ಸಮಾಜಶಾಸ್ತದ ಉಗಮ
ಸಮಾಜಶಾಸ್ತ್ರವು ಒಂದು ಸ್ವತಂತ್ರ ಹಾಗೂ ಪ್ರತ್ಯೇಕ ಅಧ್ಯಯನ ಶಾಸ್ತ್ರವಾಗಿ ರೂಪುಗೊಳ್ಳತೊಡಗಿದ್ದು, 19ನೇ ಶತಮಾನದ ಮಧ್ಯಭಾಗದಲ್ಲಿ ಎನ್ನಬಹುದು. ನಂತರದ 50 ವರ್ಷಗಳಲ್ಲಿ ಅದು ವೈಜ್ಞಾನಿಕ ಸ್ವರೂಪವನ್ನು ಪಡೆಯಿತು. ಸಮಾಜ ವಿಜ್ಞಾನಗಳಾದ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮನಃಶಾಸ್ತ್ರ ಇತ್ಯಾದಿಗಳು ತಮ್ಮದೇ ಆದ ದೀರ್ಘ ಹಿನ್ನೆಲೆಯನ್ನು ಹೊಂದಿರಬಹುದಾದರೂ 'ಸಮಾಜ ವಿಜ್ಞಾನಗಳು' ಎಂಬ ಮಾನ್ಯತೆ ಅವುಗಳಿಗೆ ಲಭ್ಯವಾದುದು ಸಾ.ಶ 18 ಹಾಗೂ 19 ನೆಯ ಶತಮಾನಗಳಲ್ಲಿ ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿ ಮತ್ತು ಫ್ರಾನ್ಸಿನ ಮಹಾಕ್ರಾಂತಿಯ ಬೆಳವಣಿಗೆಯಿಂದ, ಸಾಶ 16 ಮತ್ತು 18 ನೆಯ ಶತಮಾನಗಳಲ್ಲಿ ಸಂಭವಿಸಿದ ಜ್ಞಾನ ಪುನರುತ್ಥಾನ, ಧಾರ್ಮಿಕ ಸುಧಾರಣೆ ಇನ್ನೂ ಮುಂತಾದ ಬೌದ್ಧಿಕ ಪ್ರಕ್ರಿಯೆಗಳು ಹಾಗೂ ಭೌತ ವಿಜ್ಞಾನಗಳಿಗೆ ಸಿಕ್ಕಿದ ಪ್ರೇರಣೆ ಸಮಾಜಶಾಸ್ತ್ರದ ಉಗಮಕ್ಕೆ ಕಾರಣವಾಗಿವೆ.
ಸಮಾಜಶಾಸ್ತ್ರದ ವ್ಯಾಪ್ತಿ : ಸಮಾಜಶಾಸ್ತ್ರವು ಮಾನವ ಸಮಾಜವನ್ನು ಅಧ್ಯಯನ ಮಾಡುತ್ತದೆ. ಈ ಶಾಸ್ತ್ರ ಮಾನವನ ಸಾಮಾಜಿಕ ಜೀವನ, ಸಾಮಾಜಿಕ ಸಂಬಂಧಗಳು, ಸಾಮಾಜಿಕ ಸಂಸ್ಥೆಗಳು ಮತ್ತು ಸಾಮಾಜಿಕ ಪ್ರಕ್ರಿಯೆಗಳನ್ನು ತನ್ನ ವ್ಯಾಪ್ತಿಯಲ್ಲಿ ಪರಿಗಣಿಸುತ್ತದೆ. ಸಮಾಜಶಾಸ್ತದ ಸ್ವರೂಪ: ಸಮಾಜ ವಿಜ್ಞಾನಗಳ ಸಮೂಹದಲ್ಲಿ ಸಮಾಜಶಾಸ್ತ್ರಕ್ಕೆ ತನ್ನದೇ ಆದ
ವಿಶಿಷ್ಟ ಸ್ಥಾನವಿದೆ. ತನ್ನ ಕೆಲವು ಗುಣಗಳಿಂದಾಗಿ ಅದು ಇತರ ಸಮಾಜ ವಿಜ್ಞಾನಗಳಿಗಿಂತ ಭಿನ್ನವಾಗಿದೆ.
ಸಮಾಜಶಾಸ್ತ್ರವು ಒಂದು ಪ್ರತ್ಯೇಕವಾದ ಮತ್ತು ಸ್ವತಂತ್ರವಾದ ಅಧ್ಯಯನ ಶಾಸ್ತ್ರವೆಂದು ಪರಿಗಣಿಸಲ್ಪಟ್ಟಿದೆ. 1. ಸಮಾಜಶಾಸ್ತ್ರವು ಒಂದು ಸಮಾಜ ವಿಜ್ಞಾನವಾಗಿದೆಯೇ ಹೊರತು ಭೌತವಿಜ್ಞಾನವಾಗಿಲ್ಲ: ಸಮಾಜಶಾಸ್ತವು ವಿಜ್ಞಾನಗಳ ಕುಟುಂಬಕ್ಕೆ ಸೇರಿದುದಾಗಿದೆಯೇ ಹೊರತು ಭೌತ ವಿಜ್ಞಾನಗಳ ಸಮೂಹಕ್ಕೆ ಸೇರಿಲ್ಲ. ಸಮಾಜ ವಿಜ್ಞಾನಗಳಲ್ಲಿ ಒಂದಾದ ಸಮಾಜಶಾಸ್ತ್ರವು ಮಾನವ ಸಮಾಜದ ಸಾಮಾಜಿಕ ಚಟುವಟಿಕೆಗಳು ಮತ್ತು ಸಾಮಾಜಿಕ ಜೀವನವನ್ನು ಅಧ್ಯಯನ ಮಾಡುತ್ತದೆ. ಹಾಗೆಯೇ ಸಮಾಜಶಾಸ್ತ್ರವು ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮನಃಶಾಸ್ತ್ರ ಮಾನವಶಾಸ್ತ್ರಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ.
ಸಮಾಜಶಾಸ್ತ್ರ ಮತ್ತು ಇತರ ಸಮಾಜವಿಜ್ಞಾನಗಳ ನಡುವಿನ ಸಂಬಂಧ ಮತ್ತು ವ್ಯತ್ಯಾಸ. ಸಮಾಜಶಾಸ್ತ್ರವು ಒಂದು ರೀತಿಯ ಸಮಾಜ ವಿಜ್ಞಾನ. ಅದು ತನ್ನದೇ ಆದ ಅಧ್ಯಯನ ವಿಷಯಗಳೊಂದಿಗೆ ಮತ್ತು ಇತರೆ ಸಮಾಜ ವಿಜ್ಞಾನಗಳ ಜೊತೆಗೆ ಸಹ
ಸಂಬಂಧವನ್ನು ಹೊಂದಿದೆ. ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರದ ನಡುವಿನ ಸಂಬಂಧ: ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರದ ನಡುವೆ ಬಹಳ ನಿಕಟವಾದ ಸಂಬಂಧವಿದೆ. ರಾಜ್ಯಶಾಸ್ತ್ರ ಮನುಷ್ಯನ ರಾಜಕೀಯ ಚಟುವಟಿಕೆಗಳನ್ನು, ರಾಜಕೀಯ ಸಂಸ್ಥೆ ಮತ್ತು ರಾಜಕೀಯ ವ್ಯವಸ್ಥೆಯ ನಡುವಿನ ವ್ಯವಹಾರಗಳನ್ನು ಅಧ್ಯಯನ ಮಾಡುತ್ತದೆ. ಸಮಾಜಶಾಸ್ತ್ರವು ರಾಜಕೀಯ ವ್ಯವಸ್ಥೆಯ ಅಡಿಯಲ್ಲಿ ಬರುವ ಸಂಘಟಿತ ಸಾಮಾಜಿಕ ಗುಂಪುಗಳು ಮತ್ತು ಸಂಸ್ಥೆಗಳನ್ನು ಅಧ್ಯಯನ ಮಾಡುತ್ತದೆ.
ಸಮಾಜಶಾಸ್ತ್ರ ಮತ್ತು ಇತಿಹಾಸದ ನಡುವಿನ ಸಂಬಂಧ : ಸಮಾಜಶಾಸ್ತ್ರ ಮತ್ತು ಇತಿಹಾಸ ತುಂಬಾ ಪರಸ್ಪರವಾಗಿವೆ. ಇತಿಹಾಸವು ಸಮಾಜದ ಹಿಂದಿನ ಬದುಕಿನ ಪುನರ್‌ರಚನೆಯಾಗಿದೆ. ಸಮಾಜಶಾಸ್ತ್ರವು ಸಮಕಾಲೀನ ಮಾನವ ಸಮಾಜದ ಪ್ರಸ್ತುತ ರಚನೆಯಾಗಿದೆ. ಸಮಕಾಲೀನ ಸಮಾಜದ ವಿವಿಧ ಸಾಮಾಜಿಕ ಘಟನೆಗಳು ಮತ್ತು ಅದರ ವಿವರಣೆಗಳನ್ನು ಇತಿಹಾಸ ಬರವಣಿಗೆಗಾರರಿಗೆ ದಾಖಲೆಯ ಜೊತೆಗೆ ವೈಜ್ಞಾನಿಕ ಮಾಹಿತಿ ನೀಡುವಲ್ಲಿ ಸಮಾಜಶಾಸ್ತ್ರ ಸಹಕಾರಿಯಾಗಿದೆ.
ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ನಡುವಿನ ಸಂಬಂಧ: ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ
ನಡುವಿನ ಸಂಬಂಧವು ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ಮಾನವಶಾಸ್ತ್ರವು ಜನಾಂಗ, ಸಮುದಾಯಗಳು
ಮತ್ತು ಸಂಸ್ಕೃತಿಯು ಹಾದು ಬಂದ ದಾರಿಯನ್ನು ತಿಳಿಸುತ್ತದೆ. ಮಾನವರ ಸಾಮಾಜಿಕ ಜೀವನದ ಸಮಗ್ರ
ಅಧ್ಯಯನದ ಮೂಲಕ ಸಮಾಜಶಾಸ್ತ್ರವು ಬಹಳ ವಿಸ್ತಾರವಾಗಿ ಬೆಳೆಯುವ ಜೊತೆಗೆ ವಿವಿಧ ಸಮಾಜಗಳ
ಬಗ್ಗೆ, ಅಲ್ಲಿನ ಸಾಮಾಜಿಕ ಸಂಸ್ಥೆಗಳ ಬಗ್ಗೆ ವಿಶ್ಲೇಷಣಾತ್ಮಕ ವಿವರಣೆಯನ್ನು ನೀಡುತ್ತದೆ.
ಸಮಾಜಶಾಸ್ತ್ರ ಮತ್ತು ಮನೋವಿಜ್ಞಾನದ ನಡುವಿನ ಸಂಬಂಧ: ಸಮಾಜಶಾಸ್ತ್ರ ಮತ್ತು ಮನೋವಿಜ್ಞಾನ ಒಂದಕ್ಕೊಂದು ಸಹಾಯಕ ವಿಜ್ಞಾನವಾಗಿವೆ. ಮನೋವಿಜ್ಞಾನ ಮಾನವನ ವರ್ತನೆಯನ್ನು ಮನೋವಿಜ್ಞಾನದ ನೆಲೆಯಲ್ಲಿ ಅಧ್ಯಯನ ಮಾಡುತ್ತದೆ. ಸಮಾಜಶಾಸ್ತ್ರ ಸಮಾಜದಲ್ಲಿ ವ್ಯಕ್ತಿಗಳ ಸಾಮಾಜಿಕ ನಡುವಳಿಕೆಗಳನ್ನು, ಸಾಮಾಜಿಕ ಸಂಸ್ಥೆಗಳ ಕಾರ್ಯಗಳನ್ನು, ವೈಜ್ಞಾನಿಕ ಅಧ್ಯಯನದ ಮೂಲಕ ಅರ್ಥೈಸುತ್ತದೆ.
ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರದ ನಡುವಿನ ಸಂಬಂಧ: ಅರ್ಥಶಾಸ್ತ್ರವು ಸಮಾಜದ ಆರ್ಥಿಕ ಚಟುವಟಿಕೆಗಳನ್ನು ಅಧ್ಯಯನ ಮಾಡಿದರೆ, ಸಮಾಜಶಾಸ್ತ್ರವು ಜನರ ಸಾಮಾಜಿಕ ಅಂಶಗಳ ಜೊತೆಗೆ ಆರ್ಥಿಕ