ಹೀಥೋ ವಿಮಾನ ನಿಲ್ದಾಣವಿರುವ ಸ್ಥಳ
ಎ) ಬೀಜಿಂಗ್, ಚೀನಾ
ಬಿ) ಚಿಕಾಗೋ ಯು ಎಸ್
ಸಿ) ಲಂಡನ್, ಯುಕೆ
ಡಿ) ಟೋಕಿಯೋ, ಜಪಾನ್
ಉತ್ತರ:-ಲಂಡನ್, ಯುಕೆ
ವಿವರಣೆ:- ಹೀಥೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಲಂಡನ್‌ನಲ್ಲಿದೆ. ಇದು ವಿಶ್ವದ 2ನೇ ಅತಿ ಜನಭರಿತ ವಿಮಾನ ನಿಲ್ದಾಣವಾಗಿದೆ. ಜಪಾನ್‌ನ ಟೋಕಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹನದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಕರೆಯಬಹುದು.
*ಅಮೆರಿಕಾದ ಚಿಕಾಗೋ ಅಂತರಾಷ್ಟ್ರೀಯ ನಿಲ್ದಾಣದ ಹೆಸರು ಓಹಾರೆ. ಭಾರತದ ನವದೆಹಲಿಯಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
2020 ಅಂಕಿಅಂಶದ ಪ್ರಕಾರ ಜಗತ್ತಿನಲ್ಲಿ ಚೀನಾದ ಗುವಾಂಗ್‌ಜವ್ ಬಯೂನ್ ವಿಮಾನ ನಿಲ್ದಾಣ ಜನಭರಿತ ವಿಮಾಣ ನಿಲ್ದಾಣವಾಗಿದೆ. ನಂತರದಲ್ಲಿ ಜಾರ್ಜಿಯಾದ ಅಟ್ಲಾಂಟ ವಿಮಾನ ನಿಲ್ದಾಣ ಸ್ಥಾನ ಪಡೆದಿದೆ. ಭಾರತದ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ 16ನೇ ಸ್ಥಾನದಲ್ಲಿದೆ. 2021ರ ಜೂನ್ 8 ರಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿವ್ವಳ ಇಂಧನ ತಟಸ್ಥ ಸ್ಥಾನಮಾನ ಲಭಿಸಿದೆ. ಇದು 2020 21 ರ ವರ್ಷದಲ್ಲಿ ಸುಮಾರು 22 ಲಕ್ಷ ಯೂನಿಟ್ ಇಂಧನ ಉಳಿತಾಯ ಮಾಡಿದೆ.
No comments:
Post a Comment