಕ್ಷೇಪದಲ್ಲಿ 3ನೆಯ ಸ್ಥಾನ ಹೊಂದಿದ್ದರೂ ಉತ್ಪಾದನೆಯಲ್ಲಿ ದೇಶದ ಪ್ರಥಮ ಸ್ಥಾನದಲ್ಲಿದೆ. ಸುರ್ಗುಜ,ಬಿಲಾಸ್ತುರ ಮತ್ತು ಕೊರ್ಬಗಳು ಪ್ರಮುಖ ಕಲ್ಲಿದ್ದಲು ಪ್ರದೇಶಗಳು,
ಜಾರ್ಖಂಡ್ : ದೇಶದ ಎರಡನೇ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ರಾಜ್ಯ ದೇಶದ ಶೇ.25.4 ಭಾಗ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ. ಝರಿಯ,ಬೊಕಾರೊ,ಗಿರಿಧಿ,ಕರಣುರ,ರಾಮ್‌ಗರ್ ಮತ್ತು ರಾತ್ರೋಗಂಜ್ ಪ್ರಮುಖ ಕಲ್ಲಿದ್ದಲು ಪದೇಶಗಳು ಕಲ್ಲಿದ್ದಲು ಉತ್ಪಾದಿಸುವ ಇತರೆ ಧನಾದ್, ಹಜಾರಿಬಾಗ್, ದುಮ್ಮ ಮತ್ತು ಪಲಾಮ ಜಿಲ್ಲೆಗಳು. ಧನ್ಯಾದ ಜಿಲ್ಲೆಯ “ಝರಿಯಾ" ಕಲ್ಲಿದ್ದಲು ಪ್ರದೇಶವು ದೇಶದಲ್ಲೇ ಅತ್ಯಂತ ಹಳೆಯ ಮತ್ತು ಸಮೃದ್ಧ ಕಲ್ಲಿದ್ದಲು ಪ್ರದೇಶವಾಗಿದೆ. ಇದರ ವಿಸ್ತೀರ್ಣ ಸುಮಾರು 453 ಚ.ಕಿ.ಮೀ. ಇದ್ದು, ಇದನ್ನು ಅತ್ಯುತ್ತಮ ಲೋಹಾಂಶಭರಿತ ಕಲ್ಲಿದ್ದಲಿನ ಉಗ್ರಾಣ” ಎಂದು ಪರಿಗಣಿಸಲಾಗಿದೆ.
ಒಡಿಶಾ : ಭಾರತದ ಎರಡನೇಯ ಪ್ರಮುಖ ಕಲ್ಲಿದ್ದಲಿನ ನಿಕ್ಷೇಪವುಳ್ಳ ಪ್ರದೇಶವಾಗಿರುತ್ತದೆ. ಒಟ್ಟು ದೇಶದ ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 24.34 ಭಾಗವು ಈ ರಾಜ್ಯದಲ್ಲಿದೆ. ಆದರೆ ಇದು ಮೂರನೆಯ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ರಾಜ್ಯವಾಗಿದೆ. ಪ್ರಮುಖ ಕಲ್ಲಿದ್ದಲು ಪ್ರದೇಶಗಳೆಂದರೆ, ಡಂಕನಾಲ್, ಸಾಂಬಲ್ಪುರ ಮತ್ತು ಸುಂದರಘಡ ಜಿಲ್ಲೆಗಳು, ಇವುಗಳಲ್ಲಿ ಡೆಂಕನಾಲ್ ಜಿಲ್ಲೆಯ “ತಲ್ವಾರ್" ಕಲ್ಲಿದ್ದಲು ಪ್ರದೇಶ ಅತಿ ಪ್ರಮುಖವಾದದ್ದು. ಇದರ ಕ್ಷೇತ್ರ ಸುಮಾರು 518 ಚ.ಕಿ.ಮೀ. ಗಳಾಗಿರುತ್ತದೆ.
ಮಧ್ಯಪ್ರದೇಶ: ಇದು ದೇಶದ ಒಟ್ಟು ಕಲ್ಲಿದ್ದಲಿನ ನಿಕ್ಷೇಪದಲ್ಲಿ ಶೇ. 8.31 ರಷ್ಟು ಹೊಂದಿದೆ. ದೇಶದಲ್ಲಿ ಕಲ್ಲಿದ್ದಲನ್ನು ಉತ್ಪಾದಿಸುವ ರಾಜ್ಯಗಳ ಸಾಲಿನಲ್ಲಿ ನಾಲ್ಕನೇಯದಾಗಿದೆ. ಈ ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪವು ಸಿಧಿ, ಶಹದೋಲ್, ದೆಟುಲ್, ಚಿಂದ್ವಾರ ಮತ್ತು ನರಸಿಂಗಾಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಂಚಿಕೆಯಾಗಿದೆ. ಶಹದೋಲ ಮತ್ತು ಸಿಧಿ ಜಿಲ್ಲೆಗಳಲ್ಲಿರುವ
"ಸಿಂಗೌಲಿ" ಕಲ್ಲಿದ್ದಲು ಪ್ರದೇಶವು ಅತ್ಯಂತ ವಿಶಾಲವಾಗಿದ್ದು, ಸುಮಾರು 300 ಕಿ.ಮೀ. ಉದ್ದಕ್ಕೆ ಹರಡಿದೆ. ಆಂಧ್ರಪ್ರದೇಶ: ಇದು ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 7.6 ಭಾಗವನ್ನು ಈ ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪವು
ಪೂರ್ವ ಮತ್ತು ಪಶ್ಚಿಮ ಗೋದಾವರಿ, ಅದಿಲಾಬಾದ್, ಕರೀಂ ನಗರ, ವಾರಂಗಲ್ ಮತ್ತು ಖಮ್ಮಮ್ ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ.
ಮಹಾರಾಷ್ಟ್ರ: ಈ ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪವು ಚಂದ್ರಾಪುರ ಜಿಲ್ಲೆಯ ವಾರ್ದನದಿ ಕಣಿವೆ, ಬೆಲ್ಲಾರಪುರ ಮತ್ತು ವಾರೋರ, ಯವತ್‌ಮಾಲ್ ಜಿಲ್ಲೆಯ ವುನ್ ಪ್ರದೇಶ ಹಾಗೂ ನಾಗಪುರ ಜಿಲ್ಲೆಯ ಕಾಂಪ್ಲಿ ಭಾಗಗಳಲ್ಲಿ ಹಂಚಿಕೆಯಾಗಿದೆ.
ಪಶ್ಚಿಮ ಬಂಗಾಳ: ಪಶ್ಚಿಮಬಂಗಾಳ ರಾಜ್ಯವು ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 10.43 ಭಾಗ ಮತ್ತು ಉತ್ಪಾದನೆಯಲ್ಲಿ ಶೇ. 4.5 ಭಾಗವನ್ನು ಹೊಂದಿದೆ. ಈ ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪವು ಹೆಚ್ಚಾಗಿ ಬಂಕುರ, ಬುರುದ್ವಾನ, ಬಿರಭೂಮ್ ಡಾರ್ಜಲಿಂಗ್ ಮತ್ತು ಜಲಪೈಗುರಿ ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ. "ರಾಣಿಗಂಜ್" ಈ ರಾಜ್ಯದ ಅತಿ ದೊಡ್ಡದಾದ ಪ್ರಸಿದ್ಧ ಕಲ್ಲಿದ್ದಲು ಗಣಿ ಪ್ರದೇಶವಾಗಿದೆ. ಇದರ ವಿಸ್ತೀರ್ಣ ಸುಮಾರು 1500 ಚ.ಕಿ.ಮೀ. ಇರುತ್ತದೆ.
ಉತ್ಪಾದನೆ : ಭಾರತದಲ್ಲಿ ಎಲ್ಲಾ ವಿಧದ ಒಟ್ಟು ಕಲ್ಲಿದ್ದಲು ನಿಕ್ಷೇಪ 293.50 ಬಿಲಿಯನ್ ಟನ್ನುಗಳೆಂದು ಭಾರತೀಯ ಭೂಗರ್ಭ ಸಮೀಕ್ಷಣಾ ಇಲಾಖೆ ಅಂದಾಜು ಮಾಡಿದೆ. 2012-13ರಲ್ಲಿ ಭಾರತವು 560.90 ಮಿ. ಟನ್ನು ಕಲ್ಲಿದ್ದಲನ್ನು ಉತ್ಪಾದಿಸಿತ್ತು. ಪ್ರಪಂಚದಲ್ಲಿ ಕಲ್ಲಿದ್ದಲು ಉತ್ಪಾದಿಸುವ ದೇಶಗಳಲ್ಲಿ ಚೀನ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಂತರ ಭಾರತ ಮೂರನೆಯ ಸ್ಥಾನದಲ್ಲಿದೆ. ಇದು ಪ್ರಪಂಚದ ಒಟ್ಟು ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ. 10.2 ಭಾಗವನ್ನು ಪೂರೈಸುತ್ತದೆ.
ವ್ಯಾಪಾರ ಭಾರತವು ತನ್ನ ಕೆಲವು ನೆರೆಯ ರಾಷ್ಟ್ರಗಳಿಗೆ ಅಲ್ಪ ಪ್ರಮಾಣದ ಕಲ್ಲಿದ್ದಲನ್ನು ರಫ್ತು ಮಾಡುತ್ತದೆ. ಉದಾ: ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾಗಳಿಂದ ಆಮದು ಮಾಡುಕೊಳ್ಳುತ್ತಿದೆ. ಭಾರತದಲ್ಲಿ ಉತ್ತಮ ದರ್ಜೆಯ ಕಲ್ಲಿದ್ದಲು ಇದ್ದು, ಅಂತಹ ಕಲ್ಲಿದ್ದಲಿನ ಆಮದು ಮುಂದುವರಿದಿದೆ.
👆🏻👆🏻👆🏻👆🏻👆🏻👆🏻👆🏻👆🏻👆🏻
★ CIVIL PC APPLICATION STARTED:~ ★
✍🏻🍁✍🏻🍁✍🏻🍁✍🏻🍁✍🏻🍁
★ ಇಂದಿನಿಂದ (ಮೇ-25ರಿಂದ) ಹೊಸ Civil Police Constable ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಇದೀಗ ಆರಂಭವಾಗಿದೆ.!!
★ HK & Non HK ಸೇರಿ 3,500ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ.!!
★ ಅರ್ಜಿ ಸಲ್ಲಿಸುವ ಅವಧಿ: 25-05-2021 ರಿಂದ 25-06-2021ರ ವರೆಗೆ
★ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻👇🏻
1799 ರಲ್ಲಿ ಒಡೆಯರಿಗೆ ಹಿಂತಿರುಗಿಸಿದ್ದ ಮೈಸೂರಿನ ಆಳ್ವಿಕೆಯನ್ನು 1831ರ ನಗರ ದಂಗೆಯ ನಂತರ ಬ್ರಿಟಿಷರು ತಮ್ಮ ನೇರ ಆಳ್ವಿಕೆಗೆ ಒಳಪಡಿಸಿದರು. ಇದನ್ನೊಂದು ಸ್ವತಂತ್ರ ಆಡಳಿತಾತ್ಮಕ ಘಟಕವಾಗಿ ಇರಿಸಿ, ಆಡಳಿತವನ್ನು ನೋಡಿಕೊಳ್ಳಲು ಕಮಿಷನರುಗಳನ್ನು ನೇಮಿಸಲಾಗಿತ್ತು. 1831 ರಿಂದ 1881 ರ ವರೆಗಿನ ಕಮಿಷನರರ ನೇರ ಆಳ್ವಿಕೆಯು ಮೈಸೂರು ಒಂದು ಮಾದರಿ ರಾಜ್ಯವಾಗಲು ಅಡಿಪಾಯವನ್ನು ಹಾಕಿತು. ಈ ಅವಧಿಯಲ್ಲಿ ಏಳು ಜನ ಕಮಿಷನರುಗಳು ಆಳಿದರು. ಅವರಲ್ಲಿ ಪ್ರಮುಖರಾದವರೆಂದರೆ ಮಾರ್ಕ್ ಕಬ್ಬನ್ ಮತ್ತು ಲೆವಿಸ್ ಬೆಂಥಾಮ್ ಬೌರಿಂಗ್
ಮಾರ್ಕ್ ಕಬ್ಬನ್ - 1834 1881:
ಕಬ್ಬನ್
ಹೊಸ ರಸ್ತೆಗಳು ನಿರ್ಮಾಣಗೊಂಡವು. ಅದರ ಪರಿಣಾಮದಿಂದ ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳು ಬೆಂಗಳೂರಿನೊಂದಿಗೆ ನೇರ ಸಂಪರ್ಕಹೊಂದಿದವು, ಸೇತುವೆಗಳು ನಿರ್ಮಾಣವಾದವು ಮತ್ತು ಟೆಲಿಗ್ರಾಫ್ ತಂತಿಗಳನ್ನೂ ಹಾಕಲಾಯಿತು. 1859ರಲ್ಲಿ ಬೆಂಗಳೂರು ಹಾಗೂ ಜೋಲಾರಪೇಟೆ ಮಧ್ಯೆ ರೈಲು ಮಾರ್ಗವನ್ನು ಹಾಕಲಾಯಿತು. ಇದು ಮೈಸೂರು ರಾಜ್ಯದ ಪ್ರಥಮ ರೈಲು ಮಾರ್ಗವಾಗಿತ್ತು. ತೆರಿಗೆ ಸಂಗ್ರಹವನ್ನು ಶಿಸ್ತುಬದ್ಧಗೊಳಿಸಿದ್ದರಿಂದ ರಾಜ್ಯದ ಆದಾಯದ ಹೆಚ್ಚಳಕ್ಕೆ ಸಹಾಯವಾಯಿತು. ಕಾಫಿ ತೋಟಗಳನ್ನೂ ಅಭಿವೃದ್ಧಿ ಪಡಿಸಲಾಯಿತು. ಇವನು 1861 ರಲ್ಲಿ ಕಮಿಷನರ್ ಹುದ್ದೆಗೆ ರಾಜೀನಾಮೆ ನೀಡಿದನು.
ಲೆವಿಸ್ ಬೆಂಥಾಮ್ ಬೌರಿಂಗ್
ಲೆವಿಸ್ ಬೆಂಥಾಮ್ ಬೌರಿಂಗ್ 1862 ರಲ್ಲಿ ಮುಖ್ಯ ಕಮಿಷನರ್‌ನಾಗಿ ಅಧಿಕಾರ ಸ್ವೀಕರಿಸಿದನು. ಇವನು ಮೈಸೂರು ರಾಜ್ಯದ ಸಮಗ್ರ ಆಡಳಿತವನ್ನು ಪುನರ್‌ಸಂಘಟಿಸಿದನು. ನಂದಿದುರ್ಗ, ನಗರ ಮತ್ತು ಅಷ್ಟಗ್ರಾಮಗಳು ಆಡಳಿತದ ಘಟಕಗಳಾಗಿದ್ದವು. ಈ ಘಟಕಗಳ ಮೇಲ್ವಿಚಾರಣೆಯನ್ನು ಕಮಿಷನರರು ನೋಡಿಕೊಳ್ಳುತ್ತಿದ್ದರು. ಭೂ-ಕಂದಾಯವನ್ನು ಸುಧಾರಿಸಲಾಯಿತು. ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಗಳನ್ನು ವ್ಯವಸ್ಥಿತವಾಗಿ ಸಂಘಟಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಶಿಕ್ಷಣದಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಲಾಯಿತು. ನಿರ್ದೇಶಕರು ಇದರ ಮುಖ್ಯಸ್ಥರಾಗಿದ್ದರು. 1870 ರಲ್ಲಿ ಬೌರಿಂಗನು ರಾಜೀನಾಮೆ ನೀಡಿದನು. ಕಮಿಷನರ್‌ಗಳು ಮೈಸೂರು ರಾಜ್ಯದ ಅಭಿವೃದ್ಧಿಗೆ ಬುನಾದಿಯನ್ನು ಹಾಕಿದರು. 1881 ರಲ್ಲಿ ರಾಜ್ಯವನ್ನು ಹತ್ತನೆಯ ಚಾಮರಾಜ ಒಡೆಯರಿಗೆ ಮನಃ ವಹಿಸಿಕೊಡಲಾಯಿತು (ಮನರ್‌ದಾನ), ಅವರು 1894 ರವರೆಗೆ ಆಳ್ವಿಕೆ ಮಾಡಿದರು. ನಾಲ್ವಡಿ ಕೃಷ್ಣರಾಜ್ ಒಡೆಯರು ಇವರ ಉತ್ತರಾಧಿಕಾರಿಯಾದರು. ಈ ಇಬ್ಬರು ಅರಸರ ಆಳ್ವಿಕೆಯಲ್ಲಿ ಮೈಸೂರು ಮಹಾನ್ ದಿವಾನರ ಸೇವೆಯನ್ನು ಪಡೆದುಕೊಂಡಿತು. ಅವರಲ್ಲಿ ಪ್ರಮುಖರೆಂದರೆ ಸರ್. ಎಂ.ವಿಶ್ವೇಶ್ವರಯ್ಯ ಮತ್ತು ಸರ್. ಮಿರ್ಜಾಇಸ್ಮಾಯಿಲ್, ಮೈಸೂರು 'ಮಾದರಿ ರಾಜ್ಯ'ವೆಂಬ ಬಿರುದು ಗಳಿಸಲು ಇವರು ಕಾರಣೀಭೂತರಾದರು.
ಸರ್, ಎಂ. ವಿಶ್ವೇಶ್ವರಯ್ಯ :
1831-33
1833-34
1834-61
1862-70
1870-75
- 1875-78
- 1878-81
ದಿವಾನರು
ಪಿ.ಎನ್. ಕೃಷ್ಣಮೂರ್ತಿ ವಿ.ಪಿ.ಮಾಧವರಾವ್
ಸರ್. ಎಂ. ವಿಶ್ವೇಶ್ವರಯ್ಯ
ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್
'ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ' ಎಂದು ಪರಿಗಣಿಸಲ್ಪಟ್ಟ ಸರ್. ಎಂ.ವಿಶ್ವೇಶ್ವರಯ್ಯನವರು
1861 ರ ಸೆಪ್ಟೆಂಬರ್ 15 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ
ಮುದ್ದೇನಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ತಾಯಿಗಳು ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ, ಚಿಕ್ಕಬಳ್ಳಾಪುರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಮುಂದಿನ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದರು. ನಂತರ ಅವರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದು, ಇಂಜನಿಯರಿಂಗ್ ಅಧ್ಯಯನಕ್ಕಾಗಿ ಮಣೆಗೆ ತೆರಳಿದರು. 1884 ರಿಂದ 1909ರ ರಲ್ಲಿ ಮೈಸೂರಿನ ಮುಖ್ಯ ಇಂಜಿನೀಯರ್ ಆಗಿ ನೇಮಕಗೊಂಡರು. 1912 ರಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರು ಇವರನ್ನು ಮೈಸೂರಿನ ದಿವಾನರನ್ನಾಗಿ ನೇಮಿಸಿಕೊಂಡರು. ಇವರ ದಿವಾನಗಿರಿಯಲ್ಲಿ ಮೈಸೂರು ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿತು.
ವರೆಗೆ ಬಾಂಬೇ ಸರ್ಕಾರದಲ್ಲಿ ಸೇವೆ ಸಲ್ಲಿಸಿದರು. 1909 ಅ ಕಡರ್ ಸರ್, 29. ವಿಶ್ವೇಶ್ವರಯ್ಯ
ಆಡಳಿತಾತ್ಮಕ ಸುಧಾರಣೆಗಳು
ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 18 ರಿಂದ 24 ಕ್ಕೆ ಹೆಚ್ಚಿಸಲಾಯಿತು. ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಪಂಚಾಯಿತಿ ಕಾಯ್ದೆಯು ಜಿಲ್ಲೆ ಮತ್ತು ತಾಲೂಕು ಮಂಡಳಿಗಳಲ್ಲಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿತು. ಹಳ್ಳಿಗಳ ಪ್ರಗತಿಗಾಗಿ ಗ್ರಾಮ ಸುಧಾರಣಾ ಸಮಿತಿಗಳನ್ನು ಸ್ಥಾಪಿಸಲಾಯಿತು. ಮಲೆನಾಡು ಪ್ರದೇಶದ ಅಭಿವೃದ್ಧಿಗಾಗಿಯೇ ಒಂದು ಪ್ರತ್ಯೇಕ ಯೋಜನೆಯನ್ನು ರಚಿಸಲಾಯಿತು.
ಕೈಗಾರಿಕಾ ಅಭಿವೃದ್ಧಿ
“ಕೈಗಾರಿಕೀಕರಣ ಇಲ್ಲವೆ ವಿನಾಶ" ಎಂಬುದು ಸರ್.ಎಂ.ವಿಶ್ವೇಶ್ವರಯ್ಯನವರ ಪ್ರಸಿದ್ಧ ಘೋಷಣೆಯಾಗಿತ್ತು. ಇವರ ಅವಧಿಯಲ್ಲಿ ಅನೇಕ ಕೈಗಾರಿಕೆಗಳನ್ನು ಆರಂಭಿಸಲಾಯಿತು ಅವುಗಳಲ್ಲಿ ಕೆಲವು ಇಂತಿವೆ, ಭದ್ರಾವತಿಯಲ್ಲಿನ ಕಬ್ಬಿಣದ ಕಾರ್ಖಾನೆ, ಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆ, ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ,
ಕೇಂದ್ರ ಕೈಗಾರಿಕಾ ಕಾರ್ಯಾಗಾರ, ಚರ್ಮ ಹದ ಮಾಡುವ ಕಾರ್ಖಾನೆ ಹಾಗೂ ಲೋಹದ ಕಾರ್ಖಾನೆಗಳು, ವ್ಯಾಪಾರ ಹಾಗೂ ವಾಣಿಜ್ಯಕ್ಕೆ ಪ್ರೋತ್ಸಾಹ ನೀಡಲು ಬೆಂಗಳೂರಿನಲ್ಲಿ ಮೈಸೂರು ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯನ್ನು ಸ್ಥಾಪಿಸಲಾಯಿತು. ಇವರ ಅವಧಿಯಲ್ಲಿ ಸಣ್ಣ ಕೈಗಾರಿಕೆಗಳು ಅಭಿವೃದ್ಧಿಗೊಂಡವು. ಗುಡಿ ಕೈಗಾರಿಕೆಗಳಾದ, ನೇಕಾರಿಕೆ, ಕುಂಬಾರಿಕೆ, ಹೆಂಚು, ಮರಗೆಲಸ, ಚಾಪೆ, ಚರ್ಮದ ವಸ್ತುಗಳು, ಬೀಡಿ ಮತ್ತು ಅಗರಬತ್ತಿ ಕೈಗಾರಿಕೆಗಳು ಪ್ರವರ್ಧಮಾನಕ್ಕೆ ಬಂದವು. ವ್ಯಾಪಾರ ಮತ್ತು ವಾಣಿಜ್ಯಗಳನ್ನು ಬೆಳೆಸುವುದಕ್ಕಾಗಿ 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಲಾಯಿತು.
ಶೈಕ್ಷಣಿಕ ಸುಧಾರಣೆಗಳು
ಪ್ರತಿಯೊಂದು ದೇಶದ ಪ್ರಗತಿಯು ಮುಖ್ಯವಾಗಿ ಜನರ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ
ಎಂದು ಸರ್.ಎಂ.ವಿಶ್ವೇಶ ನವರು ನಂಬಿದ್ದರು. ಇವರು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಿದರು. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನಗಳನ್ನು ನೀಡಲಾರಂಭಿಸಿದರು. ಸ್ತ್ರೀಯರ ಶಿಕ್ಷಣವನ್ನೂ ಪ್ರೋತ್ಸಾಹಿಸಲಾಯಿತು. ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ನೀಡಲಾಯಿತು. ಬೆಂಗಳೂರಿನಲ್ಲಿ ಇಂಜನಿಯರಿಂಗ್ ಕಾಲೇಜು ಮತ್ತು ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಆರಂಭಿಸಿದರು. ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಶಾಲೆಯೊಂದನ್ನು ಸ್ಥಾಪಿಸಿದರು.
1916 ರಲ್ಲಿ ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯ ಈ ಕ್ಷೇತ್ರದಲ್ಲಿ ಇವರ ಅತ್ಯಂತ ಮಹತ್ತರ ಸಾಧನೆಯಾಗಿದೆ, 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಲಾಯಿತು.
ಅವರ ಇನ್ನಿತರ ಸಾಧನೆಗಳು,
ಕೃಷ್ಣರಾಜ ಸಾಗರ ಆಣೆಕಟ್ಟೆಯ ನಿರ್ಮಾಣ ವಿಶ್ವೇಶ್ವರಯ್ಯನವರ ಮಹಾನ್ ಸಾಧನೆಯಾಗಿದೆ. ಮಂಡ್ಯ ಜಿಲ್ಲೆ ತನ್ನ ಕೃಷಿ ಸಮೃದ್ಧಿಗೆ ಅವರಿಗೆ ಋಣಿಯಾಗಿದೆ. 1913ರಲ್ಲಿ ಮೈಸೂರು ಅರಸಿಕೆರೆ ಮತ್ತು ಬೌರಿಂಗ್‌ಪೇಟೆ ಕೋಲಾರ ರೈಲ್ವೆ ಮಾರ್ಗಗಳನ್ನು ಹಾಕಲಾಯಿತು.
ಪರಿಹಾರ ಕಾರ್ಯಗಳು
ಸರ್.ಎಂ.ವಿಶ್ವೇಶ್ವರಯ್ಯನವರ ದಿವಾನಗಿರಿ ಅವಧಿಯಲ್ಲಿ ಪ್ರಥಮ ಜಾಗತಿಕ ಯುದ್ಧ (1914-18) ವು ಆರಂಭವಾಯಿತು. ಇದು ಆಹಾರ ವಸ್ತುಗಳ ತೀವ್ರ ಕೊರತೆಗೆ ಕಾರಣವಾಯಿತು. ಸರ್.ಎಂ.ವಿಶ್ವೇಶ್ವರಯ್ಯನವರು ನ್ಯಾಯಬೆಲೆ ಅಂಗಡಿಗಳನ್ನು ತೆರೆದು, ಆಹಾರ ಧಾನ್ಯಗಳ ರಫ್ತನ್ನು ನಿಲ್ಲಿಸಿ ಮತ್ತು ಮಾರಾಟದ ದರಗಳನ್ನುನಿಗದಿ ಪಡಿಸುವಂತಹ ಪರಿಹಾರ ಕ್ರಮಗಳನ್ನು ಕೈಗೊಂಡರು. ಸರ್. ಎಂ.ವಿಶ್ವೇಶ್ವರಯ್ಯನವರು 1918 ರಲ್ಲಿ ರಾಜಿನಾಮೆ ನೀಡಿದರು. ಬ್ರಿಟಿಷ್ ಸರಕಾರವು ಇವರ ದಕ್ಷತೆ ಮತ್ತು ಸಮರ್ಪಣಾ ಸೇವೆಗಾಗಿ 'ಸರ್' ಎಂಬ ಬಿರುದನ್ನು ನೀಡಿತು. ತಮ್ಮ ರಾಜೀನಾಮೆ ನಂತರವೂ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸಿದರು. 1955 ರಲ್ಲಿ ಭಾರತ ಸರ್ಕಾರವು
ಅವರಿಗೆ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗರು. 101 ವರ್ಷಗಳು ಬದುಕಿದ ಇವರು 1962 ರಲ್ಲಿ ನಿಧನ ಹೊಂದಿದರು. ಇವರು ಹಲವು ಪುಸ್ತಕಗಳನ್ನು ರಚಿಸಿದರು, ಅವುಗಳೆಂದರೆ, 'ಎ ವಿಜನ್ ಆಫ್ ಪ್ರಾಸ್ಪರಸ್ ಮೈಸೂರ್' 'ರೀಕನ್ ಸ್ಟಕ್ಸಿಂಗ್ ಇಂಡಿಯಾ', 'ರಾಪಿಡ್ ಡೆವೆಲಪ್‌ಮೆಂಟ್ ಆಫ್ ಇಂಡಸ್ಟ್ರೀಸ್', 'ಪ್ಲಾನ್‌ಡ್ ಎಕಾನಮಿ ಫಾರ್ ಇಂಡಿಯಾ', 'ಮೆಮೊಯರ್ಸ್' ಆಫ್ ಮೈ ವರ್ಕಿಂಗ್ ಲೈಫ್' (ಆತ್ಮ ಚರಿತ್ರೆ) ಇತ್ಯಾದಿ.
1926 ರಿಂದ 1941 ರವರೆಗೆ ದಿವಾನರಾಗಿ ಸೇವೆಗೈದ ಸರ್.ಮಿರ್ಜಾ ಇಸ್ಮಾಯಿಲ್‌ರನ್ನು ಸಹ ಆಧುನಿಕ
ಮೈಸೂರಿನ ನಿರ್ಮಾಪಕರಲ್ಲೊಬ್ಬರೆಂದು ಪರಿಗಣಿಸಲಾಗಿದೆ. ಇವರು ಕೈಗಾರಿಕೆಗಳ ಅಭಿವೃದ್ಧಿಗೆ ಪ್ರೋತ್ಸಾಹಿಸಿ ಹಲವಾರು ಕೈಗಾರಿಕೆಗಳನ್ನು ಆರಂಭಿಸಿದರು. ಬೆಂಗಳೂರನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್), ಗಾಜಿನ ಕಾರ್ಖಾನೆ, ಪಿಂಗಾಣಿ ಪಾತ್ರ ಕಾರ್ಖಾನೆ, ಬೆಳಗೊಳದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ, ಶಿವಮೊಗ್ಗಾದಲ್ಲಿ ಬೆಂಕಿಕಡ್ಡಿ ಕಾರ್ಖಾನೆ ಮತ್ತು ಭದ್ರಾವತಿಯಲ್ಲಿನ ಉಕ್ಕು ಹಾಗೂ ಕಾಗದ ಕಾರ್ಖಾನೆಗಳನ್ನು ಇವರು ಸ್ಥಾಪಿಸಿದರು. ಜಕ್ಕೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಿದರು. ರೇಡಿಯೋ ಕೇಂದ್ರಗಳನ್ನು ಬೆಂಗಳೂರು ಮತ್ತು ಮೈಸೂರುಗಳಲ್ಲಿ ಆರಂಭಿಸಲಾಯಿತು..
ಇವರು ಗ್ರಾಮೀಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಬದನವಾಳದಲ್ಲಿ ಖಾದಿ ಉತ್ಪಾದನೆಯ ಕೇಂದ್ರವನ್ನು ಸ್ಥಾಪಿಸಿದರು. ಇಶ್ವಿನ್ ಕಾಲುವೆ ನಿರ್ಮಿಸಿ ಮಂಡ್ಯ ಜಿಲ್ಲೆಯ 1,20,000 ಎಕರ ಭೂಮಿಗೆ ನೀರನ್ನು ಒದಗಿಸಲಾಯಿತು. ಇವರಲ್ಲಿ ಸೌಂದರ್ಯ ಪ್ರಜ್ಞೆ ಇದ್ದು, ಮೈಸೂರನ್ನು ಹೂ ತೋಟಗಳು ಮತ್ತು ಉದ್ಯಾನವನಗಳ ನಗರವನ್ನಾಗಿಸಿದರು. ಬೆಂಗಳೂರು ಮತ್ತು ಇತರ ನಗರಗಳಲ್ಲಿಯೂ ಉದ್ಯಾನ ಮತ್ತು ಹೂತೋಟಗಳನ್ನು ನಿರ್ಮಿಸಿದರು. ಕೆ.ಆರ್.ಎಸ್.ನಲ್ಲಿ ಬೃಂದಾವನ ಉದ್ಯಾನವನವನ್ನು ನಿರ್ಮಿಸಿದರು. ಇವರ ಅವಧಿಯಲ್ಲಿಯೇ ಮೈಸೂರು ಮಹಾರಾಜರ ಆಡಳಿತದ ರಜತ ಮಹೋತ್ಸವವನ್ನು ಆಚರಿಸಲಾಯಿತು. ಇದರ ಸ್ಮರಣೆಗಾಗಿ ಆಸ್ಪತ್ರೆಗಳು, ದೇವಾಲಯಗಳು ಮತ್ತು ಗ್ರಂಥಾಲಯಗಳನ್ನು ನಿರ್ಮಿಸಲಾಯಿತು. ಬೆಂಗಳೂರಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ಶಸ್ತ್ರಚಿಕಿತ್ಸೆ ಸಂಸ್ಥೆ (NIMHANS National Institute of Mental Health and Neuro Surgery) ಕೋಲಾರದಲ್ಲಿ ನರಸಿಂಹರಾಜ ಆಸ್ಪತ್ರೆ, ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆ ಮತ್ತು ಮೈಸೂರಿನಲ್ಲಿ ವಾಣಿವಿಲಾಸ ಆಸ್ಪತ್ರೆಗಳನ್ನು ಸ್ಥಾಪಿಸಲಾಯಿತು.
ಶಿಕ್ಷಣದ ಪ್ರೋತ್ಸಾಹಕ್ಕಾಗಿ ಪ್ರಾಥಮಿಕ ಶಿಕ್ಷಣ ಕಾಯ್ದೆಯನ್ನು ಜಾರಿಗೊಳಿಸಿ, ಖಾಸಗಿ ಶಾಲೆಗಳಿಗೆ ಅನುದಾನವನ್ನು ನೀಡಲಾಯಿತು. ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ಆರಂಭಿಸಲಾಯಿತು. ಹೀಗೆ ಮೈಸೂರನ್ನು ಅಭಿವೃದ್ಧಿಪಡಿಸುವಲ್ಲಿ ಮಿರ್ಜಾ ಇಸ್ಮಾಯಿಲ್‌ರು ಮಹತ್ವದ ಪಾತ್ರ ವಹಿಸಿದ್ದಾರೆ.