national science day in Kannada

ರಾಷ್ಟ್ರೀಯ ವಿಜ್ಞಾನ ದಿನವನ್ನು ಎಂದು ಆಚರಿಸಲಾಗುವುದು?

ಎ) ಫೆಬ್ರವರಿ 28
ಬಿ) ಮಾರ್ಚ್ 14
ಸಿ) ಏಪ್ರಿಲ್ 2
ಡಿ) ಮೇ 2

ಉತ್ತರ:- ಫೆಬ್ರವರಿ 28


ವಿವರಣೆ:- ಸರ್.ಸಿ.ವಿ.ರಾಮನ್ ಅವರು 1928 ಫೆಬ್ರವರಿ 28 ರಂದು ಬೆಳಕಿನ ಚದುರುವಿಕೆ ಸಂಬಂಧಿಸಿದಂತೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಂಶೋಧನೆ ನಡೆಸಿದರು. ಈ ಹಿನ್ನಲೆಯಲ್ಲಿ ಫೆಬ್ರವರಿ 28ನ್ನು ಪ್ರತಿವರ್ಷ 1987ರಿಂದಲೂ ಪ್ರತಿವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

2020ರ ಫೆಬ್ರವರಿ 28 ರಂದು Women In Science ಎಂಬ ಧೈಯವಾಕ್ಯದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. 2021 ಫೆಬ್ರವರಿ 28 do Future of STI: Impacts On Education, Skills, and Work ಎಂಬ ಧೈಯವಾಕ್ಯದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ರಾಮನ್ ಅವರು ನಡೆಸಿದ ಸಂಶೋಧನೆಗೆ 1930ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 1954 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ” ನೀಡಲಾಗಿದೆ.

ಭಾರತೀಯ ಸಂಖ್ಯಾಶಾಸ್ತ್ರ ಪಿತಾಮಹರಾದ ಪ್ರಶಾಂತ್ ಚಂದ್ರ ಮಹಲನೋಬಿಸ್ ಅವರ ಜನ್ಮದಿನಾಚರಣೆಯ ಅಂಗವಾಗಿ ಜೂನ್ 29ನ್ನು ಸಂಖ್ಯಾಶಾಸ್ತ್ರ ದಿನವನ್ನಾಗಿ ಆಚರಿಸಲಾಗುತ್ತದೆ. ಇವರು 1893ರ ಜೂನ್ 29ರಂದು ಕೋಲ್ಕತ್ತಾದಲ್ಲಿ ಜನಿಸಿದ್ದರು. ಭಾರತದ ಮೊದಲ ಯೋಜನಾ ಆಯೋಗದ ಸದಸ್ಯರಾಗಿ ಹಾಗೂ 1956ರಿಂದ 1961ರ ಅವಧಿಯ 2ನೇ ಪಂಚವಾರ್ಷಿಕ ಯೋಜನೆ ಅಥವಾ ಕೈಗಾರಿಕಾ ಯೋಜನೆಯ ಶಿಲ್ಪಿಯಾಗಿದ್ದರು.

ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 22ನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ. ಶ್ರೀನಿವಾಸ್ ರಾಮಾನುಜಮ್ ಅವರು 1887ರ ಡಿಸೆಂಬರ್ 22 ರಂದು ತಮಿಳುನಾಡಿನ ಈರೋಡ್‌ನಲ್ಲಿ ಜನಿಸಿದ್ದರು. ಅದ್ದರಿಂದ ಇವರ ಹುಟ್ಟುಹಬ್ಬದ ನೆನಪಿಗಾಗಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. 7. ಈ ದಿನದಂದು 32 ವರ್ಷದೊಳಗಿನ ಯುವ ಗಣಿತ ಶಾಸ್ತ್ರಜ್ಞರ ಕೊಡುಗೆಯನ್ನು ಗುರುತಿಸಿ ತಮಿಳುನಾಡಿನ ತಂಜಾವೂರಿನ ಸಸ್ತ ವಿವಿಯು ಸಸ್ತ್ರ ಪ್ರಶಸ್ತಿಯನ್ನು ನೀಡುತ್ತದೆ. ಈ ಪ್ರಶಸ್ತಿಯನ್ನು ಭಾರತ ಗಣಿತ ಶಾಸ್ತ್ರದ ನೊಬೆಲ್ ಎನ್ನಲಾಗಿದೆ. 1729 ಸಂಖ್ಯೆಯನ್ನು ರಾಮಾನುಜಂ ಮ್ಯಾಜಿಕ್ ನಂಬರ್ ಎನ್ನುವರು.
Post a Comment (0)
Previous Post Next Post