ಯಾರನ್ನು 'ಗಡಿನಾಡ ಗಾಂಧಿ' ಎಂದು ಕರೆಯಲಾಗುತ್ತದೆ?
ಎ) ಬಾಲ ಗಂಗಾಧರ್ ತಿಲಕ್
ಬಿ) ಅಬ್ದುಲ್ ಗಫಾರ್ ಖಾನ್
ಸಿ) ವಿನೋಬಾ ಭಾವೆ
ಡಿ) ಭಗತ್ ಸಿಂಗ್
(ಉತ್ತರ:- ಅಬ್ದುಲ್ ಗಫಾರ್ ಖಾನ್
ವಿವರಣೆ:- 'ಗಡಿನಾಡ ಗಾಂಧಿ' ಎಂದು ಖಾನ್ ಅಬ್ದುಲ್ ಗಫಾರ್ಖಾನ್ ಅವರನ್ನು ಕರೆಯಲಾಗುತ್ತದೆ. ಭಾರತೀಯ ಸ್ವತಂತ್ರ ಚಳುವಳಿಯಲ್ಲಿ ಪ್ರಸಿದ್ಧರಾಗಿದ್ದ ಗಫರ್ ಅವರು ಜಾತ್ಯಾತೀತ ಭಾರತದ ಕನಸನ್ನು ಕಂಡಿದ್ದರು. ಇವರು ಸುರ್ಕ್‌ಪೋಪ್ ಅಥವಾ ಕೆಂಪಂಗಿ ಎಂಬ ಸಾಮಾಜಿಕ ಸುಧಾರಣಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇವರಿಗೆ 1987ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. * ಬಾಲಗಂಗಾಧರ ತಿಲಕ್ ಅವರನ್ನು ಲೋಕಮಾನ್ಯ ಎಂದೇ ಕರೆಯಲಾಗಿದೆ. ಇವರು ಸ್ವತಂತ್ರ ಹೋರಾಟ ಚಳುವಳಿ ಸಂದರ್ಭದಲ್ಲಿ ನೀಡಿದ ಪ್ರಮುಖ ಘೋಷಣೆ ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು ನಾನು ಅದನ್ನು ಹೋರಾಟದ ಮೂಲಕ ಪಡದೇ ತೀರುತ್ತೇನೆ. ಗೀತ ರಹಸ್ಯ ಎಂಬುದು ತಿಲಕ್ ಅವರ ಪ್ರಮುಖ ಕೃತಿಯಾಗಿದೆ. ವಿನೋಭಾ ಭಾವೆ ಅವರನ್ನು ಭಾರತದ ರಾಷ್ಟ್ರೀಯ ಶಿಕ್ಷಕ ಮತ್ತು ಆಚಾರ್ಯ ಎಂದೇ ಕರೆಯಲಾಗಿದೆ. * ಭಗತ್ ಸಿಂಗ್ ಅವರನ್ನು ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ಕಾರಿ ಎನ್ನಲಾಗಿದೆ. ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದವರು. 1907 ಸೆಪ್ಟೆಂಬರ್ 28ರಂದು ಜನಿಸಿದ್ದ ಭಗತ್ ಸಿಂಗ್ ಅವರನ್ನು 1931 ಮಾರ್ಚ್ 23 ರಂದು ಗಲ್ಲಿಗೇರಿಸಲಾಗಿತ್ತು.
ವಿಶೇಷತೆ ವ್ಯಕ್ತಿಯ ಹೆಸರು
ಅಮೆರಿಕಾದ ಗಾಂಧಿ :-ಮಾರ್ಟಿನ್ ಲೂಥರ್ ಕಿಂಗ್
ಆಫ್ರಿಕಾದ ಗಾಂಧಿ :-ನೆಲ್ಸನ್ ಮಂಡೇಲಾ
ಕರ್ನಾಟಕದ ಗಾಂಧಿ :- ಹರ್ಡೇಕರ್ ಮಂಜಪ್ಪ
ಗಡಿನಾಡ ಗಾಂಧಿ :- ಖಾನ್ ಅಬ್ದುಲ್ ಗಫರ್ ಖಾನ್
No comments:
Post a Comment