ಸ್ವಾತಂತ್ರ್ಯ ಹೋರಾಟ ಕುರಿತ ಪ್ರಶ್ನೆಗಳ ಸಂಗ್ರಹ

 



1. ಈ ಕೆಳಗಿನಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಯಾರು ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತರಾಗಿದ್ದರು..?

1) ವಿನಾಯಕ್ ದಾಮೋದರ್ ಸಾವರ್ಕರ್

2) ಮಹಾತ್ಮಾ ಗಾಂಧಿ

3) ಬಾಲ ಗಂಗಾಧರ್ ತಿಲಕ್

4) ಮೋತಿಲಾಲ್ ನೆಹರು


2. ಈ ಕೆಳಗಿನ ಯಾವ ಸ್ವಾತಂತ್ರ್ಯ ಹೋರಾಟಗಾರರನ್ನು ಭಾರತದ ಅನಧಿಕೃತ ರಾಯಭಾರಿ (Unofficial Ambassador of India) ಎಂದೂ ಕರೆಯುತ್ತಾರೆ..?

1) ತಾಂಟಿಯಾ ಟೋಪೆ

2) ಕುನ್ವರ್ ಸಿಂಗ್

3) ದಾದಾಭಾಯಿ ನಾರೋಜಿ

4) ಡಬ್ಲ್ಯೂಸಿ ಬ್ಯಾನರ್ಜಿ


3. ಈ ಕೆಳಗಿನವರಲ್ಲಿ ಯಾರನ್ನು ಬ್ರಿಟಿಷರು ಭಾರತೀಯ ಅಶಾಂತಿಯ ಪಿತಾಮಹ (Father of Indian Unrest) ಎಂದು ಪರಿಗಣಿಸಿದ್ದರು..?

1) ಗೋಪಾಲ ಕೃಷ್ಣ ಗೋಖಲೆ

2) ಲೋಕಮಾನ್ಯ ತಿಲಕ್

3)ಲಾಲಾ ಲಜಪತ್ ರಾಯ್

4) ಮದನ್ ಮೋಹನ್ ಮಾಳವೀಯ


4. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಂತರ ಭಾರತದ 2ನೇ ಗೃಹ ಸಚಿವರಾದವರು ಯಾರು..?

1) ಅಬುಲ್ ಕಲಾಂ ಆಜಾದ್

2) ಮದನ್ ಮೋಹನ್ ಮಾಳವೀಯ

3) ಸಿ. ರಾಜಗೋಪಾಲಾಚಾರಿ

4) ಮೇಲಿನ ಯಾವುದೂ ಅಲ್ಲ



 

5. ಬಾಲ ಗಂಗಾಧರ ತಿಲಕರು ಆರಂಭಿಸಿದ ಕೇಸರಿ ಪತ್ರಿಕೆ ಯಾವ ಭಾಆಶೆಯಲ್ಲಿ ಪ್ರಕಟವಾಯಿತು..?

1) ಮರಾಠಿ

2) ಹಿಂದಿ

3) ಆಂಗ್ಲ

4) ಮರಾಠಿ ಮತ್ತು ಆಂಗ್ಲ



 

6. ಗೋಪಾಲ ಕೃಷ್ಣ ಗೋಖಲೆಯವರು 1911 ರಲ್ಲಿ ಆರಂಭಿಸಿದ ‘ಹಿತವಾದ ‘ಪತ್ರಿಕೆ ಮೊದಲು ಪ್ರಕಟವಾದದ್ದು ಎಲ್ಲಿ..?

1) ಮುಂಬೈ

2) ಪುಣೆ

3) ಶೋಲಾಪುರ

4) ನಾಗ್ಪುರ


7. ‘ಡು ಆರ್ ಡೈ’ (ಮಾಡು ಇಲ್ಲವೇ ಮಡಿ) ಭಾರತದ ಸ್ವಾತಂತ್ರ್ಯ ಹೋರಾಟದ ಅತ್ಯಂತ ಶಕ್ತಿಶಾಲಿ ಘೋಷಣೆಗಳಲ್ಲಿ ಒಂದಾಗಿದೆ. ಅದನ್ನು ಕೊಟ್ಟವರು ಯಾರು?

1)ಗಾಂಧೀಜಿ

2)ಜೆ ಎಲ್ ನೆಹರು

3)ಬಾಲ ಗಂಗಾಧರ ತಿಲಕ್

4)ಸುಭಾಷ್ ಚಂದ್ರ ಬೋಸ್


8.  ಭಾರತದ ಯುವಕರಿಗೆ ಭಾರತದ ಸಂಸ್ಕೃತಿಯ ಬಗ್ಗೆ ಬೋಧನೆಗಳನ್ನು ನೀಡಲು ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದವರು ಯಾರು?

1)ದಾದಾಭಾಯಿ ನವರೋಜಿ

2) ಲೋಕಮಾನ್ಯ ತಿಲಕ್

3)ಮೋತಿಲಾಲ್ ನೆಹರು

4)ಸಿ ರಾಜಗೋಪಾಲಾಚಾರಿ


9. 1919 ರಲ್ಲಿ ಮೋತಿಲಾಲ್ ನೆಹರು ಈ ಕೆಳಗಿನ ಯಾವ ಪತ್ರಿಕೆ ಆರಂಭಿಸಿದರು?

1)ವಾಯ್ಸ್ ಆಫ್ ಇಂಡಿಯಾ

2)ದಿ ಲೀಡರ್

3)ಯಂಗ್ ಇಂಡಿಯಾ

4)ಇಂಡಿಪೆಂಡೆಂಟ್


10. ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಮದನ್ ಮೋಹನ್ ಮಾಳವೀಯ ಅವರು ಯಾವ ವರ್ಷದಲ್ಲಿ ಸ್ಥಾಪಿಸಿದರು.. ?

1) 1914

2)1916

3)1919

4)1920


11. ಭಾರತಕ್ಕೆ ಪೂರ್ಣ ಪ್ರಭುತ್ವ ಸ್ಥಾನಮಾನ (full dominion status)ವನ್ನು ಶಿಫಾರಸು ಮಾಡುವ ಸಂವಿಧಾನದ ಕರಡು ರಚಿಸಿದ ಎಲ್ಲ ಪಕ್ಷಗಳ ಸಮ್ಮೇಳನದ ಅಧ್ಯಕ್ಷರು ಯಾರು..?

1) ಮೋತಿಲಾಲ್ ನೆಹರು

2) ದಾದಾಭಾಯಿ ನವರೋಜಿ

3) ಲಾಲಾ ಲಜಪತ್ ರಾಯ್

4) ರಾಜಗೋಪಾಲಾಚಾರಿ


12. 1923ರಲ್ಲಿ, ಈ ಕೆಳಗಿನವರಲ್ಲಿ ಯಾರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು?

1) ಮೋತಿಲಾಲ್ ನೆಹರು

2) ಅಬುಲ್ ಕಲಾಂ ಆಜಾದ್

3) ಲಾಲಾ ಲಜಪತ್ ರಾಯ್

4) ಎಂ ಎಂ ಮಾಳವೀಯ


13. 1905 ರಲ್ಲಿ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಯಾರು ಸ್ಥಾಪಿಸಿದರು, ಶಿಕ್ಷಣ, ನೈರ್ಮಲ್ಯ, ಆರೋಗ್ಯ ರಕ್ಷಣೆ ಹಾಗೂ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುವ ಗುರಿ ಹೊಂದಿದ್ದರು..?

1) ಲೋಕಮಾನ್ಯ ತಿಲಕ್

2) ಗೋಪಾಲ ಕೃಷ್ಣ ಗೋಖಲೆ

3) ಗಡಿನಾಡು ಗಾಂಧಿ

4) ಲಾಲಾ ಲಜಪತ್ ರಾಯ್


14. ಪಕ್ಷ ಮತ್ತು ಅದರ ಸಂಸ್ಥಾಪಕರೊಂದಿಗೆ ಹೊಂದಿಸಿ

1. ಸ್ವತಂತ್ರ ಪಕ್ಷ                         –         ಎ. ಲಾಲಾ ಲಜಪತ್ ರಾಯ್

2. ಕಾಂಗ್ರೆಸ್ ಸ್ವತಂತ್ರ ಪಕ್ಷ     –       ಬಿ. ಮೋತಿಲಾಲ್ ನೆಹರು

3. ಸ್ವರಾಜ್ ಪಾರ್ಟಿ                  –    ಸಿ. ಸಿ ರಾಜಗೋಪಾಲಾಚಾರಿ


1) 1-ಸಿ; 2-ಬಿ; 3-ಸಿ

2) 1-ಬಿ; 2-ಎ; 3-ಸಿ

3) 1-ಎ; 2-ಸಿ; 3-ಬಿ

4) 1-ಸಿ; 2-ಎ; 3-ಬಿ


15. ಮದನ್ ಮೋಹನ್ ಮಾಳವೀಯ ತಮ್ಮ ಪ್ರಸಿದ್ಧ ಪತ್ರಿಕೆ ‘ದಿ ಲೀಡರ್’ ಅನ್ನು ಯಾವ ಸ್ಥಳದಿಂದ ಪ್ರಕಟಿಸಿದರು.. ?

1) ಅಲಹಾಬಾದ್

2) ಬನಾರಸ್

3) ಅಲಿಗಡ್

4) ದೆಹಲಿ


16. ಯಾರ ಸಾವು 1920ರಲ್ಲಿ ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿತು..?

1) ದಾದಾಭಾಯಿ ನವರೋಜಿ

2) ಲೋಕಮಾನ್ಯ ತಿಲಕ್

3) ಜಿ ಕೆ ಗೋಖಲೆ

4) ಮೋತಿಲಾಲ್ ನೆಹರು


17. ಬಾರ್ಡೋಲಿ ಸತ್ಯಾಗ್ರಹದ ನಂತರ, ವಲ್ಲಭಭಾಯಿ ಪಟೇಲರಿಗೆ ‘ಸರ್ದಾರ್’ ಬಿರುದನ್ನು ನೀಡಿದವರ ಯಾರು..?

1) ಜವಾಹರಲಾಲ್ ನೆಹರು

2) ಮೋತಿಲಾಲ್ ನೆಹರು

3) ಮಹಾತ್ಮ ಗಾಂಧಿ

4) ಮೌಲಾನಾ ಅಬುಲ್ ಕಲಾಂ ಆಜಾದ್


18. ಈ ಕೆಳಗಿನ ಯಾವ ನಾಯಕರೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸಮೀಕರಿಸಲಾಗಿದೆ?

1) ಮಾರ್ಟಿನ್ ಲೂಥರ್

2) ಬಿಸ್ಮಾರ್ಕ್

3) ಕಾವೂರ್

4) ಗರಿಬಾಲ್ಡಿ


19. ಅರುಣಾ ಅಸಫ್ ಅಲಿ ಈ ಕೆಳಗಿನವುಗಳಲ್ಲಿ ಯಾವುದರೊಂದಿಗೆ ಸಂಬಂಧ ಹೊಂದಿದ್ದರು?

1) ಬಾರ್ಡೋಲಿ ಸತ್ಯಾಗ್ರಹ

2) ನಾಗರಿಕ ಅಸಹಕಾರ ಚಳುವಳಿ

3) ಖಿಲಾಫತ್ ಚಳುವಳಿ

4) ಭಾರತ ಬಿಟ್ಟು ತೊಲಗಿ ಚಳುವಳಿ


20. ಹೋಮ್ ರೂಲ್ ಲೀಗ್ ಅನ್ನು ಆರಂಭಿಸಿದವರು

1) ಎಂ ಕೆ ಗಾಂಧಿ

2) ಬಿ. ಜಿ. ತಿಲಕ್

3) ರಾನಡೆ

4) ವೀರ ಸಾವರ್ಕರ್


21. ಈ ಕೆಳಗಿನ ನಾಯಕರಲ್ಲಿ ಯಾರು ಲೋಖಿತ್ವಾಡಿ ((Lokhitwadi) ಎಂದು ಜನಪ್ರಿಯರಾಗಿದ್ದರು?

1) ಗೋಪಾಲ ಕೃಷ್ಣ ಗೋಖಲೆ

2) ಗೋಪಾಲ್ ಹರಿ ದೇಶಮುಖ

3) ಫೆರೋಜಾ ಮೆಹ್ತಾ

4) ಬಾಲ ಗಂಗಾಧರ ತಿಲಕ್


22. ಈ ಕೆಳಗಿನವುಗಳಲ್ಲಿ ಯಾರು ‘ಫಾರ್ವರ್ಡ್ ಬ್ಲಾಕ್’ ಹೆಸರಿನ ಪಕ್ಷವನ್ನು ಸ್ಥಾಪಿಸಿದರು?

1) ಸುಭಾಷ್ ಚಂದ್ರ ಬೋಸ್

2) ಸರ್ದಾರ್ ಭಗತ್ ಸಿಂಗ್

3) ಚಂದ್ರಶೇಖರ್ ಆಜಾದ್

4) ಜೆ ಎಲ್ ನೆಹರು


23. ಕಾಂಗ್ರೆಸ್‌ನ ಅಧ್ಯಕ್ಷತೆ ವಹಿಸಿದ ಮೊದಲ ಭಾರತೀಯ ಮಹಿಳೆ ಯಾರು?

1) ರಾಜ್ ಕುಮಾರಿ ಅಮೃತ್ ಕೌರ್

2) ಆನಿ ಬೆಸೆಂಟ್

3) ವಿಜಯಲಕ್ಷ್ಮಿ ಪಂಡಿತ್

4) ಸರೋಜಿನಿ ನಾಯ್ಡು


24. “ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂದು ಯಾರು ಹೇಳಿದರು?

1) ಮಹಾತ್ಮ ಗಾಂಧಿ

2) ಬಾಲ ಗಂಗಾಧರ ತಿಲಕ್

3) ಸುಭಾಷ್ ಚಂದ್ರ ಬೋಸ್

4) ಭಗತ್ ಸಿಂಗ್


25. ಮಹಾತ್ಮ ಗಾಂಧಿಯವರ ಒಂದು ಕಾಲದ ಸಹವರ್ತಿ, ಗಾಂಧೀಜಿಯವರಿಂದ ಬೇರ್ಪಟ್ಟರು ಮತ್ತು ‘ಸ್ವಾಭಿಮಾನ ಚಳುವಳಿ’ (self-respect movement) ಎಂಬ ಆಮೂಲಾಗ್ರ ಚಳುವಳಿಯನ್ನು ಆರಂಭಿಸಿದರು ಅವರು ಯಾರು?

1) ಪಿ.ತ್ಯಾಗರಾಜ ಶೆಟ್ಟಿ

1) ಛತ್ರಪತಿ ಮಹಾರಾಜ್

1) ಇ.ವಿ.ರಾಮಸ್ವಾಮಿ ನಾಯ್ಕರ್

1) ಜ್ಯೋತಿರಾವ್ ಗೋವಿಂದರಾವ್ ಫುಲೆ


  # ಉತ್ತರಗಳು :

1. 2) ಮಹಾತ್ಮಾ ಗಾಂಧಿ

2. 3) ದಾದಾಭಾಯಿ ನಾರೋಜಿ

3. 2) ಲೋಕಮಾನ್ಯ ತಿಲಕ್

4. 3) ಸಿ. ರಾಜಗೋಪಾಲಾಚಾರಿ

5. 1) ಮರಾಠಿ

6. 4) ನಾಗ್ಪುರ

7. 1)ಗಾಂಧೀಜಿ

8. 2) ಲೋಕಮಾನ್ಯ ತಿಲಕ್

9. 4)ಇಂಡಿಪೆಂಡೆಂಟ್

10. 2)1916

11. 1) ಮೋತಿಲಾಲ್ ನೆಹರು

12. 2) ಅಬುಲ್ ಕಲಾಂ ಆಜಾದ್

13. 2) ಗೋಪಾಲ ಕೃಷ್ಣ ಗೋಖಲೆ

14. 4) 1-ಸಿ; 2-ಎ; 3-ಬಿ

15. 1) ಅಲಹಾಬಾದ್

16. 2) ಲೋಕಮಾನ್ಯ ತಿಲಕ್

17. 3) ಮಹಾತ್ಮ ಗಾಂಧಿ

18. 2) ಬಿಸ್ಮಾರ್ಕ್

19. 4) ಭಾರತ ಬಿಟ್ಟು ತೊಲಗಿ ಚಳುವಳಿ

20. 2) ಬಿ. ಜಿ. ತಿಲಕ್

21. 2) ಗೋಪಾಲ್ ಹರಿ ದೇಶಮುಖ

22. 1) ಸುಭಾಷ್ ಚಂದ್ರ ಬೋಸ್

23. 4) ಸರೋಜಿನಿ ನಾಯ್ಡು

24. 2) ಸುಭಾಷ್ ಚಂದ್ರ ಬೋಸ್

25. 1) ಇ.ವಿ.ರಾಮಸ್ವಾಮಿ ನಾಯ್ಕರ್

Next Post Previous Post
No Comment
Add Comment
comment url